Asianet Suvarna News Asianet Suvarna News

Syed Mushtaq Ali Trophy: ಪಡಿಕ್ಕಲ್‌ ಸೆಂಚುರಿ, ಕರ್ನಾಟಕ ಶುಭಾರಂಭ

ಸಯ್ಯದ್ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಕರ್ನಾಟಕ ಶುಭಾರಂಭ
ಮಹಾರಾಷ್ಟ್ರ ಎದುರು ಸ್ಪೋಟಕ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಮಹಾರಾಷ್ಟ್ರ ಎದುರು ಕರ್ನಾಟಕಕ್ಕೆ 99 ರನ್‌ಗಳ ಜಯಭೇರಿ

Syed Mushtaq Ali Trophy Devdutt Padikkal smashes hundred Karnataka beat Maharashtra by 99 runs kvn
Author
First Published Oct 12, 2022, 10:49 AM IST

ಮೊಹಾಲಿ(ಅ.12): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕಳೆದ ಬಾರಿ ರನ್ನರ್‌-ಅಪ್‌ ಕರ್ನಾಟಕ ಭರ್ಜರಿ ಆರಂಭ ಪಡೆದಿದೆ. ಮಂಗಳವಾರ ನಡೆದ ಎಲೈಟ್‌ ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ, ಮಹಾರಾಷ್ಟ್ರ ವಿರುದ್ಧ 99 ರನ್‌ ಜಯಗಳಿಸಿತು. ಮೊದಲು ಬ್ಯಾಟ್‌ ಮಾಡಿದ ರಾಜ್ಯ ತಂಡ ದೇವದತ್‌ ಪಡಿಕ್ಕಲ್‌(62 ಎಸೆತಗಳಲ್ಲಿ ಔಟಾಗದೆ 124) ಅಬ್ಬರದ ಶತಕದ ನೆರವಿನಿಂದ 2 ವಿಕೆಟ್‌ಗೆ 215 ರನ್‌ ಕಲೆ ಹಾಕಿತು. ಮನೀಶ್‌ ಪಾಂಡೆ 50, ನಾಯಕ ಮಯಾಂಕ್‌ ಅಗರ್‌ವಾಲ್‌ 28 ರನ್‌ ಗಳಿಸಿದರು. 

ಬೃಹತ್‌ ಗುರಿ ಬೆನ್ನತ್ತಿದ ಮಹಾರಾಷ್ಟ್ರ 8 ವಿಕೆಟ್‌ಗೆ 116 ರನ್‌ ಗಳಿಸಿ ಸೋಲ್ಪೊಪಿಕೊಂಡಿತು. ದಿವ್ಯಾಂಗ್‌ ಹಿಂಗಾನೆಕರ್‌ 47 ರನ್‌ ಗಳಿಸಿದರು. ಕರ್ನಾಟಕ ಕ್ರಿಕೆಟ್ ತಂಡದ ವಿದ್ವತ್‌ ಕಾವೇರಪ್ಪ 3, ವೈಶಾಕ್‌ 2 ವಿಕೆಟ್‌ ಕಿತ್ತರು.

ಹೃತಿಕ್‌ ಶೋಕೀನ್‌ ಮೊದಲ ಇಂಪ್ಯಾಕ್ಟ್ ಪ್ಲೇಯರ್‌

ಬಿಸಿಸಿಐ ಹೊಸದಾಗಿ ಪರಿಚಿಯಿಸಿರುವ ಇಂಪ್ಯಾಕ್ಸ್‌ ಪ್ಲೇಯರ್‌ ಆಯ್ಕೆಯನ್ನು ಮೊದಲ ಬಾರಿ ಡೆಲ್ಲಿ ತಂಡ ಬಳಸಿಕೊಂಡಿತು. ಹಿತೇನ್‌ ದಲಾಲ್‌ ಬದಲು ಹೃತಿಕ್‌ ಶೋಕೀನ್‌ರನ್ನು ತಂಡ ಪಂದ್ಯದ ನಡುವೆ ಸೇರಿಸಿಕೊಂಡಿತು. ಹಿತೇನ್‌ 47 ರನ್‌ ಬಾರಿಸಿದರೆ, ಬಳಿಕ ಶೋಕೀನ್‌ 3 ಓವರಲ್ಲಿ 13ಕ್ಕೆ 2 ವಿಕೆಟ್‌ ಕಿತ್ತರು. ಕರ್ನಾಟಕ ತಂಡ ಪಡಿಕ್ಕಲ್‌ ಬದಲು ಶ್ರೇಯಸ್‌ ಗೋಪಾಲ್‌ರನ್ನು ಇಂಪ್ಯಾಕ್ಟ್ ಪ್ಲೇಯರ್‌ ಆಗಿ ಬಳಸಿಕೊಂಡಿತು.

