ನವದೆಹಲಿ(ಮಾ.19): ಭಾರತ ಕ್ರಿಕೆಟ್‌ ತಂಡದ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌, ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ನೀಡಿದ ಆಫರ್‌ ಅನ್ನು ತಿರಸ್ಕರಿಸಿದ್ದಾರೆ. ಬಾಂಗ್ಲಾ ಟೆಸ್ಟ್‌ ತಂಡದ ಬ್ಯಾಟಿಂಗ್‌ ಸಲಹೆಗಾರರಾಗಿ ಕಾರ್ಯನಿರ್ವಹಿಸುವಂತೆ ಬಾಂಗರ್‌ರನ್ನು 2 ತಿಂಗಳ ಹಿಂದೆ ಬಿಸಿಬಿ ಸಂಪರ್ಕಿಸಿತ್ತು. ಆದರೆ ವೈಯಕ್ತಿಕ ಹಾಗೂ ವೃತ್ತಿಪರ ಕಾರಣಗಳನ್ನು ನೀಡಿ ಬಾಂಗರ್‌ ಹುದ್ದೆ ಅಲಂಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಕೋಚ್ ಹುದ್ದೆಯಿಂದ ಗೇಟ್‌ಪಾಸ್: ಮೌನ ಮುರಿದ ಬಾಂಗರ್

ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಅನುಭವ ಹೊಂದಿರುವ ಬಂಗಾರ್ ಈ ಹಿಂದೆ ಕೂಡ ಬಾಂಗ್ಲಾದೇಶ ಆಹ್ವಾನ ನೀಡಿತ್ತು. ಭಾರತ ತಂಡದ ಕೋಚ್ ಡಂಕನ್ ಫ್ಲೆಚರ್ ನಿರ್ಗಮನದ ಬಳಿಕ ಬಂಗಾರ್ ಟೀಂ ಇಂಡಿಯಾದಲ್ಲಿ ಸಕ್ರಿಯರಾಗಿದ್ದರು. ರವಿ ಶಾಸ್ತ್ರಿ ನಿರ್ದೇಶಕನಾಗಿ, ಕೋಚ್ ಆಗಿ ಆಯ್ಕೆಯಾದಾಗಲೂ ಬಂಗಾರ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಗಮನಸೆಳಿದಿದ್ದರು. 

ಸದ್ಯ ಸಂಜಯ್ ಬಾಂಗರ್‌ ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ ಬಾಂಗ್ಲಾದೇಶ ತಂಡದ ಕೋಚ್ ಆಹ್ವಾನವನ್ನು ತಿರಸ್ಕರಿಸಿದ್ದಾರೆ.