ಕೊಲಂಬೊ[ಜ.01]: ಜನವರಿ 05ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ 16 ಆಟಗಾರರನ್ನೊಳಗೊಂಡ ಬಲಿಷ್ಠ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಲ್ರೌಂಡರ್ ಆ್ಯಂಜಲೋ ಮ್ಯಾಥ್ಯೂಸ್ ತಂಡ ಕೂಡಿಕೊಂಡಿದ್ದಾರೆ.

ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ; ಬುಮ್ರಾ ವಾಪಾಸ್, ರೋಹಿತ್‌ಗೆ ರೆಸ್ಟ್!

ಅನುಭವಿ ವೇಗಿ ಲಸಿತ್ ಮಾಲಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ 18 ತಿಂಗಳಿನಿಂದ ಚುಟುಕು ಕ್ರಿಕೆಟ್’ನಿಂದ ಹೊರಗುಳಿದಿದ್ದ ಆಲ್ರೌಂಡರ್ ಆ್ಯಂಜಲೋ ಮ್ಯಾಥ್ಯೂಸ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 2018ರ ಆಗಸ್ಟ್’ನಲ್ಲಿ ಕೊಲಂಬೊದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮ್ಯಾಥ್ಯೂಸ್ ಕಡೆಯ ಟಿ20 ಪಂದ್ಯಗಳನ್ನಾಡಿದ್ದರು. ಇದೀಗ ಟಿ20 ವಿಶ್ವಕಪ್ ಟೂರ್ನಿಗೆ ಕೆಲವೇ ಕೆಲವು ತಿಂಗಳುಗಳಿದ್ದಾಗ ತಂಡ ಕೂಡಿಕೊಂಡಿರುವುದು ಲಂಕಾ ಪಡೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. 

2020ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ಟಾಪ್ 5 ಕ್ರಿಕೆಟಿಗರಿವರು

ಪಾಕಿಸ್ತಾನ ನೆಲದಲ್ಲಿ ಟಿ20 ಸರಣಿ ಗೆದ್ದು ಬೀಗಿದ್ದ ಲಂಕಾ, ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಇದೀಗ ಭಾರತದೆದುರು ಅದೃಷ್ಠ ಪರೀಕ್ಷೆಗೆ ದ್ವೀಪ ರಾಷ್ಟ್ರ ಮುಂದಾಗಿದೆ. ಮೊದಲ ಟಿ20 ಪಂದ್ಯ ಡಿಸೆಂಬರ್ 05ರಂದು ಗುವಾಹಟಿಯಲ್ಲಿ ನಡೆದರೆ, ಆ ಬಳಿಕ 7 ಹಾಗೂ 10 ರಂದು ಕ್ರಮವಾಗಿ ಇಂದೋರ್ ಮತ್ತು ಪುಣೆಯಲ್ಲಿ ನಡೆಯಲಿದೆ. 

ಶ್ರೀಲಂಕಾ ತಂಡ ಹೀಗಿದೆ ನೋಡಿ...

ಲಸಿತ್ ಮಾಲಿಂಗ[ನಾಯಕ], ಕುಸಾಲ್ ಪೆರೆರಾ, ಧನುಷ್ಕಾ ಗುಣತಿಲಕ, ಆವಿಷ್ಕಾ ಫರ್ನಾಂಡೋ, ಭಾನುಕಾ ರಾಜಪಕ್ಸಾ, ಓಸಾದಾ ಫರ್ನಾಂಡೊ, ದಶುನ್ ಶುನಕಾ, ಆ್ಯಂಜಲೊ ಮ್ಯಾಥ್ಯೂಸ್, ನಿರ್ಶೋನ್ ಡಿಕ್’ವೆಲ್ಲಾ, ಕುಸಾಲ್ ಮೆಂಡಿಸ್, ವುನಿದು ಹರ್ಸಂಗಾ, ಲಕ್ಸನ್ ಸಂದಕನ್, ಧನಂಜಯ್ ಡಿ ಸಿಲ್ವಾ, ಲಹಿರು ಕುಮಾರ, ಇಸಾರು ಉದಾನಾ.