Asianet Suvarna News Asianet Suvarna News

ಟೀಂ ಇಂಡಿಯಾ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ಏಕದಿನ ಸರಣಿಯಿಂದ ಔಟ್‌..?

* ಗಾಯದ ಸಮಸ್ಯೆಯಿಂದ ಮೊದಲ ಏಕದಿನ ಪಂದ್ಯದಿಂದ ವಂಚಿತರಾದ ಸಂಜು ಸ್ಯಾಮ್ಸನ್

* ಮಂಡಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

* ಇದೀಗ ಎರಡನೇ ಏಕದಿನ ಪಂದ್ಯಕ್ಕೂ ಸಂಜು ಅನುಮಾನ

Team India Cricketer Sanju Samson Availability Doubtful in 2nd ODI against Sri Lanka due Injury kvn
Author
Colombo, First Published Jul 19, 2021, 11:38 AM IST

ಕೊಲಂಬೊ(ಜು.19): ಭಾರತದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಮಂಡಿ ಗಾಯಕ್ಕೆ ತುತ್ತಾದ ಕಾರಣ ಮೊದಲ ಏಕದಿನ ಪಂದ್ಯಕ್ಕೆ ಆಯ್ಕೆ ಲಭ್ಯರಿರಲಿಲ್ಲ. ಅವರ ಗಾಯದ ಪ್ರಮಾಣವನ್ನು ಪರಿಶೀಲಿಸಿ ಏಕದಿನ ಸರಣಿಯಲ್ಲಿ ಆಡಿಸುವ ಬಗ್ಗೆ ನಿರ್ಧರಿಸುವುದಾಗಿ ಬಿಸಿಸಿಐ ವೈದ್ಯಕೀಯ ತಂಡ ತಿಳಿಸಿದೆ. 

ರಾಜಸ್ಥಾನ ರಾಯಲ್ಸ್‌ ತಂಡದ ನಾಯಕರಾಗಿ ಅಬ್ಬರಿಸಿದ್ದ ಸಂಜು ಸ್ಯಾಮ್ಸನ್‌, ಲಂಕಾ ಸರಣಿಯಲ್ಲಿ ಮಿಂಚುವ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದರು. ಆದರೆ ಕೇರಳ ಮೂಲದ ಕ್ರಿಕೆಟಿಗನಿಗೆ ಗಾಯದ ಸಮಸ್ಯೆ ದೊಡ್ಡ ಆಘಾತವನ್ನು ತಂದೊಡ್ಡಿದೆ.

ಇನ್ನು ಸಂಜು ಸ್ಯಾಮ್ಸನ್‌ ಆಯ್ಕೆಗೆ ಲಭ್ಯರಿಲ್ಲದ ಕಾರಣ ಇಶಾನ್‌ ಕಿಶನ್‌ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಸಿಕ್ಕ ಅವಕಾಶವನ್ನು ಭರಪೂರವಾಗಿ ಉಪಯೋಗಿಸಿಕೊಂಡ ಇಶಾನ್‌ ಕಿಶನ್‌ ಏಕದಿನ ಪಾದಾರ್ಪಣೆ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಕೇವಲ 42 ಎಸೆತಗಳನ್ನು ಎದುರಿಸಿ ಇಶಾನ್ ಕಿಶನ್‌ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 59 ರನ್‌ ಸಿಡಿಸಿದರು. ಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್‌ಗಳ ಜಯ ಸಾಧಿಸಿದೆ.

INDvSL; ಧವನ್ ಸೈನ್ಯದ ಅಬ್ಬರಕ್ಕೆ ಲಂಕಾ ದಹನ; ಭಾರತಕ್ಕೆ 1-0 ಸರಣಿ ಮನ್ನಡೆ!

ಲಂಕಾ ಸರಣಿಯಲ್ಲಿ ಟೀಂ ಇಂಡಿಯಾ ಮೊದಲಿಗೆ 3 ಪಂದ್ಯಗಳ ಸರಣಿಯನ್ನಾಡಲಿದೆ. ಇದಾದ ಬಳಿಕ ಧವನ್‌ ಪಡೆ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಅಕ್ಟೋಬರ್ 17ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಆಡಲಿರುವ ಕಟ್ಟಕಡೆಯ ಸೀಮಿತ ಓವರ್‌ಗಳ ಸರಣಿ ಇದು ಎನಿಸಲಿದೆ.
 

Follow Us:
Download App:
  • android
  • ios