Asianet Suvarna News Asianet Suvarna News

Ind vs WI: ಐತಿಹಾಸಿಕ 1000ನೇ ಏಕದಿನ ಪಂದ್ಯವನ್ನಾಡಲು ಸಜ್ಜಾದ ಟೀಂ ಇಂಡಿಯಾ..!

* ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬರೆಯಲು ರೆಡಿಯಾದ ಟೀಂ ಇಂಡಿಯಾ

* ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯವು ಟೀಂ ಇಂಡಿಯಾ ಆಡಲಿರುವ 1000ನೇ ಏಕದಿನ ಪಂದ್ಯ

* ಇದುವರೆಗೆ ಟೀಂ ಇಂಡಿಯಾ ಒಟ್ಟಾರೆ 999 ಏಕದಿನ ಪಂದ್ಯಗಳನ್ನು ಆಡಿದೆ

Rohit Sharma led Team India Set To Make Historic ODI Record To Become 1st Cricket Team To Play 1000 ODIs kvn
Author
Bengaluru, First Published Feb 3, 2022, 12:55 PM IST | Last Updated Feb 3, 2022, 12:55 PM IST

ಅಹಮದಾಬಾದ್(ಫೆ.03)‌: ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ 1,000 ಏಕದಿನ ಪಂದ್ಯಗಳನ್ನು ಆಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಟೀಂ ಇಂಡಿಯಾ (Team India) ಸಜ್ಜಾಗಿದೆ. ಫೆಬ್ರವರಿ 6ಕ್ಕೆ ಅಹಮದಾಬಾದ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಿಗದಿಯಾಗಿರುವ ಮೊದಲ ಏಕದಿನ ಪಂದ್ಯ ಭಾರತದ ಪಾಲಿಗೆ 1,000ದ ಏಕದಿನ ಪಂದ್ಯಾವಾಗಿರಲಿದೆ. 1974ರಲ್ಲಿ ಭಾರತ ತಂಡ ಮೊದಲ ಬಾರಿ ಏಕದಿನ ಪಂದ್ಯವಾಡಿತ್ತು. ಇಂಗ್ಲೆಂಡ್‌ ವಿರುದ್ಧ ಲೀಡ್ಸ್‌ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಅಂದಿನಿಂದ ಇದುವರೆಗೆ ಟೀಂ ಇಂಡಿಯಾ ಒಟ್ಟಾರೆ 999 ಏಕದಿನ ಪಂದ್ಯಗಳನ್ನು ಆಡಿದೆ.

ಆಸ್ಪ್ರೇಲಿಯಾ (Australia) ಮತ್ತು ಪಾಕಿಸ್ತಾನ (Pakistan) 900ಕ್ಕಿಂತಲೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿರುವ ಇತರೆ ಎರಡು ದೇಶಗಳು. ಆಸೀಸ್‌ 1971ರಿಂದ 958 ಪಂದ್ಯಗಳನ್ನಾಡಿದ್ದರೆ, ಪಾಕ್‌ 1973ರಿಂದ 936 ಪಂದ್ಯಗಳಲ್ಲಿ ಸ್ಪರ್ಧಿಸಿವೆ. ಭಾರತ 518 ಪಂದ್ಯಗಳಲ್ಲಿ ಜಯಿಸಿದ್ದು, 431 ಪಂದ್ಯಗಳಲ್ಲಿ ಸೋಲನುಭವಿಸಿದೆ. 9 ಪಂದ್ಯಗಳು ಟೈ, 41 ಪಂದ್ಯಗಳು ಫಲಿತಾಂಶವಿಲ್ಲದೇ ರದ್ದುಗೊಂಡಿದೆ. ಆಸ್ಪ್ರೇಲಿಯಾ ಹಾಗೂ ಪಾಕ್‌ ಕ್ರಮವಾಗಿ 581 ಹಾಗೂ 490 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ವಾಡೇಕರ್‌ ಟು ರೋಹಿತ್‌;

ಭಾರತದ ಮೊದಲ ಏಕದಿನ ಪಂದ್ಯದಲ್ಲಿ ಅಜಿತ್‌ ವಾಡೇಕರ್‌ ತಂಡವನ್ನು ಮುನ್ನಡೆಸಿದ್ದರು. ಅಂದಿನಿಂದ ಇಂದಿನವರೆಗೆ ಟೀಂ ಇಂಡಿಯಾಗೆ 26 ಆಟಗಾರರು ನಾಯಕತ್ವ ವಹಿಸಿದ್ದಾರೆ. 1,000ದ ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ತಂಡಕ್ಕೆ ನಾಯಕನಾಗಿರಲಿದ್ದಾರೆ. ಈ ಪೈಕಿ ಎಂ.ಎಸ್‌.ಧೋನಿ (MS Dhoni) ಅತೀ ಹೆಚ್ಚು ಪಂದ್ಯಗಳಲ್ಲಿ ತಂಡ ಮುನ್ನಡೆಸಿದ ಹಿರಿಮೆಗೆ ಪಾತ್ರವಾಗಿದ್ದಾರೆ. ಅವರು 200 ಪಂದ್ಯಗಳಿಗೆ ತಂಡದ ನಾಯಕನಾಗಿದ್ದು, 110 ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಮೊಹಮದ್‌ ಅಜರುದ್ದೀನ್‌ 174, ಸೌರವ್‌ ಗಂಗೂಲಿ (Sourav Ganguly) 146 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದಾರೆ.

