ಢಾಕ(ಮೇ.11): ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್‌ ಕ್ರಿಕೆಟ್ ಆರಂಭಿಸವ ಮೊದಲೇ ಟೀಂ ಇಂಡಿಯಾದ ಸೌರವ್ ಗಂಗೂಲಿ ರೋಲ್ ಮಾಡೆಲ್. ಸರ್ಕಾರ್ ಪಾಲಿಗೆ ಗಂಗೂಲಿಯೇ ಹೀರೋ. ಗಂಗೂಲಿ ನೋಡಿ ಕ್ರಿಕೆಟ್ ಆರಂಭಿಸಿದ ಸೌಮ್ಯ ಸರ್ಕಾರ ಇದೀಗ ಬಾಂಗ್ಲಾದೇಶ ತಂಡದ ಆರಂಭಿಕ ಹಾಗೂ ಖಾಯಂ ಸದಸ್ಯನಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಯುವ ಕ್ರಿಕೆಟಿಗರಿಗೆ ಮಹತ್ವದ ಸಲಹೆ ನೀಡಿದ ಯುವರಾಜ್ ಸಿಂಗ್!.

ಬಾಲ್ಯದಿಂದಲೇ ಸೌರವ್ ಗಂಗೂಲಿ ಅಂದರೆ ಎಲ್ಲಿಲ್ಲದ ಪ್ರೀತಿ. ಗಂಗೂಲಿ ರೀತಿ ಸಿಕ್ಸರ್ ಸಿಡಿಸಬೇಕು ಅನ್ನೋ ಬಯಕೆಯಾಗಿತ್ತು. ನನ್ನ ಬ್ಯಾಟಿಂಗ್ ನೋಡಿದ ಸಹೋದರ ಗಂಗೂಲಿ ರೀತಿಯೇ ಆಗುತ್ತಿ ಎಂದಿದ್ದರು. ನಾನು ಎಡಗೈ ಬ್ಯಾಟ್ಸ್‌ಮನ್ ಆಗಿರಲಿಲ್ಲ, ಆದರೆ ಸಹೋದರನ ಸಲಹೆಯಿಂದ ಎಡಗೈ ಬ್ಯಾಟಿಂಗ್ ಅಭ್ಯಾಸ ಮಾಡಿದೆ ಎಂದು ಸೌಮ್ಯ ಸರ್ಕಾರ ಹೇಳಿದ್ದಾರೆ.

ಯುವಿ ಪಾ ಎಂದು ಕರೆದಾಗಲೇ ನಿವೃತ್ತಿಗೆ ಯೋಚಿಸಿದ್ದೆ; ಯುವರಾಜ್ ವಿದಾಯದ ಸೀಕ್ರೆಟ್ ಬಹಿರಂಗ

ಗಂಗೂಲಿ ಬ್ಯಾಟಿಂಗ್‌ನ್ನು ಟಿವಿಯಲ್ಲಿ ನೋಡುತ್ತಿದ್ದೆ. ಅದರಲ್ಲೂ ಭಾರತ-ಪಾಕಿಸ್ತಾನ ಪಂದ್ಯವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಗಂಗೂಲಿ ಕವರ್ ಡ್ರೈವ್ ಶಾಟ್ ಹಾಗೂ ಸ್ಪಿನ್ನರ್‌ಗಳಿಗೆ ಫ್ರಂಟ್ ಫೂಟ್ ಸಿಕ್ಸರ್ ನನ್ನ ಫೇವರಿಟ್ ಆಗಿತ್ತು. ನಾನು ಅಂಡರ್ 19 ತಂಡಕ್ಕೆ ಆಯ್ಕೆಯಾಗುವಾಗ ಗಂಗೂಲಿ ವಿದಾಯ ಹೇಳಿದ್ದರು. ಈ ವೇಳೆ ನಾನು ಯುವರಾಜ್ ಸಿಂಗ್ ಬ್ಯಾಟಿಂಗ್ ನೋಡಲು ಇಷ್ಟಪಡುತ್ತಿದೆ. ಎದುರಾಳಿಯನ್ನು ಸ್ಫೋಟಕ ಬ್ಯಾಟಿಂಗ್ ಮೂಲಕ ಸರ್ವನಾಶ ಮಾಡುತ್ತಿದ್ದ ಯುವಿ ಬ್ಯಾಟಿಂಗ್ ಹೆಚ್ಚು ಇಷ್ಟಪಡುತ್ತಿದ್ದೆ ಎಂದು ಸರ್ಕಾರ್ ಹೇಳಿದ್ದಾರೆ.

ಯುವಿಯನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶವೂ ಒದಗಿಬಂದಿತ್ತು. ಈ ವೇಳೆ ಸಂದರ್ಭ ಹೇಗೆ ಇರಬಹುದು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಯವಿ ಸಲಹೆ ನೀಡಿದ್ದಾರೆ. ಯುವಿ ರೀತಿ ಬ್ಯಾಟಿಂಗ್ ಮಾಡಬೇಕು. ತಂಡಕ್ಕಾಗಿ ಪಂದ್ಯ ಗೆಲ್ಲಿಸಿಕೊಡಬೇಕು ಎನ್ನುದು ನನ್ನ ಆಸೆ ಎಂದು ಸೌಮ್ಯ ಸರ್ಕಾರ್ ಹೇಳಿದ್ದಾರೆ.