Asianet Suvarna News Asianet Suvarna News

ಆಫ್ಘಾನಿಸ್ತಾನ ಟಿ20 ಸರಣಿಗಿಲ್ಲ ಸೂರ್ಯಕುಮಾರ್ ಯಾದವ್..! ಹಾರ್ದಿಕ್ ಪಾಂಡ್ಯ ಕೂಡಾ ಡೌಟ್

ಇನ್ನು ವಿಶ್ವಕಪ್ ವೇಳೆ ಉಂಟಾದ ಪಾದದ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡಾ ಆಫ್ಘನ್ ಸರಣಿಗೆ ಗೈರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇವರಿಬ್ಬರೂ ಸರಣಿಗೆ ಅಲಭ್ಯರಾದರೆ ರೋಹಿತ್ ಮತ್ತೆ ಟಿ20 ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಅಥವಾ ರವೀಂದ್ರ ಜಡೇಜಾಗೆ ನಾಯಕತ್ವ ನೀಡಬಹುದು ಎಂದು ವರದಿಯಾಗಿದೆ.

Suryakumar Yadav Ruled out of Auction for Seven weeks Due to Ankle Injury Doubt for Afghanistan Series kvn
Author
First Published Dec 23, 2023, 1:23 PM IST

ಸೆಂಚೂಡಿಯನ್(ಡಿ.23): ಪಾದದ ಗಾಯಕ್ಕೆ ತುತ್ತಾಗಿರುವ ಭಾರತದ ಸೂರ್ಯ ಕುಮಾರ್ ಯಾದವ್ ಜ.11ರಿಂದ ಆರಂಭ ಗೊಳ್ಳಲಿರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಸೂರ್ಯ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಗಾಯಗೊಂಡಿದ್ದರು. ಅವರು ಚೇತರಿಸಿಕೊಳ್ಳಲು 6 ವಾರ ಬೇಕಾಗಬಹುದೆಂದು ತಿಳಿದುಬಂದಿದೆ.

ಇನ್ನು ವಿಶ್ವಕಪ್ ವೇಳೆ ಉಂಟಾದ ಪಾದದ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡಾ ಆಫ್ಘನ್ ಸರಣಿಗೆ ಗೈರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇವರಿಬ್ಬರೂ ಸರಣಿಗೆ ಅಲಭ್ಯರಾದರೆ ರೋಹಿತ್ ಮತ್ತೆ ಟಿ20 ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಅಥವಾ ರವೀಂದ್ರ ಜಡೇಜಾಗೆ ನಾಯಕತ್ವ ನೀಡಬಹುದು ಎಂದು ವರದಿಯಾಗಿದೆ.

ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ತಲೆನೋವು, ಇಶಾನ್ ಸೇರಿ ಇಬ್ಬರು ತಂಡದಿಂದ ಔಟ್!

ತುರ್ತು ಕಾರಣ: ಭಾರತಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ

ಸೆಂಚೂರಿಯನ್: 2 ಪಂದ್ಯಗಳ ಟೆಸ್ಟ್ ಸರಣಿ ಗಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತುರ್ತು ಕಾರಣಗಳಿಂದಾಗಿ ಭಾರತಕ್ಕೆ ಮರಳಿದ್ದಾರೆ. ಆದರೆ ಅವರು ಡಿ.26ರಿಂದ ಆರಂಭಗೊಳ್ಳಲಿರುವ ಮೊದಲ ಪಂದ್ಯಕ್ಕೂ ಮುನ್ನ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಸಹ ಆಟಗಾರರೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದರು. ಆದರೆ ಕೌಟುಂಬಿಕ ತುರ್ತು ಕಾರಣಗಳಿಂದಾಗಿ ಅವರು ಭಾರತಕ್ಕೆ ಆಗಮಿಸಿದ್ದಾರೆ. ಅವರು ಮೊದಲೇ ಈ ಬಗ್ಗೆ ಬಿಸಿಸಿಐಗೆ ಮನವಿ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಡಿ.24ರಂದು ಅವರು ಮತ್ತೆ ದ.ಆಫ್ರಿಕಾಕ್ಕೆ ಪ್ರಯಾಣಿಸಲಿದ್ದು, ತಂಡದ ಜೊತೆ ಅಭ್ಯಾಸದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಟೆಸ್ಟ್ ಸರಣಿಯಿಂದ ಗಾಯಕ್ವಾಡ್ ಔಟ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದ ವೇಳೆ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ತಾರಾ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರು ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರು ಗಾಯ ದಿಂದಾಗಿ 3ನೇ ಪಂದ್ಯ ಆಡಿರಲಿಲ್ಲ. ಆದರೆ ಅವರ ಬದಲಿ ಆಟಗಾರನನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ.

ರೋಹಿತ್ ಶರ್ಮಾ ಕೈಬಿಟ್ಟು ಹಾರ್ದಿಕ್‌ಗೆ ಮುಂಬೈ ನಾಯಕತ್ವ ಪಟ್ಟ ಕಟ್ಟಿದ್ದೇಕೆ? ಗುಟ್ಟು ಬಿಚ್ಚಿಟ್ಟ ಜಯವರ್ಧನೆ

ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ವೆಸ್ಟ್ ಇಂಡೀಸ್

ತರೌಬ: ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ 5ನೇ ಟಿ20 ಪಂದ್ಯದಲ್ಲಿ 4 ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 19.3 ಓವರ್ ಗಳಲ್ಲಿ ಕೇವಲ 132ಕ್ಕೆ ಆಲೌಟಾಯಿತು. ಫಿಲ್ ಸಾಲ್ಟ್ 38, ಲಿವಿಂಗ್‌ಸ್ಟೋನ್ 28 ರನ್ ಗಳಿಸಿದರು. ಗುಡಾಕೇಶ್ ಮೋಟಿ 3 ವಿಕೆಟ್ ಪಡೆದರು. 

ಸುಲಭ ಗುರಿ ಬೆನ್ನತ್ತಿದ ವಿಂಡೀಸ್ 19.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯ ತನ್ನದಾಗಿಸಿಕೊಂಡಿತು. ಶಾಯ್ ಹೋಪ್ 43, ಶೆರ್ಫಾನೆ ರುಥರ್‌ಪೋರ್ಡ್ 30 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಮೊದಲೆರಡು ಪಂದ್ಯಗಳಲ್ಲಿ ವಿಂಡೀಸ್ ಗೆದ್ದಿದ್ದರೆ, ನಂತರದ 2 ಪಂದ್ಯ ಇಂಗ್ಲೆಂಡ್ ಪಾಲಾಗಿತ್ತು.
 

Follow Us:
Download App:
  • android
  • ios