ಜೋಹಾನ್ಸ್‌ಬರ್ಗ್‌(ಮಾ.01): ದಕ್ಷಿಣ ಆಫ್ರಿಕಾ ವೇಗದ ಬೌಲರ್‌ ಕಗಿಸೊ ರಬಾಡ, ಮುಂಬರುವ ಭಾರತ ಪ್ರವಾಸ ಹಾಗೂ ಆಸ್ಪ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. 

ಕಿವೀಸ್ ಎದುರಿನ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಶಾಂತ್ ಶರ್ಮಾ..!

ತೊಡೆ ಸಂಧಿಯ ನೋವಿನಿಂದ ಬಳಲುತ್ತಿರುವ ರಬಾಡ, ಮುಂದಿನ 4 ವಾರಗಳ ಕಾಲ ವಿಶ್ರಾಂತಿಯಲ್ಲಿರಲಿದ್ದಾರೆ. ಬುಧವಾರ ಮುಕ್ತಾಯವಾದ ಆಸ್ಪ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದ ವೇಳೆ ರಬಾಡ ಗಾಯಗೊಂಡಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದರು.

ಹುಡುಗಿಯರ ಆಕರ್ಷಿಸಲು ಹೋಗಿ ಗಾಯಕ್ಕೆ ತುತ್ತಾದ ಕ್ರಿಕೆಟಿಗ ರಸೆಲ್!

ಮಾ.12ರಿಂದ ದ.ಆಫ್ರಿಕಾ, ಭಾರತ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ವರ್ಷದಾರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತ ಪ್ರವಾಸ ಕೈಗೊಂಡಿತ್ತು. 3 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇನ್ನು 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.