ಬೆಂಗಳೂರು(ಡಿ.27):  ಕೊರೋನಾ ಕಾರಣ ಸ್ಥಗಿತಗೊಂಡಿದ್ದ ದೇಶಿ ಟೂರ್ನಿಗಳು ಮತ್ತೆ ಆರಂಭಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಬಿಸಿಸಿಐ ಸೈಯದ್ ಮುಷ್ತಾಕ್ ಆಲಿ ಟಿ20 ಟೂರ್ನಿ ಆಯೋಜಿಸುತ್ತಿದೆ. ಜನವರಿ 10 ರಿಂದ ಟೂರ್ನಿ ಆರಂಭಗೊಳ್ಳುತ್ತಿದ್ದು, ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು, ಬೆಂಗಳೂರು ಸನಿಹದಲ್ಲಿರುವ ಆಲೂರು ಕ್ರೀಡಾಂಗಣ 1 ಹಾಗೂ ಆಲೂರ್ ಕ್ರೀಡಾಂಗಣ 2ರಲ್ಲಿ ಆಯೋಜಿಸಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಕ್ಷಿಪ್ರ ಬೆಳವಣಿಗೆ; ರಾಜ್ಯಪಾಲರ ಭೇಟಿ ಮಾಡಿದ ಸೌರವ್ ಗಂಗೂಲಿ!..

ಪ್ರಮುಖ ಟಿ20 ಟೂರ್ನಿಗೆ ಕರ್ನಾಟಕ ತಂಡದ ಪ್ರಕಟಗೊಂಡಿದೆ. ಇಂಜುರಿಗೆ ತುತ್ತಾಗಿರುವ ಮನೀಶ್ ಪಾಂಡೆಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಕರುಣ್ ನಾಯರ್‌ಗೆ ನಾಯಕತ್ವ ನೀಡಲಾಗಿದೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಪಿ ಪರ ಮಿಂಚಿದ ದೇವದತ್ ಪಡಿಕ್ಕಲ್ ಸೇರಿದಂತೆ ಪ್ರತಿಭಾವಂತರಿಗೆ ಸ್ಥಾನ ನೀಡಲಾಗಿದೆ.

ಗೌತಮ್ ಗಂಭೀರ್ ಕ್ಯಾಂಟೀನ್ ಆರಂಭ; ಬಡವರಿಗೆ 1 ರೂಪಾಯಿಗೆ ಊಟ!.

ಕರ್ನಾಟಕ ತಂಡ:
ಕರುಣ್ ನಾಯರ್(ನಾಯಕ), ದೇವದತ್ ಪಡಿಕ್ಕಲ್, ರೋಹನ್ ಕದಮ್, ಪವನ್ ದೇಶ್‌ಪಾಂಡೆ(ಉಪನಾಯಕ), ಸಿದ್ದಾರ್ಥ್ ಕೆವಿ, ಶ್ರೀಜಿತ್ ಕೆಲ್, ಶರತ್ ಬಿಆರ್,ಅನಿರುದ್ ಜೋಶಿ, ಶ್ರೇಯಸ್ ಗೋಪಾಲ್, ಕೆ ಗೌತಮ್, ಸುಜಿತ್ ಜೆ, ಪ್ರವೀಣ್ ದುಬೆ, ಮಿಥುನ್, ಪ್ರಸಿದ್ಧ್ ಕೃಷ್ಣ, ಪ್ರತೀಕ್ ಜೈನ್, ಕೌಶಿಕ್ ವಿ, ರೋನಿತ್ ಮೊರೆ, ದರ್ಶನ್ ಎಂಬಿ, ಮನೋಜ್ ಭಂಡಗೆ, ಶುಭಾಂಗ್ ಹೆಗ್ಡೆ.