Asianet Suvarna News Asianet Suvarna News

Round Up 2021 ಆಸೀಸ್ ಟೆಸ್ಟ್ ಸರಣಿ ಗೆಲುವಿನಿಂದ ಒಲಿಂಪಿಕ್ಸ್‌ ಗೋಲ್ಡ್‌ವರೆಗೆ; ದೇಶ ಹೆಮ್ಮೆ ಪಡುವಂತೆ ಮಾಡಿದ 5 ಕ್ಷಣಗಳು

* ದೇಶದ ಜನರ ಮೊಗದಲ್ಲಿ ನಗು ಮೂಡಿಸಿದ 2021ರ ವರ್ಷ

* ಕಳೆದೊಂದು ವರ್ಷದಲ್ಲಿ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ ಕ್ರೀಡಾಪಟುಗಳು

* ಕೊರೋನಾ ನಡುವೆಯೂ ಖುಷಿ ಕೊಟ್ಟ ಕ್ರೀಡಾ ಸ್ಮರಣೀಯ ಕ್ಷಣಗಳು

Round Up 2021 Team India Border Gavaskar Trophy win to Olympic gold Top 5 sporting moments that made India proud in 2021 kvn
Author
Bengaluru, First Published Dec 29, 2021, 2:00 PM IST

ಬೆಂಗಳೂರು(ಡಿ.29): ಕೊರೋನಾ ಹೆಮ್ಮಾರಿಯ ಭೀತಿಯ ನಡುವೆಯೂ ಜನರಲ್ಲಿ ಕೆಲವು ಖುಷಿಗೆ ಕಾರಣವಾಗಿದ್ದು ಕ್ರೀಡೆ. ಕ್ರಿಕೆಟ್‌ನಿಂದ ಹಿಡಿದು ಒಲಿಂಪಿಕ್ಸ್‌ವರೆಗೆ ಭಾರತೀಯ ಕ್ರೀಡಾಪಟುಗಳ ಸಾಧನೆ ಈ ಬಾರಿ ಅತ್ಯುತ್ತಮವಾಗಿತ್ತು. 2021ರ ವರ್ಷ ಹಲವು ಸ್ಮರಣೀಯ ಕ್ರೀಡಾ ಸಾಧನೆಗಳಿಗೆ ಸಾಕ್ಷಿಯಾಗಿದೆ. 2021ರಲ್ಲಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ ದೇಶದ 5 ಸ್ಮರಣೀಯ ಕ್ರೀಡಾ ಕ್ಷಣಗಳು ನಿಮ್ಮ ಮುಂದಿಡುತ್ತಿದ್ದೇವೆ.

1. ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಗೆಲುವು

Round Up 2021 Team India Border Gavaskar Trophy win to Olympic gold Top 5 sporting moments that made India proud in 2021 kvn

ಭಾರತ ಕ್ರಿಕೆಟ್ ತಂಡವು 4 ಪಂದ್ಯಗಳ ಟೆಸ್ಟ್‌ ಸರಣಿಯಾದ ಬಾರ್ಡರ್‌-ಗವಾಸ್ಕರ್ ಟ್ರೋಫಿ(Border-Gavaskar Trophy) ತನ್ನಲ್ಲೇ ಉಳಿಸಿಕೊಳ್ಳಲು ಕಳೆದ ಡಿಸೆಂಬರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿದ್ದ ಭಾರತ ತಂಡವು, ಎರಡನೇ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ (Ajinkya Rahane) ನೇತೃತ್ವದ ಟೀಂ ಇಂಡಿಯಾ (Team India) ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ವರ್ಷಾಂತ್ಯದ ವೇಳೆಗೆ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದವು. ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳು ಜನವರಿ ತಿಂಗಳಿನಲ್ಲಿ ನಡೆದವು. ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯವಾಯಿತು. ಇದಾದ ಬಳಿಕ ಬ್ರಿಸ್ಬೆನ್‌ನ ಗಾಬಾ ಮೈದಾನದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡು ಬಾರಿ ಟೆಸ್ಟ್ ಸರಣಿ ಜಯಿಸಿದ ಏಕೈಕ ಏಷ್ಯಾದ ತಂಡ ಎನ್ನುವ ಕೀರ್ತಿಗೆ ಭಾರತ ಕ್ರಿಕೆಟ್ ತಂಡವು ಪಾತ್ರವಾಗಿತ್ತು.

2. ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡ

Round Up 2021 Team India Border Gavaskar Trophy win to Olympic gold Top 5 sporting moments that made India proud in 2021 kvn

ಒಂದು ಕಾಲದಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಹಾಕಿ ಸಾಮ್ರಾಟನಾಗಿ ಮೆರೆದಾಡಿದ್ದ ಭಾರತ ಹಾಕಿ ತಂಡವು(Indian Hockey Team), ಕಳೆದ 40 ವರ್ಷಗಳಿಂದೀಚೆಗೆ ಪದಕದ ಬರ ಅನುಭವಿಸುತ್ತಿತ್ತು. 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ಕೊನೆಯ ಬಾರಿಗೆ ಪದಕಗಳಿಗೆ ಕೊರಳೊಡ್ಡಿತ್ತು. ಇದಾಗಿ ಬರೋಬ್ಬರಿ 41 ವರ್ಷಗಳ ಬಳಿಕ ಮನ್‌ಪ್ರೀತ್ ಸಿಂಗ್(Manpreet Singh) ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ನಲ್ಲಿ(Tokyo Olympics) ಕಂಚಿನ ಪದಕ ಜಯಿಸುವ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿತ್ತು. ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಜರ್ಮನಿ ತಂಡದ ಎದುರು ಭಾರತ ಹಾಕಿ ತಂಡವು ರೋಚಕ ಜಯ ಸಾಧಿಸಿ, ದಶಕಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ಪದಕದ ಸಾಧನೆ ಮಾಡಿತ್ತು.

3. ಪದಕ ಗೆಲ್ಲದಿದ್ದರೂ ದೇಶವಾಸಿಗಳ ಹೃದಯ ಗೆದ್ದ ಮಹಿಳಾ ಹಾಕಿ ತಂಡ

Round Up 2021 Team India Border Gavaskar Trophy win to Olympic gold Top 5 sporting moments that made India proud in 2021 kvn
ಭಾರತ ಪುರುಷರ ಹಾಕಿ ತಂಡವು ಕಂಚಿನ ಪದಕ ಜಯಿಸಿದರೆ, ರಾಣಿ ರಾಂಪಾಲ್ (Rani Rampal) ನೇತೃತ್ವದ ಮಹಿಳಾ ಹಾಕಿ ತಂಡವು ಕೂದಲೆಳೆ ಅಂತರದಲ್ಲಿ ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಭಾರತ ಮಹಿಳಾ ತಂಡವು ಶ್ರೇಷ್ಠ ಪ್ರದರ್ಶನ ತೋರಿ ಗಮನ ಸೆಳೆಯಿತು. ಒಲಿಂಪಿಕ್ಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ್ದ ಭಾರತ ಮಹಿಳಾ ಹಾಕಿ ತಂಡವು, ಅಂತಿಮವಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಹಿಳಾ ಹಾಕಿ ತಂಡದ ದಿಟ್ಟ ಹೋರಾಟಕ್ಕೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

4. ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಂಚಿ ತಾವೇನೂ ಕಮ್ಮಿಯಿಲ್ಲ ಎಂದು ಸಾಬೀತುಪಡಿಸಿದ ಪ್ಯಾರಾಥ್ಲೀಟ್‌ಗಳು

Round Up 2021 Team India Border Gavaskar Trophy win to Olympic gold Top 5 sporting moments that made India proud in 2021 kvn

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 7 ಪದಕಗಳನ್ನು ಜಯಿಸಿತ್ತು. ಆದರೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ (Tokyo Paralympics) ಕ್ರೀಡಾಕೂಟದಲ್ಲಿ 19 ಪದಕಗಳನ್ನು ಜಯಿಸಿತ್ತು. ಇದರಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ ಆರು ಕಂಚಿನ ಪದಕಗಳನ್ನು ಜಯಿಸಿತ್ತು. ಪ್ಯಾರಾ ಶೂಟರ್‌ ಅವನಿ ಲೇಖರ ಚಿನ್ನ ಹಾಗೂ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಪ್ಯಾರಾಥ್ಲೀಟ್‌ಗಳ ಸಾಧನೆಯನ್ನು ಇಡೀ ದೇಶವೇ ಸಂಭ್ರಮಿಸಿತ್ತು.

5.  ಚಿನ್ನ ಗೆದ್ದು ಶತಮಾನದ ಸಾಧನೆ ಮಾಡಿದ್ದ ನೀರಜ್ ಚೋಪ್ರಾ

Round Up 2021 Team India Border Gavaskar Trophy win to Olympic gold Top 5 sporting moments that made India proud in 2021 kvn
ಟೋಕಿಯೋ ಒಲಿಂಪಿಕ್ಸ್‌ ಕೊನೆಯಲ್ಲಿ ದೇಶದ ಹೆಮ್ಮೆಯ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ (Neeraj Chopra) 87.58 ಮೀಟರ್ ದೂರ ಜಾವೆಲಿನ್ ಥ್ರೋ(Javelin Throw) ಮಾಡುವ ಚಿನ್ನದ ಪದಕ ಕೊಳ್ಳೆ ಹೊಡೆದಿದ್ದರು. ಈ ಮೂಲಕ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎನ್ನುವ ಕೀರ್ತಿಗೆ ನೀರಜ್ ಚೋಪ್ರಾ ಭಾಜನರಾದರು. ಇನ್ನು ಅಭಿನವ್ ಬಿಂದ್ರಾ ಬಳಿಕ ವೈಯುಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎನ್ನುವ ಕೀರ್ತಿಗೆ ನೀರಜ್‌ ಚೋಪ್ರಾ ಭಾಜನರಾದರು.  

Follow Us:
Download App:
  • android
  • ios