Asianet Suvarna News Asianet Suvarna News

T20 World Cup 2021: ಸ್ಕಾಟ್‌ಲೆಂಡ್ ವಿರುದ್ಧ ಟಾಸ್ ಗೆದ್ದ ನಮಿಬಿಯಾ!

  • ನಮಿಬಿಯಾ ಹಾಗೂ ಸ್ಕಾಟ್‌ಲೆಂಡ್ ಪಂದ್ಯಕ್ಕೆ ವೇದಿಕೆ ರೆಡಿ
  • ಟಾಸ್ ಗೆದ್ದ ನಮಿಬಿಯಾ ಬೌಲಿಂಗ್ ಆಯ್ಕೆ 
  • ಅಬು ಧಾಬಿಯಲ್ಲಿ ನಡೆಯುತ್ತಿರುವ ಸೂಪರ್ 12 ಹಂತದ ಪಂದ್ಯ
T20 World Cup 2021 Namibia wins toss anc chose bowl first against Scotland in Abu Dhabi ckm
Author
Bengaluru, First Published Oct 27, 2021, 7:07 PM IST

ಅಬು ಧಾಬಿ(ಅ.27):  T20 World Cup 2021 ಟೂರ್ನಿಯಲ್ಲಿ ಇಂದು ನಮಿಬಿಯಾ ಹಾಗೂ ಸ್ಕಾಟ್‌ಲೆಂಡ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನಮಿಬಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಅಬು ಧಾಬಿ ಕ್ರೀಡಾಂಗಣದಲ್ಲೂ ಟಾಸ್ ಪ್ರಮುಖ ಪಾತ್ರ ನಿರ್ವಹಿಸಲಿದೆ. ಕಾರಣ ಈ ಕ್ರೀಡಾಂಗಣದಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡಿದ ತಂಡ ಹೆಚ್ಚು ಯಶಸ್ಸು ಸಾಧಿಸಿದೆ. ಕಳೆದ 5 ಮುಖಾಮುಖಿಯಲ್ಲಿ 4 ಬಾರಿ ಟಾರ್ಗೆಟ್ ಚೇಸ್ ಮಾಡಿದ ತಂಡ ಗೆಲುವು ಸಾಧಿಸಿದರೆ, ಕೇವಲ ಒಂದು ಬಾರಿ ಮಾತ್ರ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಇದು ಐರ್ಲೆಂಡ್ ವಿರುದ್ಧ ಶ್ರೀಲಂಕಾ 70  ರನ್ ಗೆಲವು ಸಾಧಿಸಿದ ಪಂದ್ಯವಾಗಿದೆ. ಇನ್ನುಳಿದ ಎಲ್ಲಾ ಪಂದ್ಯಗಳು ಸೆಕೆಂಡ್ ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ದುಬೈ ಕ್ರೀಡಾಂಗಣದಲ್ಲೂ ಚೇಸಿಂಗ್ ಮಾಡಿದ ತಂಡ ಹೆಚ್ಚು ಗೆಲುವು ಸಾಧಿಸಿದೆ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟಾಸ್ ಗೆದ್ದು ಚೇಸ್ ಮಾಡಿದ ತಂಡಕ್ಕೆ ಗೆಲುವಿನ ವಿಜಯ ಲಕ್ಷ್ಮಿ ಒಲಿದಿದೆ.

T20 World Cup: Ban vs Eng ಬಾಂಗ್ಲಾ ಎದುರು ಇಂಗ್ಲೆಂಡ್‌ಗೆ ಭರ್ಜರಿ ಜಯ

T20 World Cup 2021 ಟೂರ್ನಿಯಲ್ಲಿ ನಮಿಬಿಯಾಗೆ ಮೊದಲ ಅಸಲಿ ಪಂದ್ಯ ಇದಾಗಿದೆ.  ಅರ್ಹತಾ ಸುತ್ತಿನಲ್ಲಿ ಮಿಂಚಿನ ಪ್ರದರ್ಶನ ನೀಡಿ ಕ್ವಾಲಿಫೈ ಆಗಿರುವ ನಮಿಬಿಯಾ ಹಾಗೂ ಸ್ಕಾಟ್‌ಲೆಂಡ್ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಸ್ಕಾಟ್‌ಲೆಂಡ್ ಮೊದಲ ಪಂದ್ಯವನ್ನು ಆಫ್ಘಾನಿಸ್ತಾನ ವಿರುದ್ದ ಆಡಿ ಸೋತಿದೆ. 130 ರನ್ ಹೀನಾಯ ಸೋಲು ಕಂಡಿರುವ ಸ್ಕಾಟ್‌ಲೆಂಡ್ ಇದೀಗ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ. 

