Asianet Suvarna News Asianet Suvarna News

ಕೆಲವರು NCA ಕಾಯಂ ನಿವಾಸಿಗಳಾಗಿದ್ದಾರೆ: ಟೀಂ ಇಂಡಿಯಾ ಆಟಗಾರರ ವಿರುದ್ದ ರವಿಶಾಸ್ತ್ರಿ ಕಿಡಿ

ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವುದರ ಬಗ್ಗೆ ರವಿಶಾಸ್ತ್ರಿ ಆಕ್ರೋಶ
ಕೆಲ ಆಟ​ಗಾ​ರರು ಮೂರ್ನಾಲ್ಕು ವರ್ಷದಿಂದ ಎನ್‌​ಸಿ​ಎನಲ್ಲೇ ಕಾಲ ಕಳೆ​ಯು​ವಂತಾ​ಗಿದೆ
ಸತ​ತ​ವಾಗಿ 4 ಪಂದ್ಯ​ಗ​ಳನ್ನು ಆಡಲು ಅವ​ರಿಗೆ ಸಾಧ್ಯ​ವಾ​ಗು​ತ್ತಿಲ್ಲ

Some have become permanent residents of NCA Says Ravi Shastri kvn
Author
First Published Apr 13, 2023, 12:28 PM IST

ನವ​ದೆ​ಹ​ಲಿ(ಏ.13): ಭಾರ​ತದ ತಾರಾ ಬೌಲ​ರ್‌​ಗಳು ಸತ​ತ​ವಾಗಿ ಗಾಯ​ಗೊ​ಳ್ಳು​ತ್ತಿ​ರುವ ಬಗ್ಗೆ ತಂಡದ ಮಾಜಿ ಕೋಚ್‌ ರವಿ ಶಾಸ್ತ್ರಿ ಕಿಡಿ​ಕಾ​ರಿದ್ದು, ಕೆಲ ಆಟ​ಗಾ​ರರು ಎನ್‌​ಸಿಎನ​ ಕಾಯಂ ನಿವಾ​ಸಿ​ಗ​ಳಾ​ಗಿ​ದ್ದಾರೆ ಎಂದಿ​ದ್ದಾರೆ. ಈ ಬಗ್ಗೆ ಸಂದ​ರ್ಶ​ನ​ವೊಂದ​ರಲ್ಲಿ ಮಾತ​ನಾ​ಡಿದ ಅವರು, ‘ಕ​ಳೆದ 3-4 ವರ್ಷ​ಗ​ಳಿಂದ ಕೆಲ ಆಟ​ಗಾ​ರರು ಎನ್‌​ಸಿ​ಎನಲ್ಲೇ ಕಾಲ ಕಳೆ​ಯು​ವಂತಾ​ಗಿದೆ. ಸತ​ತ​ವಾಗಿ 4 ಪಂದ್ಯ​ಗ​ಳನ್ನು ಆಡಲು ಅವ​ರಿಗೆ ಸಾಧ್ಯ​ವಾ​ಗು​ತ್ತಿಲ್ಲ. ಅಲ್ಲಿಂದ ಮರಳಿ ಬಂದು ಮತ್ತೆ ಗಾಯ​ಗೊ​ಳ್ಳು​ತ್ತಿ​ದ್ದಾರೆ. ಹಾಗಿ​ದ್ದರೆ ಎನ್‌​ಸಿ​ಎಗೆ ಏಕೆ ಹೋಗ​ಬೇಕು. ಸಂಪೂರ್ಣ ಗುಣ​ಮು​ಖ​ವಾದ ಬಳಿ​ಕವೇ ಆಡ​ಬೇ​ಕು’ ಎಂದು ಖಾರ​ವಾಗಿ ಪ್ರತಿಕ್ರಿ​ಯಿ​ಸಿ​ದ್ದಾರೆ.

ಬಿಸಿಸಿಐ, ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿದ್ದು, ಇಲ್ಲಿ ಕೇಂದ್ರೀಯ ಗುತ್ತಿಗೆ ಪಡೆದ ಆಟಗಾರರ ಗಾಯಗೊಂಡಾಗ ತಜ್ಞ ವೈದ್ಯಕೀಯ ಸಿಬ್ಬಂದಿಗಳು, ಆಟಗಾರರು ಚೇತರಿಸಿಕೊಳ್ಳಲು ನೆರವು ನೀಡುತ್ತಾ ಬಂದಿದ್ದಾರೆ. 

