Asianet Suvarna News Asianet Suvarna News

T20 World Cup 2021: ಲಂಕಾ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ, ಅರ್ಧ ಪಂದ್ಯ ಗೆದ್ದ ಸಂಭ್ರಮ!

  • ಆಸ್ಟ್ರೇಲಿಯಾ ಶ್ರೀಲಂಕಾ ನಡುವಿನ ಜಿದ್ದಾಜಿದ್ದಿನ ಪಂದ್ಯ
  • ಟಾಸ್ ಗದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ
  • ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ
     
T20 World Cup 2021 Australia won toss opt to bowl first against Srilanka in dubai ckm
Author
Bengaluru, First Published Oct 28, 2021, 7:11 PM IST

ದುಬೈ(ಅ.28):  ಆಸ್ಟ್ರೇಲಿಯಾ(Australia) ಹಾಗೂ ಶ್ರೀಲಂಕಾ(Srilanka) ನಡುವಿನ ಜಿದ್ದಾಜಿದ್ದಿನ T20 World Cup 2021 ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(toss) ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ದುಬೈ ಕ್ರೀಡಾಂಗಣದಲ್ಲಿ ಎಲ್ಲರೂ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ಇಷ್ಟಪಡುತ್ತಾರೆ.

T20 World Cup: ಟೀಂ ಇಂಡಿಯಾ ವಿಶ್ವಕಪ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಸೆಹ್ವಾಗ್

ಆಸ್ಟ್ರೇಲಿಯಾ ತಂಡ: (Australia Squad)
ಡೇವಿಡ್ ವಾರ್ನರ್, ಆ್ಯರನ್ ಫಿಂಚ್, ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಮಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಮ್ ಜಂಪಾ, ಜೋಶ್ ಹೇಜಲ್‌ವುಡ್

ಶ್ರೀಲಂಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಬಿನುರಾ ಫರ್ನಾಂೋ ಬದಲು ಮಹೀಶಾ ತೀಕ್ಷಾನಾ ತಂಡ ಸೇರಿಕೊಂಡಿದ್ದಾರೆ. ಇಂಜುರಿಯಿಂದ ಮಹೀಶಾ ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದರು. 

ಶ್ರೀಲಂಕಾ ತಂಡ: (Srilanka Squad)
ಕುಸಾಲ್ ಪರೇರಾ, ಪಾಥುಮ್ ನಿಸಾಂಕ, ಚಾರಿತ್ ಅಸಲಂಕಾ, ಅವಿಶ್ಕಾ ಫರ್ನಾಂಡೋ, ವಾವಿಂಡು ಹಸರಂಗ, ಭಾನುಕಾ ರಾಜಪಕ್ಸ, ದಸೂನ ಶನಕ, ಚಾಮಿಕ ಕರುಣಾರತ್ನೆ, ದುಶ್ಮಂತ್ ಚಮೀರಾ, ಲಹೀರು ಕುಮಾರ, ಮಹೀಶಾ ತೀಕ್ಷಾನಾ

T20 World Cup: ತವರಿನತ್ತ ಮುಖ ಮಾಡಿದ ಟೀಂ ಇಂಡಿಯಾ ನೆಟ್ ಬೌಲರ್ ಆವೇಶ್ ಖಾನ್..!

ದುಬೈ ಕ್ರೀಡಾಂಗಣದಲ್ಲಿ(Dubai Stadium) ಟಾಸ್ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಹಾಗೂ ಐಪಿಎಲ್(IPL) ಟೂರ್ನಿಗಳಲ್ಲೂ ಸಾಬೀತಾಗಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಳ್ಳುವ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು. ದುಬೈ ಕ್ರೀಡಾಂಗಣದಲ್ಲಿ ಚೇಸ್ ಮಾಡಿದ ತಂಡಕ್ಕೆ ಗೆಲುವಿನ ಸಾಧ್ಯತೆ ಹೆಚ್ಚು.

ಟಿ20 ವಿಶ್ವಕಪ್ ಟೂರ್ನಿ ಸೂಪರ್ 12 ಹಂತದಲ್ಲಿ ನಡೆದ 9 ಪಂದ್ಯದಲ್ಲಿ 8 ಪಂದ್ಯ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ.

