ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಕೊರೋನಾ ವೈರಸ್ ವಿರುದ್ದ ಹೋರಾಡಲು ತಮ್ಮ ಹಸ್ತ ಚಾಚಿದ್ದಾರೆ. ತಮ್ಮ ಆಲ್ಕೋಹಾಲ್ ಫ್ಯಾಕ್ಟರಿಯಲ್ಲಿ ಮದ್ಯ ತಯಾರಿಕೆ ನಿಲ್ಲಿಸಿದ್ದಾರೆ. ಇದರ ಬದಲು ಸ್ಯಾನಿಟೈಸರ್ ಆರಂಭಿಸಿದ್ದಾರೆ. 

ಮೆಲ್ಬರ್ನ್‌(ಮಾ.20): ಕೊರೋನಾ ಸೋಂಕಿನಿಂದಾಗಿ ಎದುರಾಗಿರುವ ಸ್ಯಾನಿಟೈಸರ್‌ ಕೊರತೆಯನ್ನು ನಿವಾರಿಸಲು ಆಸ್ಪ್ರೇಲಿಯಾದ ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್‌ ಮುಂದಾಗಿದ್ದಾರೆ. ತಮ್ಮ ಡಿಸ್ಟಿಲೆರಿ (ಮದ್ಯದ ಫ್ಯಾಕ್ಟರಿ)ಯಲ್ಲಿ ಜಿನ್‌ ಬದಲಿಗೆ ಹ್ಯಾಂಡ್‌ ಸ್ಯಾನಿಟೈಸರ್‌ ತಯಾರಿಸಲು ಆರಂಭಿಸಿದ್ದಾರೆ. 

ಭಾರತದಲ್ಲಿ ಏ.15ರ ವರೆಗೂ ಯಾವುದೇ ಟೂರ್ನಿಗೆ ಅವಕಾಶವಿಲ್ಲ; ಕೇಂದ್ರ ಸರ್ಕಾರ!

ವಾರ್ನ್‌ರ ‘ಸೆವೆನ್‌ಝೀರೋ ಎಯ್ಟ್ ’ ಜಿನ್‌ ಸಂಸ್ಥೆ ವೈದ್ಯಕೀಯ ಗುಣಮಟ್ಟದ ಶೇ.70ರಷ್ಟುಆಲ್ಕೋಹಾಲ್‌ ಹೊಂದಿರುವ ಸ್ಯಾನಿಟೈಸರ್‌ ಅನ್ನು ಮಾ.17ರಿಂದ ತಯಾರಿಸುತ್ತಿವೆ. ಸ್ಯಾನಿಟೈಸರ್‌ ಬಾಟಲಿಗಳನ್ನು ಪಶ್ಚಿಮ ಆಸ್ಪ್ರೇಲಿಯಾದ ಎರಡು ಆಸ್ಪತ್ರೆಗಳಿಗೆ ಪೊರೈಸುವುದಾಗಿ ಸಂಸ್ಥೆ ತಿಳಿಸಿದೆ. 

‘ಆಸ್ಪ್ರೇಲಿಯಾಗೆ ಇದು ಸವಾಲಿನ ಸಮಯ. ಪ್ರತಿಯೊಬ್ಬರು ತಮ್ಮ ಕೈಯಲ್ಲಾದ ಸಹಾಯ ಮಾಡಬೇಕು. ಆಗ ಮಾತ್ರ ಮಾರಕ ಸೋಂಕನ್ನು ತಡೆಗಟ್ಟಲು ಸಾಧ್ಯ’ ಎಂದು ವಾರ್ನ್‌ ತಾವು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.