ಟಿ20 ರ‍್ಯಾಂಕಿಂಗ್‌‌: ನಂ.1 ಸ್ಥಾನ​ದ​ಲ್ಲಿ ಸೂರ್ಯಕುಮಾರ್ ಯಾದವ್ ಭದ್ರ

ದುಬೈ: ಭಾರ​ತದ ತಾರಾ ಬ್ಯಾಟರ್‌ ಸೂರ‍್ಯ​ಕು​ಮಾರ್‌ ಯಾದವ್ ಐಸಿಸಿ ಟಿ20 ರ‍್ಯಾಂಕಿಂಗ್‌‌​ನಲ್ಲಿ ಅಗ್ರ​ಸ್ಥಾ​ನ​ದಲ್ಲೇ ಮುಂದು​ವ​ರಿ​ದಿ​ದ್ದಾರೆ. ಬುಧ​ವಾರ ಪ್ರಕ​ಟ​ಗೊಂಡ ನೂತನ ಪಟ್ಟಿ​ಯಲ್ಲಿ ಅವರು 906 ರೇಟಿಂಗ್‌ ಅಂಕ​ಗ​ಳನ್ನು ಸಂಪಾ​ದಿ​ಸಿ​ದ್ದಾರೆ. ವಿರಾಟ್‌ ಕೊಹ್ಲಿ 15ನೇ ಸ್ಥಾನ ಕಾಯ್ದು​ಕೊಂಡಿದ್ದು, ಪಾಕಿ​ಸ್ತಾನದ ಮೊಹ​ಮದ್‌ ರಿಜ್ವಾನ್‌, ಬಾಬರ್‌ ಆಜಂ ಕ್ರಮ​ವಾಗಿ 2 ಮತ್ತು 3ನೇ ಸ್ಥಾನ​ಗ​ಳ​ಲ್ಲಿ​ದ್ದಾರೆ. ಆದರೆ ಬೌಲ​ರ್‌​ಗಳ ಪಟ್ಟಿ​ಯಲ್ಲಿ ಯಾವುದೇ ಭಾರ​ತೀಯ ಅಗ್ರ 10ರಲ್ಲಿ ಸ್ಥಾನ ಪಡೆ​ದಿಲ್ಲ. ಆಲ್ರೌಂಡ್‌​ ವಿಭಾ​ಗ​ದಲ್ಲಿ ಹಾರ್ದಿಕ್‌ 2ನೇ ಸ್ಥಾನ​ದ​ಲ್ಲಿ​ದ್ದಾ​ರೆ.

ವಿಶ್ವಕಪ್‌ಗೆ ಬಿಸಿಸಿಐನಿಂದ 5 ಕ್ರೀಡಾಂಗಣ ನವೀಕರಣ

ನವ​ದೆ​ಹ​ಲಿ: ಭಾರತದ ಕ್ರಿಕೆಟ್‌ ಕ್ರೀಡಾಂಗ​ಣ​ಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪದೇ ಪದೇ ದೂರು​ ಕೇಳಿ ಬರು​ತ್ತಿ​ರುವ ಹಿನ್ನೆ​ಲೆ​ಯಲ್ಲಿ, ಅಕ್ಟೋ​ಬ​ರ್‌-ನವೆಂಬ​ರ್‌​ನಲ್ಲಿ ನಡೆ​ಯ​ಲಿ​ರುವ ಐಸಿಸಿ ಏಕ​ದಿನ ವಿಶ್ವ​ಕ​ಪ್‌ಗೂ ಮುನ್ನ 5 ಪ್ರಮುಖ ಕ್ರೀಡಾಂಗ​ಣ​ಗ​ಳನ್ನು ನವೀ​ಕ​ರಣಗೊಳಿ​ಸಲು ಬಿಸಿ​ಸಿಐ ನಿರ್ಧರಿಸಿದೆ. 

IPL 2023: ಸಿಎಸ್‌ಕೆ ಸೋಲಿಗೆ ಬ್ಯಾಟರ್‌ಗಳೇ ಕಾರಣ: ಕ್ಯಾಪ್ಟನ್ ಕೂಲ್ ಧೋನಿ ಗರಂ

ವರ​ದಿ​ಗಳ ಪ್ರಕಾ​ರ ನವ​ದೆ​ಹಲಿ, ಹೈದ​ರಾ​ಬಾದ್‌, ಕೋಲ್ಕತಾ, ಮೊಹಾಲಿ ಹಾಗೂ ಮುಂಬೈ ಕ್ರೀಡಾಂಗ​ಣ​ಗಳನ್ನು ನವೀ​ಕ​ರಣಗೊಳಿ​ಸ​ಲಿದ್ದು, ಇದಕ್ಕೆ ಸುಮಾರು 500 ಕೋಟಿ ರುಪಾಯಿಗೂ ಹೆಚ್ಚು ವೆಚ್ಚ​ವಾ​ಗ​ಲಿದೆ ಎಂದು ತಿಳಿ​ದು​ಬಂದಿದೆ. ಕ್ರೀಡಾಂಗ​ಣ​ಗಳ ಶೌಚಾ​ಲಯ, ಶುದ್ಧ ಕುಡಿಯುವ ನೀರು, ಆಸನ ವ್ಯವಸ್ಥೆಗಳ ಸುಧಾರಣೆಗೆ ಬಿಸಿಸಿಐ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಏ​ಷ್ಯಾ​ಕಪ್‌ ಹಕ್ಕು ಕೈತ​ಪ್ಪಿ​ದ್ರೆ ಪಾಕ್‌ಗೆ 25 ಕೋಟಿ ರುಪಾಯಿ ನ​ಷ್ಟ!

