ಫ್ಲೋರಿಡಾ[ಆ. 04]   ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟಿ -20 ಯಲ್ಲಿ ಅರ್ಧಶತಕ  ಸಿಡಿಸಿದ ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಕ್ರೀಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ.

ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹಿರಿಮೆಗೆ ಶರ್ಮಾ ಪಾತ್ರವಾಗಿದ್ದಾರೆ. ವಿಂಡೀಸ್ ದೈತ್ಯ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿರುವ ರೋಹಿತ್ ಈಗಾಗಲೇ 107 ಸಿಕ್ಸರ್‌ ಸಿಡಿಸಿ ನಂಬರ್ ಒನ್ ಸಿಕ್ಸರ್ ಸರದಾರ ಆಗಿದ್ದಾರೆ.

"

ಮನಸ್ತಾಪ ಬದಿಗಿಟ್ಟು ದಾಖಲೆ ಬರೆಯಲು ಕೊಹ್ಲಿ-ರೋಹಿತ್ ರೆಡಿ!

ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 21 ಅರ್ಧಶತಕಗಳನ್ನು ಬಾರಿಸಿದ ದಾಖಲೆಗೂ ರೋಹಿತ್ ಪಾತ್ರವಾಗಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಇದೇ ಪಂದ್ಯದಲ್ಲಿ ಮುರಿದಿದ್ದಾರೆ.

ಟಿ- 20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿ
107 ರೋಹಿತ್ ಶರ್ಮಾ 
105 ಕ್ರಿಸ್ ಗೇಲ್ 
103 ಮಾರ್ಟಿನ್ ಗಪ್ಟಿಲ್ 
92 ಕಾಲಿನ್ ಮನ್ರೊ 
91 ಬ್ರೆಂಡನ್ ಮೆಕಲಮ್