ಟಿ20 ಹೋರಾಟದಲ್ಲಿ ನಮಿಬಿಯಾ ಹಾಗೂ ಸ್ಕಾಟ್‌ಲೆಂಡ್ 2 ಬಾರಿ ಮುಖಾಮುಖಿಯಾಗಿದೆ. ಎರಡು ಬಾರಿ ನಮಿಬಿಯಾ ಗೆಲುವು ಸಾಧಿಸಿದೆ. ಇನ್ನು ಈ ವರ್ಷ ಆಡಿದ 9 ಟಿ20 ಪಂದ್ಯದಲ್ಲಿ 8ರಲ್ಲಿ ನಮಿಬಿಯಾ ಗೆಲುವು ಸಾಧಿಸಿದೆ. ಹೀಗಾಗಿ ಇಂದು ಕೂಡ ಸ್ಕಾಟ್‌‌ಲೆಂಡ್ ವಿರುದ್ದ ಗೆಲುವಿನ ವಿಶ್ವಾಸದಲ್ಲಿದೆ.

T20 World Cup: Pak vs NZ ಕಿವೀಸ್‌ ಮಣಿಸಿ, ನಗುತ್ತಲೇ ಹಳೇ ಸೇಡು ತೀರಿಸಿಕೊಂಡ ಪಾಕಿಸ್ತಾನ..!

 ಎರಡು ತಂಡಗಳು ಉತ್ತಮ ಬೌಲಿಂಗ್ ದಾಳಿ ಹೊಂದಿದೆ. ಅದರಲ್ಲೂ ವೇಗಿಗಳ ನೆರವು ಹೆಚ್ಚಿದೆ. ಆದರೆ ನಮಿಬಿಯಾ, ಸ್ಕಾಟ್‌ಲೆಂಡ್ ವೀಕ್ನೆಸ್ ಸ್ಪಿನ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಬಾಂಗ್ಲಾದೇಶ  ಹಾಗೂ ಆಫ್ಘಾನಿಸ್ತಾನ ವಿರುದ್ಧ ನಮಿಬಿಯಾ ಸ್ಪಿನ್ ದಾಳಿಗೆ ತತ್ತರಿಸಿದೆ. 9 ವಿಕೆಟ್ ಕೇವಲ ಸ್ಪಿನ್ ದಾಳಿಯಲ್ಲಿ ಪತನಗೊಂಡಿದೆ. ಹೀಗಾಗಿ ಸ್ಕಾಟ್‌ಲೆಂಡ್ ಸ್ಪಿನ್ ವೀಕ್ನೆಸ್ ಮೇಲೆ ದಾಳಿ ಮಾಡಲು ನಮಿಬಿಯಾ ಸಜ್ಜಾಗಿದೆ. ಇನ್ನು ಅರ್ಹತಾ ಸುತ್ತಿನ ಪಂದ್ಯ ಹಾಗೂ ಸೂಪರ್ 12 ಹಂತದ ಪಂದ್ಯದಲ್ಲಿ ಸ್ಕಾಟ್‌ಲೆಂಡ್ 30 ವಿಕೆಟ್‌ಗಳಲ್ಲಿ 15 ವಿಕೆಟ್ ಸ್ಪಿನ್ ದಾಳಿಗೆ ಕಳೆದುಕೊಂಡಿದೆ.

2ನೇ ಗುಂಪಿನಲ್ಲಿರುವ ನಮಿಬಿಯಾ ಹಾಗೂ ಸ್ಕಾಟ್‌ಲೆಂಡ್ ಗೆಲುವಿಗಾಗಿ ಹಾತೊರೆಯುತ್ತಿದೆ. ನಮಿಬಿಯಾ ಸೂಪರ್ 12 ಹಂತದಲ್ಲಿ ಇದೇ ಮೊದಲ ಪಂದ್ಯ ಆಡುತ್ತಿದೆ. ಹೀಗಾಗಿ ಪಂದ್ಯ ಆಡದ ನಮಿಬಿಯಾ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ಸ್ಕಾಟ್‌ಲೆಂಡ್ ಆಡಿದ 1 ಪಂದ್ಯದಲ್ಲಿ ಹೀನಾ ಸೋಲು ಕಂಡಿರುವ ಕಾರಣ ಅಂಕಪಟ್ಟಿಯಲ್ಲಿ ಕೊನೆಯ ಹಾಗೂ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಸ್ಕಾಟ್‌ಲೆಂಡ್ ಹಾಗೂ ನಮಿಬಿಯಾ ತಂಡ ಇನ್ನುಳಿದ ಪಂದ್ಯದಲ್ಲಿ ಬಲಿಷ್ಠ ತಂಡವನ್ನು ಎದುರಿಸಬೇಕಿದೆ. ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ವಿರುದ್ಧ ಸೆಣಸಾಡಬೇಕಿದೆ. ಹೀಗಾಗಿ ಇಂದಿನ ಪಂದ್ಯದ ಗೆಲುವು ಉಭಯ ತಂಡಗಳಿಗೆ ಅತೀ ಮುಖ್ಯವಾಗಿದೆ. ಹೀಗಾಗಿ ಸ್ಕಾಟ್‌ಲೆಂಡ್ ಹಾಗೂ ನಮಿಬಿಯಾ ಗೆಲುವಿಗಾಗಿ ಶಕ್ತಿ ಮೀರಿ ಹೋರಾಟ ನಡೆಸಲಿದೆ.

Follow Us:
Download App:
  • android
  • ios