ಕರಾ​ಚಿ: ಏಷ್ಯಾಕಪ್‌ ಆತಿಥ್ಯ ಹಕ್ಕು ಬಿಟ್ಟುಕೊಡುವು​ದಿಲ್ಲ ಎಂದು ಪಾಕಿ​ಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ನಜಂ ಸೇಠಿ ಪುನರುಚ್ಚರಿಸಿದ್ದು, ಟೂರ್ನಿಯಿಂದ ಹಿಂದೆ ಸರಿದರೆ 3 ಮಿಲಿಯನ್‌ ಡಾಲರ್‌(ಅಂದಾಜು 25 ಕೋಟಿ ರು.) ನಷ್ಟವಾಗಲಿದೆ ಎಂದು ಹೇಳಿ​ದ್ದಾರೆ. ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಅವರು, ‘ಟೂ​ರ್ನಿ​ಯನ್ನು ಪಾಕಿಸ್ತಾನದಲ್ಲೇ ಆಯೋ​ಜಿಸಿ, ಭಾರತದ ಪಂದ್ಯಗಳನ್ನಷ್ಟೇ ಬೇರೆಡೆ ನಡೆಸಲು ಪ್ರಸ್ತಾಪಿಸಿದ್ದೇವೆ. ಈ ಪ್ರಸ್ತಾಪವನ್ನು ಹೊರತುಪಡಿಸಿ ಬೇರಾರ‍ಯವುದಕ್ಕೂ ನಾವು ಒಪ್ಪುವುದಿಲ್ಲ ಎಂದು ಏಷ್ಯಾ ಕ್ರಿಕೆಟ್‌ ಸಮಿತಿ(ಎಸಿಸಿ)ಗೆ ಸ್ಪಷ್ಟವಾಗಿ ತಿಳಿಸಿದ್ದೇವೆ’ ಎಂದಿದ್ದಾರೆ.

ಅಂಧ ಮಹಿಳಾ ಕ್ರಿಕೆಟ್‌ ಟೀಂಗೆ ರಾಜ್ಯದ ಮೂವರು

ಬೆಂಗ​ಳೂ​ರು: ಇದೇ ಮೊದಲ ಬಾರಿಗೆ ಭಾರತ ಅಂಧ ಮಹಿಳೆಯರ ಕ್ರಿಕೆಟ್‌ ತಂಡವನ್ನು ಆಯ್ಕೆ ಮಾಡ​ಲಾ​ಗಿ​ದ್ದು, ರಾಜ್ಯದ ಗಂಗವ್ವ ಉಪನಾಯಕಿಯಾಗಿ ನೇಮ​ಕ​ಗೊಂಡಿ​ದ್ದಾ​ರೆ. ಏ.25ರಿಂದ 30ರ ವರೆಗೂ ನೇಪಾಳದಲ್ಲಿ ನಡೆ​ಯ​ಲಿ​ರುವ ದ್ವಿಪಕ್ಷೀಯ ಸರಣಿಗೆ 17 ಸದಸ್ಯೆಯರ ತಂಡವನ್ನು ಮಂಗ​ಳ​ವಾರ ಪ್ರಕ​ಟಿ​ಸ​ಲಾ​ಯಿತು. ತಂಡ​ವನ್ನು ಸುಷ್ಮಾ ಪಟೇಲ್‌ ಮುನ್ನ​ಡೆ​ದ​ಲಿದ್ದು, ರಾಜ್ಯದ ವರ್ಷಾ, ದೀಪಿಕಾ ಕೂಡಾ ಸ್ಥಾನ ಗಿಟ್ಟಿ​ಸಿ​ಕೊಂಡಿ​ದ್ದಾರೆ. ಅಂಧರ ತಂಡವು ಅಂತಾರಾಷ್ಟ್ರೀಯ ಸರಣಿ ಆಡಲು ಸಜ್ಜಾಗುತ್ತಿರುವುದಕ್ಕೆ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಟ್ವೀಟ​ರಲ್ಲಿ ಸಂತಸ ವ್ಯಕ್ತ​ಪ​ಡಿ​ಸಿ​ದ್ದಾರೆ.

Follow Us:
Download App:
  • android
  • ios