ಗಂಡು ಮಗುವಿಗೆ ತಂದೆಯಾದ ಟೀಂ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯ2017ರಲ್ಲಿ ಪಂಖುರಿ ಶರ್ಮಾ ಅವರನ್ನು ವಿವಾಹವಾಗಿದ್ದ ಕೃನಾಲ್ ಪಾಂಡ್ಯಐಪಿಎಲ್‌ನಲ್ಲಿ ಲಖನೌ ತಂಡವನ್ನು ಪ್ರತಿನಿಧಿಸುತ್ತಿರುವ ಕೃನಾಲ್ ಪಾಂಡ್ಯ
ನವದೆಹಲಿ(ಜು.25): ಟೀಂ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯ ಹಾಗೂ ಪತ್ನಿ ಪಂಖುರಿ ಅವರು ಕುಟುಂಬಕ್ಕೆ ಮತ್ತೊಬ್ಬ ಹೊಸ ಸದಸ್ಯನ ಸೇರ್ಪಡೆಯಾಗಿದ್ದು, ಈ ದಂಪತಿ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಲಖನೌ ಸೂಪರ್ ಜೈಂಟ್ಸ್‌ನ ತಾರಾ ಆಲ್ರೌಂಡರ್ ಕೃನಾಲ್ ಪಾಂಡ್ಯ, ತಮ್ಮ ಮುದ್ದಾದ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮಗುವಿನ ಹೆಸರನ್ನು ಅನಾವರಣ ಮಾಡಿದ್ದಾರೆ.
ವೃತ್ತಿಪರ ಮಾಡೆಲ್ ಆಗಿರುವ ಪಂಖುರಿ ಶರ್ಮಾ ಅವರನ್ನು 2017ರಲ್ಲಿ ಕೃನಾಲ್ ಪಾಂಡ್ಯ ವಿವಾಹವಾಗಿದ್ದರು. ಹಾರ್ದಿಕ್ ಪಾಂಡ್ಯ ಹಾಗೂ ಅವರ ಪತ್ನಿ ನತಾಶಾ ಸ್ಟಾಂಕೋವಿಚ್ ಜತೆ ಕೃನಾಲ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಾರ್ದಿಕ್ ಪಾಂಡ್ಯ ಪುತ್ರ ಅಗಸ್ತ್ಯ ಜತೆ ಕೃನಾಲ್ ಪಾಂಡ್ಯ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಕೃನಾಲ್ ಪಾಂಡ್ಯ ತಮ್ಮ ಗಂಡು ಮಗುವಿಗೆ ಕವಿರ್ ಎನ್ನುವ ಸುಂದರ ಹೆಸರನ್ನು ಇಟ್ಟಿದ್ದಾರೆ.
ಕೃನಾಲ್ ಪಾಂಡ್ಯ ಹಾಗೂ ಪಂಖುರಿ ಶರ್ಮಾ ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡಿರುವ ಕೃನಾಲ್ ಪಾಂಡ್ಯ, ತಮ್ಮ ಮಗುವಿಗೆ ಕವಿರ್ ಕೃನಾಲ್ ಪಾಂಡ್ಯ ಎಂದು ಹೆಸರಿಟ್ಟಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಕೃನಾಲ್ ಪಾಂಡ್ಯ 2018ರಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು 2021ರಲ್ಲಿ ಏಕದಿನ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ಎದುರು ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೃನಾಲ್ ಪಾಂಡ್ಯ, ಮೊದಲ ಪಂದ್ಯದಲ್ಲೇ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದರು. ಇದುವರೆಗೂ ಕೃನಾಲ್ ಪಾಂಡ್ಯ, ಭಾರತ ಪರ 19 ಟಿ20 ಹಾಗೂ ಐದು ಏಕದಿನ ಪಂದ್ಯಗಳನ್ನಾಡಿದ್ದಾರೆ.
WI vs IND: ಅಕ್ಸರ್ ಪಟೇಲ್ ಅಮೋಘ ಆಟ, ವಿಂಡೀಸ್ ವಿರುದ್ಧ 2ನೇ ಪಂದ್ಯ ಗೆದ್ದ ಭಾರತ, ಸರಣಿ ಕೈವಶ
ಇನ್ನು ಕೃನಾಲ್ ಪಾಂಡ್ಯ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೂಡಾ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಹಲವು ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾಗಿದ್ದಾರೆ. ಇನ್ನು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೃನಾಲ್ ಪಾಂಡ್ಯ, ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಕೃನಾಲ್ ಪಾಂಡ್ಯ ಇತ್ತೀಚೆಗಷ್ಟೇ ಇಂಗ್ಲೀಷ್ ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ರಾಯಲ್ ಲಂಡನ್ ಕಪ್ ಏಕದಿನ ಕ್ರಿಕೆಟ್ ಟೂರ್ನಿ ಆಡಲು ವಾರ್ವಿಕ್‌ಶೈರ್ ತಂಡದ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರಾಯಲ್ ಲಂಡನ್ ಕಪ್ ಏಕದಿನ ಕ್ರಿಕೆಟ್ ಟೂರ್ನಿಯು ಮುಂಬರುವ ಆಗಸ್ಟ್ 02ರಿಂದ 23ರ ವರೆಗೆ ನಡೆಯಲಿದೆ.
