Asianet Suvarna News

ಭಾರತ ವಿರುದ್ದದ ಸರಣಿಗೆ ಕೊನೆಗೂ ಲಂಕಾ ಕ್ರಿಕೆಟ್ ತಂಡ ಪ್ರಕಟ

* ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ

* 24 ಆಟಗಾರರನ್ನೊಳಗೊಂಡ ಲಂಕಾ ತಂಡ ಪ್ರಕಟಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

* ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿ ಜುಲೈ 18ರಿಂದ ಆರಂಭ 

Sri Lanka Cricket Board announces Squad For Limited Over Series Against India kvn
Author
Colombo, First Published Jul 17, 2021, 9:31 AM IST
  • Facebook
  • Twitter
  • Whatsapp

ಕೊಲಂಬೊ(ಜು.17): ಭಾರತ ವಿರುದ್ಧದ 3 ಏಕದಿನ, 3 ಟಿ20 ಪಂದ್ಯಗಳ ಸರಣಿಗೆ ಶ್ರೀಲಂಕಾ ಕೊನೆಗೂ 24 ಸದಸ್ಯರ ತಂಡವನ್ನು ಪ್ರಕಟಿಸಿದೆ. ದಸುನ್‌ ಶನಕ ತಂಡದ ನಾಯಕರಾಗಿ ನೇಮಕಗೊಂಡಿದ್ದು, ಕಳೆದ 4 ವರ್ಷಗಳಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ನಾಯಕನಾಗುತ್ತಿರುವ 10ನೇ ಆಟಗಾರ ಎನಿಸಿದ್ದಾರೆ. 

ಭಾನುವಾರ(ಜು.18) ಮೊದಲ ಏಕದಿನ ಪಂದ್ಯ ನಡೆಯಲಿದೆ. ಇಂಗ್ಲೆಂಡ್‌ ಪ್ರವಾಸದಿಂದ ವಾಪಸಾದ ಬಳಿಕ ಲಂಕಾ ತಂಡದಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಲಂಕಾ ಕ್ರಿಕೆಟ್‌ ಮಂಡಳಿ ಒಟ್ಟು 3 ತಂಡಗಳನ್ನು ಸಿದ್ಧಪಡಿಸಿತ್ತು. ಅಂತಿಮವಾಗಿ ಸರಣಿ ಆರಂಭಕ್ಕೆ ಕೇವಲ 2 ದಿನ ಬಾಕಿ ಇರುವಾಗ ತಂಡವನ್ನು ಪ್ರಕಟಿಸಿದೆ.

ಕುಸಾಲ್‌ ಪೆರೆರಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ದಸುನ್‌ ಶನಕ ಅವರಿಗೆ ನಾಯಕತ್ವ ಪಟ್ಟ ಕಟ್ಟಿದ ಬೆನ್ನಲ್ಲೇ ಬಲಗೈ ಗಾಯದ ಕಾರಣದಿಂದಾಗಿ ಕುಸಾಲ್ ಪೆರೆರಾ ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹೊರಬಿದ್ದಿದ್ದಾರೆ. ಇನ್ನು ವೇಗಿ ಬಿನುರಾ ಫರ್ನಾಂಡೋ ಕೂಡಾ ಭಾರತ ವಿರುದ್ದದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

#BreakingNews ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಮತ್ತೆ ಕೊಂಚ ಬದಲಾವಣೆ..!

ಭಾರತ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 18ರಿಂದ ಆರಂಭವಾಗಲಿದೆ. ಏಕದಿನ ಸರಣಿಯು ಜುಲೈ 18, 20 ಹಾಗೂ 23ರಂದು ನಡೆದರೆ, ಟಿ20 ಸರಣಿಯು ಜುಲೈ 25, 27 ಹಾಗೂ 29ರಂದು ನಡೆಯಲಿದೆ.

Follow Us:
Download App:
  • android
  • ios