ಮೊದಲ ಗುಂಪಿನಲ್ಲಿರುವ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ(AusVsSL) ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಹವಣಿಸುತ್ತಿದೆ. ಇಂದು ಉತ್ತಮ ರನ್‌ರೇಟ್‌ನೊಂದಿಗೆ ಗೆದ್ದ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಅವಕಾಶವಿದೆ. ಸದ್ಯ ಮೊದಲ ಸ್ಥಾನವನ್ನು ಇಂಗ್ಲೆಂಡ್ ಆಕ್ರಮಿಸಿಕೊಂಡಿದೆ. 

T20 World Cup 2021: ಮೊಹಮ್ಮದ್ ಶಮಿ ನಿಂದನೆ ಹಿಂದೆ ಪಾಕಿಸ್ತಾನ ಪಿತೂರಿ ಬಯಲು!

 ಆಸ್ಟ್ರೇಲಿಯಾ ಪ್ರವಾಸದಲ್ಲಿ ಶ್ರೀಲಂಕಾ ಕೊನೆಯಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಟಿ20(T20) ಪಂದ್ಯದಲ್ಲಿ  ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ದಾಖಲೆ ಬರೆದಿದ್ದರು. ಸರಣಿಯಲ್ಲಿ ವಾರ್ನರ್ ಅಜೇಯರಾಗಿ ಉಳಿದಿದ್ದರು. ಅದರಲ್ಲೂ ಆಡಿಲೇಡ್ ಓವಲ್ ಪಂದ್ಯದಲ್ಲಿ ವಾರ್ನರ್ ಸೆಂಚುರಿ ಸಿಡಿಸಿದ್ದರು. ಈ ಮೂಲಕ 3 ಇನ್ನಿಂಗ್ಸ್‌ನಲ್ಲಿ ವಾರ್ನರ್ 217 ರನ್ ಸಿಡಿಸಿದ್ದರು.

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಟಿ20 ಪಂದ್ಯದಲ್ಲಿ 16 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 8ರಲ್ಲಿ ಆಸ್ಟ್ರೇಲಿಯಾ ಹಾಗೂ ಇನ್ನುಳಿದ 8ರಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದೆ. ಈ ಮೂಲಕ ಸಮಬಲದ ಹೋರಾಟ ನೀಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ 3 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 2 ಬಾರಿ ಆಸ್ಟ್ರೇಲಿಯಾ ಹಾಗೂ 1 ಬಾರಿ ಶ್ರೀಲಂಕಾ ಗೆಲುವು ಸಾಧಿಸಿದೆ.

2021ರಲ್ಲಿ ಆಸ್ಟ್ರೇಲಿಯಾ ಟಿ20 ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಅದರಲ್ಲೂ ಸ್ಪಿನ್ ದಾಳಿಗೆ ಆಸ್ಟ್ರೇಲಿಯಾ ಹೆಚ್ಚಿನ ವಿಕೆಟ್ ಕಳೆದುಕೊಂಡಿದೆ. ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೌತ್ ಆಫ್ರಿಕಾ ವಿರುದ್ಧ ಸ್ಪಿನ್ ದಾಳಿಗೆ ತತ್ತರಿಸಿತು. 8 ಓವರ್‌ಗಳಲ್ಲಿ 45 ರನ್ ಸಿಡಿಸಿತ್ತು. ಇನ್ನು ಭಾರತ ವಿರುದ್ದ ಅಭ್ಯಾಸ ಪಂದ್ಯದಲ್ಲಿ ಆರ್ ಅಶ್ವಿನ್ ಮೋಡಿಗೆ ಬಲಿಯಾಗಿತ್ತು. ಕಳೆದ 16 ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ 59 ವಿಕೆಟ್ ಸ್ಪಿನ್ ದಾಳಿಗೆ ಉರುಳಿ ಬಿದ್ದಿದೆ. ಶ್ರೀಲಂಕಾ ಉತ್ತಮ ಸ್ಪಿನ್ ದಾಳಿ ಹೊಂದಿದ್ದು, ಹೆಚ್ಚು ಆತ್ಮವಿಶ್ವಾಸದಲ್ಲಿದೆ.
 

Follow Us:
Download App:
  • android
  • ios