ಸಿಡ್ನಿ(ನ.30): ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಹಾರ್ದಿಕ್‌ ಪಾಂಡ್ಯ, ನಿವಾರಣೆಗಾಗಿ ವರ್ಷದ ಹಿಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಹಾರ್ದಿಕ್‌ ಬೌಲಿಂಗ್‌ನಿಂದ ದೂರವೇ ಉಳಿದಿದ್ದರು. ಇದೀಗ ಬರೋಬ್ಬರಿ 14 ತಿಂಗಳುಗಳ ಬಳಿಕ ಬೌಲಿಂಗ್‌ ಮಾಡಲಿಳಿದು ಗಮನ ಸೆಳೆದಿದ್ದಾರೆ.

ಆಸ್ಪ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಪರಿಣಾಮಕಾರಿ ಬೌಲಿಂಗ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಎರಡನೇ ಏಕದಿನ ಪಂದ್ಯದಲ್ಲಿ ವೇಗಿಗಳು ಹೆಚ್ಚಿನ ರನ್‌ ನೀಡಿದ ಪರಿಣಾಮ ಹಾರ್ದಿಕ್‌ ಬೌಲಿಂಗ್‌ ಮಾಡಲು ಇಳಿದಿದ್ದರು. 4 ಓವರ್‌ ಬೌಲಿಂಗ್‌ ಮಾಡಿದ ಹಾರ್ದಿಕ್‌ 24 ರನ್‌ ನೀಡಿ 1 ವಿಕೆಟ್‌ ಪಡೆದರು. 

ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಬಳಿಕ ಹಾರ್ದಿಕ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರದ ಟೂರ್ನಿಗಳಲ್ಲಿ ಕೇವಲ ಬ್ಯಾಟಿಂಗ್‌ ಮಾತ್ರ ಮಾಡುತ್ತಿದ್ದ ಹಾರ್ದಿಕ್‌ ಬೌಲಿಂಗ್‌ ಮಾಡುತ್ತಿರಲಿಲ್ಲ. ತಮ್ಮ ಬೆನ್ನು ಮತ್ತಷ್ಟು ಬಲವಾಗಲಿ ಎನ್ನುವ ಕಾರಣಕ್ಕೆ ಬೌಲಿಂಗ್‌ನಿಂದ ಹಾರ್ದಿಕ್‌ ದೂರ ಉಳಿದಿದ್ದರು ಎನ್ನಲಾಗಿದೆ.

ಸರಣಿ ಗೆಲುವಿನ ಬೆನ್ನಲ್ಲೇ ಆಸೀಸ್‌ಗೆ ಆಘಾತ; ಸ್ಫೋಟಕ ಬ್ಯಾಟ್ಸ್‌ಮನ್ ಟೂರ್ನಿಯಿಂದ ಔಟ್..!

ಇನ್ನು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ಮುಂಬೈ ಇಂಡಿಯನ್ಸ್‌ ಪರ ಕೂಡಾ ಒಂದೇ ಒಂದು ಓವರ್ ಬೌಲಿಂಗ್ ಮಾಡಿರಲಿಲ್ಲ. ಪಾಂಡ್ಯ ಕೇವಲ 6ರ ಎಕನಮಿಯಲ್ಲಿ ಬೌಲಿಂಗ್ ಮಾಡಿದ್ದರಿಂದ ಮುಂಬರುವ ಪಂದ್ಯಗಳಲ್ಲೂ 6ನೇ ಬೌಲರ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ಟೀಂ ಇಂಡಿಯಾ ವಿರಾಟ್ ಕೊಹ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ.