ವಿಶಾಖಪಟ್ಟಣಂ[ನ.15]: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಬಿಹಾರ ತಂಡವನ್ನು ಎದುರಿಸಲಿದ್ದು, ಟಾಸ್ ಗೆದ್ದ ಬಿಹಾರ ಬ್ಯಾಟಿಂಗ್ ಆಯ್ದುಕೊಂಡಿದೆ. 

‘ಎ’ ಗುಂಪಿನಲ್ಲಿರುವ ಕರ್ನಾಟಕ 4 ಪಂದ್ಯಗಳನ್ನಾಡಿದ್ದು 3 ಗೆಲುವು, 1 ಸೋಲಿನೊಂದಿಗೆ 12 ಅಂಕಗಳಿಸಿದ್ದು ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಪಂದ್ಯ​ದಲ್ಲಿ ಗೆದ್ದರೆ ತಂಡ ಮತ್ತೆ ಅಗ್ರ​ಸ್ಥಾ​ನಕ್ಕೆ ಮರ​ಳ​ಲಿದ್ದು, ಸೂಪರ್‌ ಲೀಗ್‌ ಹಂತಕ್ಕೆ ಪ್ರವೇಶ ಪಡೆ​ಯು​ವುದು ಬಹುತೇಕ ಖಚಿತವಾಗ​ಲಿದೆ. 

ಮುಷ್ತಾಕ್‌ ಅಲಿ ಟ್ರೋಫಿ: ರಾಜ್ಯ ತಂಡಕ್ಕೆ ರಾಹುಲ್‌ ಸೇರ್ಪಡೆ

ಸದ್ಯ ಬರೋಡಾ 5 ಪಂದ್ಯ​ಗ​ಳಲ್ಲಿ 4 ಗೆಲು​ವು​ಗ​ಳೊಂದಿಗೆ 16 ಅಂಕ ಗಳಿಸಿ ಅಗ್ರ​ಸ್ಥಾ​ನ​ದ​ಲ್ಲಿದೆ. ಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್‌ ಲೀಗ್‌ ಹಂತಕ್ಕೇರಲಿವೆ. ಮತ್ತೊಂದೆಡೆ ಬಿಹಾರ ಆಡಿ​ರುವ 4 ಪಂದ್ಯ​ಗ​ಳಲ್ಲೂ ಸೋಲುಂಡಿದ್ದು, ಕರ್ನಾ​ಟ​ಕವೇ ಗೆಲ್ಲುವ ನೆಚ್ಚಿನ ತಂಡ ಎನಿ​ಸಿ​ಕೊಂಡಿದೆ.

ಕಳೆದೆರಡು ಪಂದ್ಯದಲ್ಲಿ ಕರ್ನಾಟಕ ಬ್ಯಾಟ್ಸ್‌ಮನ್‌ಗಳಾದ ದೇವದತ್ ಪಡಿಕ್ಕಲ್ ಹಾಗೂ ನಾಯಕ ಮನೀಶ್ ಪಾಂಡೆ ಅಜೇಯ ಶತಕ ಸಿಡಿಸಿದ್ದರು. ಇಂದು ಯಾರು ಮೂರಂಕಿ ಮೊತ್ತ ದಾಖಲಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ

ನೇರ ಪ್ರಸಾರ: ಹಾಟ್‌ ಸ್ಟಾರ್‌