ನನ್ನೊಳಗೆ ಇನ್ನೂ ಕ್ರಿಕೆಟ್ ಕಿಚ್ಚಿದೆ: ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವೆ ಎಂದ ದಿನೇಶ್ ಕಾರ್ತಿಕ್

ಭಾರತದ ಪ್ರಮುಖ ಪಂದ್ಯಗಳು

ನಂ. ಎದುರಾಳಿ ಫಲಿತಾಂಶ ಸ್ಥಳ

01 ಇಂಗ್ಲೆಂಡ್‌ ಸೋಲು ಲೀಡ್ಸ್‌

100 ಆಸ್ಪ್ರೇಲಿಯಾ ಸೋಲು ಶ್ರೀನಗರ

200 ಆಸ್ಪ್ರೇಲಿಯಾ ಸೋಲು ಸಿಡ್ನಿ

300 ದ.ಆಫ್ರಿಕಾ ಸೋಲು ರಾಜ್‌ಕೋಟ್‌

400 ಕೀನ್ಯಾ ಗೆಲುವು ಬ್ರಿಸ್ಟೋಲ್‌

500 ಇಂಗ್ಲೆಂಡ್‌ ಫಲಿತಾಂಶವಿಲ್ಲ ಚೆಸ್ಟರ್‌ಲೇ ಸ್ಟ್ರೀಟ್‌

600 ಶ್ರೀಲಂಕಾ ಗೆಲುವು ರಾಜ್‌ಕೋಟ್‌

700 ಇಂಗ್ಲೆಂಡ್‌ ಗೆಲುವು ಬೆಂಗಳೂರು

800 ಆಸ್ಪ್ರೇಲಿಯಾ ಸೋಲು ಸಿಡ್ನಿ

900 ನ್ಯೂಜಿಲೆಂಡ್‌ ಸೋಲು ಧರ್ಮಶಾಲಾ

999 ದ.ಆಫ್ರಿಕಾ ಸೋಲು ಕೇಪ್‌ಟೌನ್‌

ವಿರಾಟ್ ಕೊಹ್ಲಿ 100ನೇ ಟೆಸ್ಟ್‌ ಹಗಲು-ರಾತ್ರಿ ಪಂದ್ಯ?

ನವದೆಹಲಿ: ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿಯ (Virat Kohli) 100ನೇ ಟೆಸ್ಟ್‌ ಪಂದ್ಯವನ್ನು ಬೆಂಗಳೂರಿನಲ್ಲಿ ಹಗಲು-ರಾತ್ರಿ ಟೆಸ್ಟ್‌ (Pink Ball Test) ಪಂದ್ಯವಾಗಿ ಆಯೋಜಿಸಲು ಬಿಸಿಸಿಐ (BCCI) ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ಫೆಬ್ರವರಿ 25ಕ್ಕೆ ಬೆಂಗಳೂರಿನಲ್ಲಿ ನಿಗದಿಯಾಗಿದ್ದು, ಈ ಪಂದ್ಯ ಆಡಿದರೆ ಕೊಹ್ಲಿ 100ನೇ ಟೆಸ್ಟ್‌ ಪಂದ್ಯವನ್ನು ಪೂರ್ತಿಗೊಳಿಸಲಿದ್ದಾರೆ. 

ಐಪಿಎಲ್‌ನ ಆರ್‌ಸಿಬಿ (RCB) ತಂಡದಲ್ಲಿ ಆಡುತ್ತಿರುವ ಕಾರಣ ಕೊಹ್ಲಿಗೆ ಬೆಂಗಳೂರಿನಲ್ಲಿ (Bengaluru) ಅತೀ ಹೆಚ್ಚಿನ ಅಭಿಮಾನಿಗಳಿದ್ದು, ಹೀಗಾಗಿ ಅವರ 100ನೇ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಟೆಸ್ಟ್‌ ಬದಲು ಮೊದಲು ಟಿ20 ಸರಣಿ ನಡೆಸುವಂತೆ ಬಿಸಿಸಿಐಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮನವಿ ಸಲ್ಲಿಸಿದ್ದರಿಂದ ದಿನಾಂಕ, ಸ್ಥಳ ಬದಲಾಗುವ ಸಾಧ್ಯತೆಯೂ ಇದೆ.
 

Latest Videos
Follow Us:
Download App:
  • android
  • ios