ಆನಂದ್‌ಬಜಾರ್ ಪತ್ರಿಕಾ ವರದಿಯ ಪ್ರಕಾರ, ಫ್ರಾಂಚೈಸಿಯು ಯಾವುದೇ ಮಾಹಿತಿ ನೀಡದೇ ನಿನ್ನೆ ಸಂಜೆ ಪ್ರೆಸ್ ಕಾನ್ಫರೆನ್ಸ್ ಕೂಡಾ ರದ್ದು ಮಾಡಿತ್ತು. ಮೂಲಗಳ ಪ್ರಕಾರ ಆರ್‌ಸಿಬಿ ತಂಡಕ್ಕೆ ಭದ್ರತಾ ಭೀತಿ ಎದುರಾಗಿದೆ. ಆರ್‌ಸಿಬಿ ಪಾಳಯದಲ್ಲಿ ಏನೇನೋ ಬೆಳವಣಿಗೆಗಳು ನಡೆಯುತ್ತಿವೆ ಎಂದು ವರದಿ ಮಾಡಿದೆ.

ಅಹಮದಾಬಾದ್(ಮೇ.22): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. 

ಮಹತ್ವದ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ತನ್ನ ಪ್ರಾಕ್ಟೀಸ್ ಸೆಷನ್ ರದ್ದು ಮಾಡಿದೆ. ವಿರಾಟ್ ಕೊಹ್ಲಿಯ ಭದ್ರತೆಯ ವಿಚಾರದಲ್ಲಿ ಮಹಾ ಯಡವಟ್ಟು ಎದುರಾಗುವ ಭೀತಿ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಆರ್‌ಸಿಬಿ ಫ್ರಾಂಚೈಸಿ ತನ್ನ ಪ್ರಾಕ್ಟೀಸ್ ಸೆಷನ್ ಕ್ಯಾನ್ಸಲ್ ಮಾಡಿದೆ. ಮೂಲಗಳ ಪ್ರಕಾರ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡವು ಅಹಮದಾಬಾದ್‌ನ ಗುಜರಾತ್ ಕಾಲೇಜ್ ಮೈದಾನದಲ್ಲಿ ಅಭ್ಯಾಸ ಮಾಡಬೇಕಿತ್ತು.

ಆನಂದ್‌ಬಜಾರ್ ಪತ್ರಿಕಾ ವರದಿಯ ಪ್ರಕಾರ, ಫ್ರಾಂಚೈಸಿಯು ಯಾವುದೇ ಮಾಹಿತಿ ನೀಡದೇ ನಿನ್ನೆ ಸಂಜೆ ಪ್ರೆಸ್ ಕಾನ್ಫರೆನ್ಸ್ ಕೂಡಾ ರದ್ದು ಮಾಡಿತ್ತು. ಮೂಲಗಳ ಪ್ರಕಾರ ಆರ್‌ಸಿಬಿ ತಂಡಕ್ಕೆ ಭದ್ರತಾ ಭೀತಿ ಎದುರಾಗಿದೆ. ಆರ್‌ಸಿಬಿ ಪಾಳಯದಲ್ಲಿ ಏನೇನೋ ಬೆಳವಣಿಗೆಗಳು ನಡೆಯುತ್ತಿವೆ ಎಂದು ವರದಿ ಮಾಡಿದೆ.

ಇನ್ನು ಗುಜರಾತ್ ಪೋಲಿಸ್ ಮೂಲಗಳ ಪ್ರಕಾರ ಆರ್‌ಸಿಬಿ ಫ್ರಾಂಚೈಸಿಯು ನಿನ್ನ ಸಂಜೆ ಪ್ರೆಸ್ ಕಾನ್ಫರೆನ್ಸ್ ಹಾಗೂ ಇಂದು ಪ್ರಾಕ್ಟೀಸ್ ಸೆಷನ್ ರದ್ದು ಮಾಡಲು ಮೂಲ ಕಾರಣ ವಿರಾಟ್ ಕೊಹ್ಲಿಯ ಭದ್ರತೆಯ ವಿಚಾರವೇ ಕಾರಣ ಎಂದಿದೆ. ಅಹಮದಾಬಾದ್‌ ಪೊಲೀಸರು ಭಯೋತ್ಫಾದಕ ಚಟುವಟಿಕೆ ಹಿನ್ನೆಲೆಯಲ್ಲಿ ನಾಲ್ವರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

"ವಿರಾಟ್ ಕೊಹ್ಲಿ ಅಹಮದಾಬಾದ್‌ಗೆ ಬಂದಿಳಿಯುತ್ತಿದ್ದಂತೆಯೇ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿರಾಟ್ ಕೊಹ್ಲಿ ರಾಷ್ಟ್ರೀಯ ಸಂಪತ್ತು. ಅವರಿಗೆ ರಕ್ಷಣೆ ಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಪೋಲಿಸ್‌ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ತಿಳಿಸಿದ್ದಾರೆ.

"ಆರ್‌ಸಿಬಿ ತಂಡವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ. ಅವರು ನಮ್ಮ ತಂಡ ಅಭ್ಯಾಸ ನಡೆಸುವುದಿಲ್ಲ ಎಂದು ಈಗಾಗಲೇ ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ. ರಾಜಸ್ಥಾನ ರಾಯಲ್ಸ್‌ಗೂ ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸಲು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾಗಿ ಪೋಲಿಸ್ ಅಧಿಕಾರಿಗಳು ಹೇಳಿದ್ದಾರೆ.