ತ್ರಿಕೋನ ಟಿ20: ಪಾಕ್‌ ವಿರುದ್ಧ ಕಿವೀಸ್‌ಗೆ ಜಯ

ಕ್ರೈಸ್ಟ್‌ಚರ್ಚ್‌: ಮಾರಕ ಬೌಲಿಂಗ್‌ ದಾಳಿ, ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಪಾಕಿಸ್ತಾನ ವಿರುದ್ಧದ ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ 9 ವಿಕೆಟ್‌ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಪಾಕ್‌ 7 ವಿಕೆಟ್‌ಗೆ 130 ರನ್‌ ಗಳಿಸಿತು. ಇಫ್ತಿಕಾರ್‌ ಅಹ್ಮದ್‌ 27 ರನ್‌ ಗಳಿಸಿದರು. ಪಾಕ್‌ ಇನ್ನಿಂಗ್‌್ಸನಲ್ಲಿ ಯಾವುದೇ ಸಿಕ್ಸರ್‌ ದಾಖಲಾಗಲಿಲ್ಲ. ಸುಲಭ ಗುರಿ ಬೆನ್ನತ್ತಿದ ಕಿವೀಸ್‌ 16.1 ಓವರಲ್ಲಿ 1 ವಿಕೆಟ್‌ ನಷ್ಟದಲ್ಲಿ ಜಯಿಸಿತು. ಫಿನ್‌ ಆ್ಯಲೆನ್‌ 62, ಡೆವೋನ್‌ ಕಾನ್‌ವೇ ಔಟಾಗದೆ 49 ರನ್‌ ಗಳಿಸಿದರು.

ಏಷ್ಯಾಕಪ್‌: ಅಕ್ಟೋಬರ್ 13ರಂದು ಭಾರತ, ಥಾಯ್ಲೆಂಡ್‌ ಸೆಮಿಫೈನಲ್‌

ಸೈಲೆಟ್‌: ಏಷ್ಯಾಕಪ್‌ ಟಿ20 ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡ ಥಾಯ್ಲೆಂಡ್‌ ವಿರುದ್ಧ ಸೆಣಸಾಡಲಿದೆ. ಪಂದ್ಯ ಅ.13ಕ್ಕೆ ನಿಗದಿಯಾಗಿದ್ದು, ಅದೇ ದಿನ ಮತ್ತೊಂದು ಸೆಮೀಸ್‌ನಲ್ಲಿ ಪಾಕಿಸ್ತಾನ-ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಮಂಗಳವಾರ ನಡೆದ ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಲಂಕಾ ವಿರುದ್ಧ ಪಾಕ್‌ ಗೆಲುವು ಸಾಧಿಸಿತು. 

IND vs SA ಅಂತಿಮ ಪಂದ್ಯದಲ್ಲಿ ಸೌತ್ ಆಫ್ರಿಕಾ ಉಡೀಸ್, ಟೀಂ ಇಂಡಿಯಾ ತೆಕ್ಕೆಗೆ ಏಕದಿನ ಸೀರಿಸ್!

ಇದರೊಂದಿಗೆ ಅಂಕಪಟ್ಟಿಯಲ್ಲಿ ಪಾಕ್‌ 2ನೇ, ಲಂಕಾ 3ನೇ ಸ್ಥಾನಿಯಾಯಿತು. ಭಾರತ 6 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ ಅಗ್ರಸ್ಥಾನಿಯಾದರೆ, ಥಾಯ್ಲೆಂಡ್‌ 6 ಅಂಕದೊಂದಿಗೆ 4ನೇ ಸ್ಥಾನ ಪಡೆಯಿತು. ಥಾಯ್ಲೆಂಡ್‌ ವಿರುದ್ಧ ಲೀಗ್‌ ಹಂತದ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಗೆದ್ದಿತ್ತು.

Follow Us:
Download App:
  • android
  • ios