ಭಾರಿ ಮಳೆ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ರದ್ದು!
ಭಾರಿ ಮಳೆಯ ಕಾರಣದಿಂದಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಟಾಸ್ ಕಾಣದೇ ರದ್ದು ಕಂಡಿದೆ.
ಡರ್ಬನ್ (ಡಿ.10): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಒಂದೂ ಎಸೆತ ಕಾಣದೇ ರದ್ದುಗೊಂಡಿದೆ. ಡರ್ಬನ್‌ನಲ್ಲಿ ನಿರಂತರವಾಗಿ ಮಳೆ ಸುರಿದ ಕಾರಣದಿಂದ ಪಂದ್ಯದಲ್ಲಿ ಟಾಸ್ ಕೂಡ ನಡೆದಿರಲಿಲ್ಲ. ಇದೀಗ, ಮಂಗಳವಾರ ಎರಡನೇ ಪಂದ್ಯ ನಡೆಯಲಿರುವ ಪೋರ್ಟ್ ಎಲಿಜಬೆತ್ ಕಡೆಗೆ ಎಲ್ಲರ ಗಮನ ನೆಟ್ಟಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡ ಆಡಲಿರುವ ಕೇವಲ 6 ಟಿ20 ಪಂದ್ಯಗಳ ಪೈಕಿ ಮೊದಲನೆಯ ಟಿ20 ಪಂದ್ಯ ಇದಾಗಿತ್ತು. ಇಡೀ ದಿನ ಗುಡುಗು ಸಿಡಿಲಿನಿಂದ ಮಳೆ ಆರ್ಭಟಿಸಿತ್ತು. ಇದರಿಂದಾಗಿ ಪಂದ್ಯ ನೋಡಲು ಆಗಮಿಸಿದ್ದ ಭಾರೀ ಅಭಿಮಾನಿಗಳಿಗೆ ನಿರಾಸೆಯಾಯಿತು. ಸ್ಥಳೀಯ ಕಾಲಮಾನ ಸಂಜೆ 4 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತಾದರೂ, ಒಂದು ಗಂಟೆ 54 ನಿಮಿಷಗಳ ವಿಳಂಬದ ಬಳಿಕ ಪಂದ್ಯವನ್ನು ರದ್ದು ಮಾಡಲಾಯಿತು.
ಇನ್ನು ಡರ್ಬನ್‌ನ ಕಿಂಗ್ಸ್‌ಮೇಡ್ ಪಾಲಿಗೆ ಇದು ನಿರಾಸೆಯ ವಿಚಾರವಾಗಿತ್ತು. ಆದರೆ, ಈ ವರ್ಷ ಶತಮಾನೋತ್ಸವ ಆಚರಣೆ ಮಾಡುತ್ತಿರುವ ಡರ್ಬನ್ ಸ್ಟೇಡಿಯಂನಲ್ಲಿ ಈ ವರ್ಷ ಮತ್ತೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಲ್ಲ. ಇದು ಅನುಭವಿ ಗ್ರೌಂಡ್ಸ್‌ಮನ್ ವಿಲ್ಸನ್ ಎನ್‌ಗೊಬೆಸ್ ಅವರ ಕೊನೆಯ ಅಂತರರಾಷ್ಟ್ರೀಯ ಪಿಚ್ ಕೂಡ ಆಗಿತ್ತು. ಏಕೆಂದರೆ ಅವರು ಋತುವಿನ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ ಮುಂದಿನ ಗುರುವಾರ ಪ್ರಾರಂಭವಾಗುವ ಡಾಲ್ಫಿನ್ಸ್ ಮತ್ತು ಲಯನ್ಸ್ ನಡುವಿನ ಪ್ರಥಮ ದರ್ಜೆ ಪಂದ್ಯ ಮತ್ತು ಮುಂದಿನ ವರ್ಷದ ಆರಂಭದಲ್ಲಿ SA20 ಪಂದ್ಯಗಳನ್ನು ಒಳಗೊಂಡಂತೆ ಕಿಂಗ್ಸ್‌ಮೀಡ್ ಇನ್ನೂ ದೇಶೀಯ ಪಂದ್ಯಗಳನ್ನು ಆಯೋಜಿಸುತ್ತದೆ.
ಸರಣಿಯ ಎರಡನೇ ಮತ್ತು ಮೂರನೇ ಪಂದ್ಯಗಳು ಅನುಕ್ರಮವಾಗಿ ಮಂಗಳವಾರ ಮತ್ತು ಗುರುವಾರ ಗ್ಕೆಬರ್ಹಾ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ಮಂಗಳವಾರ ಮಧ್ಯಾಹ್ನ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಮಳೆ ಮುನ್ಸೂಚನೆ ಇದ್ದರೆ, ವಾರವಿಡೀ ವಾಂಡರರ್ಸ್‌ನಲ್ಲಿ ಮೋಡ ಕವಿದ ಆಕಾಶದ ಸೂಚನೆಯಿದೆ.