ಸಿಡ್ನಿ(ನ.29): ಸ್ಟೀವ್ ಸ್ಮಿತ್(104) ಬಾರಿಸಿದ ಸತತ ಎರಡನೇ ಶತಕದ ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 389 ರನ್ ಬಾರಿಸಿದ್ದು, ಭಾರತಕ್ಕೆ ಕಠಿಣ ಗುರಿ ನೀಡಿದೆ.

ಹೌದು, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮತ್ತೊಮ್ಮೆ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 142 ರನ್‌ಗಳ ಜತೆಯಾಟವಾಡಿತು. ಫಿಂಚ್ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಾರ್ನರ್ 83 ರನ್ ಬಾರಿಸಿ ರನೌಟ್ ಆದರು. 

ಸತತ 2ನೇ ಶತಕ ಚಚ್ಚಿದ ಸ್ಟೀವ್ ಸ್ಮಿತ್: ಮೊದಲ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದ ಸ್ಟೀವ್ ಸ್ಮಿತ್, ಎರಡನೇ ಏಕದಿನ ಪಂದ್ಯದಲ್ಲೂ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಭಾರತ ವಿರುದ್ಧ ಸ್ಟೀವ್ ಸ್ಮಿತ್ ಒಟ್ಟಾರೆ ಸತತ 3ನೇ ಶತಕ ಬಾರಿಸಿ ಮಿಂಚಿದರು. ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಸ್ಮಿತ್ ಒಟ್ಟು 64 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 104 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಮಾರ್ನಸ್ ಲಬುಶೇನ್(70), ಗ್ಲೆನ್ ಮ್ಯಾಕ್ಸ್‌ವೆಲ್(63*) ಬಾರಿಸುವ ಮೂಲಕ ತಂಡದ ಮೊತ್ತವನ್ನು 380ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.  

ಮತ್ತೆ ದುಬಾರಿಯಾದ ಸೈನಿ-ಚಹಲ್: ಮೊದಲ ಏಕದಿನ ಪಂದ್ಯದಲ್ಲಿ 80ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿದ್ದ ವೇಗಿ ನವದೀಪ್ ಸೈನಿ ಹಾಗೂ ಯುಜುವೇಂದ್ರ ಚಹಲ್ ಸಾಕಷ್ಟು ದುಬಾರಿಯಾದರು. ಸೈನಿ 7 ಓವರ್‌ ಬೌಲಿಂಗ್ ಮಾಡಿ 10ರ ಎಕನಮಿಯಲ್ಲಿ 70 ರನ್ ಬಿಟ್ಟುಕೊಟ್ಟರೆ, ಯುಜುವೇಂದ್ರ ಚಹಲ್ 9 ಓವರ್‌ನಲ್ಲಿ 71 ರನ್ ನೀಡಿ ದುಬಾರಿ ಎನಿಸಿದ್ದಾರೆ. 

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ:
ಸ್ಟೀವ್ ಸ್ಮಿತ್: 104
ಹಾರ್ದಿಕ್ ಪಾಂಡ್ಯ:24/1