ರಾಜ್‌ಕೋಟ್(ಮಾ.04):  ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಸೋಶಿಯಲ್ ಮಿಡಿಯಾದಲ್ಲಿ ಹೊಸ ಲುಕ್ ಫೋಟೋ ಪೋಸ್ಟ್ ಮಾಡಿದ್ದೇ ತಡ, ಅಭಿಮಾನಿಗಳು ಜಡೇಜಾ ಹೊಸ ಲುಕ್‌ಗೆ ಮಾರುಹೋಗಿದ್ದಾರೆ. ಲಾಂಗ್ ಹೇರ್‌ನಿಂದ ಸೈಡ್ ಟ್ರಿಮ್ ಮಾಡಿಸಿಕೊಂಡು ಹೊಸ ಲುಕ್‌ನಲ್ಲಿ ಜಡೇಜಾ ಕಾಣಿಸಿಕೊಂಡಿದ್ದಾರೆ.

ಮತ್ತೆ ಮತ್ತೆ ನೋಡಬೇಕೆನಿಸುವ ಸ್ಮಿತ್ ರನೌಟ್; ಜಡೇಜಾಗೂ ಅಚ್ಚು ಮೆಚ್ಚು!.

ಇದೀಗ ಹೊಸ ಲುಕ್‌ನಲ್ಲಿ ರವೀಂದ್ರ ಜಡೇಜಾ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ವಿಶ್ರಾಂತಿಯಲ್ಲಿರುವ ಜಡೇಜಾ ತಮ್ಮ ಹೇರ್‌ಸ್ಟೈಲ್ ಬದಲಿಸಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

 

ಹೆಬ್ಬರಳಿನ ಗಾಯದಿಂದ ಟೆಸ್ಟ್ ತಂಡದಿಂದ ಹೊರಗುಳಿದಿರುವ ರವೀಂದ್ರ ಜಡೇಜಾ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಜಡೇಜಾ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಟಿ20 ಸರಣಿ ವೇಳೆಗೆ ಜಡೇಚಾ ಫಿಟ್ ಆಗುವುದು ಅನುಮಾನವಾಗಿದೆ. ಆದರೆ ಏಕದಿನ ಸರಣಿಗೆ ವಾಪಸ್ ಆಗುವ ಸಾಧ್ಯತೆ ಇದೆ.