ದೆಹಲಿ(ಜೂ.04): ಕೊರೋನಾ ವೈರಸ್ ಸಂದರ್ಭದಲ್ಲಿ ಟೀಂ ಇಂಡಿಯಾ ಹಲವು ಕ್ರಿಕೆಟಿಗರು ನಿರ್ಗತಿಗರಿಗೆ, ಬಡವರಿಗೆ, ಅಗತ್ಯವಿದ್ದವರಿಗೆ ನೆರವಾಗುತ್ತಿದ್ದಾರೆ. ದಿನಸಿ ವಸ್ತು, ಮಾಸ್ಕ್, ಸೋಂಕಿತರ ಚಿಕಿತ್ಸೆ ನೆರವು, ಪ್ರಧಾನಿ ಪರಿಹಾರ ನಿಧಿಗೆ ನೆರವು ಸೇರಿದಂತೆ ಹಲವು ರೀತಿಯ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಹಲವರಿಗೆ ನೆರವಾಗಿದ್ದಾರೆ. ಇದೀಗ ದೆಹಲಯಲ್ಲಿನ ಹಿಂದೂ ನಿರಾಶ್ರಿತರ ಕ್ಯಾಂಪ್‌ಗೆ ಭೇಟಿ ನೀಡಿದ್ದಾರೆ.

4 ಸಾವಿರ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಸಚಿನ್ ತೆಂಡುಲ್ಕರ್!

ಪಾಕಿಸ್ತಾನದಲ್ಲಿ ದೌರ್ಜನ್ಯ, ಕಿರುಕುಳದಿಂದ ಭಾರತಕ್ಕೆ ಆಗಮಿಸಿದ ಹಿಂದೂ ನಿರಾಶ್ರಿತರು ಕೊರೋನಾ ಸಂದರ್ಭದಲ್ಲಿ ಹಲವು ಸಂಕಷ್ಟ ಅನುಭವಿಸುತ್ತಿದ್ದಾರೆ. ದೆಹಲಿ ಆದರ್ಶನಗರದಲ್ಲಿನ ಪಾಕಿಸ್ತಾನದ ಹಿಂದೂ ನಿರಾಶ್ರಿತ ಕ್ಯಾಂಪ್‌ಗೆ ತೆರಳಿದ ಧವನ್, ನಿರಾಶ್ರಿತರಿಗೆ ಶೌಚಾಲಯದ ವ್ಯವಸ್ಥೆ ಮಾಡಿದ್ದಾರೆ.

 

ಮಾಡ್ಯುಲರ್ ಟಾಯ್ಲೆಟ್ ಹಾಗೂ ನಿರಾಶ್ರಿತ ಕೇಂದ್ರದಲ್ಲಿರುವ ಮಕ್ಕಳಿಗೆ ಕ್ರಿಕೆಟ್ ಕಿಟ್ ವಿತರಿಸಿದ್ದಾರೆ. ಇಷ್ಟೇ ಅಲ್ಲ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಎಲ್ಲಾ ಮುಂಜಾಗ್ರತ ಕ್ರಮಗಳೊಂದಿಗೆ ಧವನ್ ನಿರಾಶ್ರಿತ ಕೇಂದ್ರಕ್ಕೆ ಧವನ್ ಭೇಟಿ ನೀಡಿದ್ದಾರೆ.