ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪುದುಚೆರಿ ತಂಡದ 41 ವರ್ಷದ ಶಾಂತ ಮೂರ್ತಿ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ದಾಖಲೆ ಬರೆದಿದ್ದಾರೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮುಂಬೈ(ಜ.18): ಟಿ20 ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ 5 ವಿಕೆಟ್‌ ಕಿತ್ತ ಅತಿಹಿರಿಯ ಬೌಲರ್‌ ಎನ್ನುವ ದಾಖಲೆಯನ್ನು ಪುದುಚೇರಿಯ ಶಾಂತ ಮೂರ್ತಿ ಬರೆದಿದ್ದಾರೆ. 

ಬರೋಬ್ಬರಿ 41 ವರ್ಷದ ಶಾಂತ ಮೂರ್ತಿ (41 ವರ್ಷ 129 ದಿನ) ಭಾನುವಾರ ಮುಂಬೈ ವಿರುದ್ಧ ನಡೆದ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ 20 ರನ್‌ಗೆ 5 ವಿಕೆಟ್‌ ಕಬಳಿಸಿದರು. ಆ ಮೂಲಕ 2006ರಲ್ಲಿ ಕೇಮನ್‌ ಐಲ್ಯಾಂಡ್ಸ್‌ನ ಕೆನುಟೆ ಟುಲೊಚ್‌ (41 ವರ್ಷ 7 ದಿನ) ನಿರ್ಮಿಸಿದ್ದ ದಾಖಲೆಯನ್ನು ಬಲಗೈ ಮಧ್ಯಮ ವೇಗಿ ಮೂರ್ತಿ ಮುರಿದರು.

Scroll to load tweet…

ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ಇಂದು ಯುಪಿ ಸವಾಲು

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಮುಂಬೈ ತಂಡ ಶಾಂತ ಮೂರ್ತಿ ಬೌಲಿಂಗ್‌ ಎದುರು ತತ್ತರಿಸಿಹೋಯಿತು. ಯಶಸ್ವಿ ಜೈಸ್ವಾಲ್‌, ಆದಿತ್ಯ ತಾರೆ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್ ಅವರಂತ ಟಿ20 ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಪರಿಣಾಮ ಮುಂಬೈ ತಂಡ ಕೇವಲ 94 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಮುಖಭಂಗ ಅನುಭವಿಸಿತು. ಇನ್ನು ಸುಲಭ ಗುರಿ ಬೆನ್ನತ್ತಿದ ಪುದುಚೆರಿ ತಂಡ ಇನ್ನೊಂದು ಓವರ್‌ ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.