ಕನ್ನಡಾಭಿಮಾನಿಗಳಿಗೆ ಗುಡ್ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಕನ್ನಡ ಖಾತೆ ಆರಂಭ!
ಕನ್ನಡಿಗರೊಂದಿಗೆ ಮತ್ತಷ್ಟು ಹತ್ತಿರವಾಗುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದೀಗ ಕನ್ನಡದ ಸೋಷಿಯಲ್ ಮೀಡಿಯಾ ಅಕೌಂಟ್ ಓಪನ್ ಮಾಡಿದೆ.
ಬೆಂಗಳೂರು: ‘ಕನ್ನಡ ವಿರೋಧಿ’ ಎನ್ನುವ ಹಣೆಪಟ್ಟಿಯನ್ನು ಹಲವು ವರ್ಷಗಳ ಕಾಲ ಹೊತ್ತಿದ್ದ ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇದೀಗ, ಸಾಮಾಜಿಕ ತಾಣ ‘ಎಕ್ಸ್’ (ಟ್ವೀಟರ್)ನಲ್ಲಿ ಕನ್ನಡದಲ್ಲೇ ಟ್ವೀಟ್‌ಗಳನ್ನು ಮಾಡಲು ಹೊಸ ಖಾತೆ ಆರಂಭಿಸಿದೆ. ಇದರ ಜತೆಗೆ ಇನ್‌ಸ್ಟಾಗ್ರಾಂನಲ್ಲೂ ಕನ್ನಡ ಖಾತೆಯನ್ನು ಅಧಿಕೃತವಾಗಿ ತೆರೆದಿದೆ
ಕನ್ನಡ ರಾಜ್ಯೋತ್ಸವದ ದಿನದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನ್ನಡ @RCBinKannada ಖಾತೆಯನ್ನು ಆರಂಭಿಸಿರುವುದಾಗಿ ಘೋಷಿಸಿದೆ. ಈ ಖಾತೆಗೆ ಈಗಾಗಲೇ ಸಾವಿರಾರು ಹಿಂಬಾಲಕರಾಗಿದ್ದಾರೆ. ಕನ್ನಡದ ಕ್ರಿಕೆಟ್ ಅಭಿಮಾನಿಗಳನ್ನು ಮತ್ತಷ್ಟು ಸೆಳೆಯುವ ಉದ್ದೇಶದಿಂದ ಹಾಗೂ 'ಕನ್ನಡ ವಿರೋಧಿ' ಹಣೆಪಟ್ಟಿ ಕಳಚುವ ಉದ್ದೇಶದಿಂದ ಕನ್ನಡ ಪೇಜ್ ಆರಂಭಿಸಿದೆ.
ಇಲ್ಲಿದೆ ನೋಡಿ ಎಲ್ಲಾ 10 ಐಪಿಎಲ್ ತಂಡಗಳ ರೀಟೈನ್ ಆಟಗಾರರ ಕಂಪ್ಲೀಟ್ ಡೀಟೈಲ್ಸ್!
ದೀಪಾವಳಿ. ✅
— Royal Challengers Bengaluru Kannada (@RCBinKannada) November 1, 2024
ಕರ್ನಾಟಕ ರಾಜೋತ್ಸವ. ✅
ಈ ಶುಭಗಳಿಗೆ ಇಂದ ನಿಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹೊಸ ಅಧ್ಯಾಯ!
ಆರ್‌ಸಿಬಿ ಈಗ ಕನ್ನಡದಲ್ಲಿ - @rcbinkannada. 💛❤️
ನಾವು ಕನ್ನಡಿಗರು, ನಮ್ಮ ಹೃದಯ ಬಹಳ ವಿಶಾಲ. 🤗#PlayBold #ನಮ್ಮRCB #Kannada #KarnatakaRajyotsava pic.twitter.com/FirBYNbzjE
ಆರ್‌ಸಿಬಿಗೆ ಮತ್ತೆ ನಾಯಕ ಆಗ್ತಾರಾಂತೆ ವಿರಾಟ್ ಕೊಹ್ಲಿ!
ನವದೆಹಲಿ: ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಹ್ಲಿ 2013ರಿಂದ 2021ರ ವರೆಗೂ ಆರ್‌ಸಿಬಿ ನಾಯಕತ್ವ ವಹಿಸಿದ್ದರು. ಈ ಅವಧಿಯಲ್ಲಿ ಆರ್‌ಸಿಬಿ ನಾಲ್ಕು ಬಾರಿ ಪ್ಲೇ-ಆಫ್ ಪ್ರವೇಶಿಸಿದ್ದರೆ, 2016ರಲ್ಲಿ ರನ್ನರ್-ಅಪ್ ಆಗಿತ್ತು. ಆದರೆ 2021ರಲ್ಲಿ ಕೊಹ್ಲಿ ನಾಯಕ ಸ್ಥಾನ ತೊರೆದಿದ್ದರು. ಬಳಿಕ ದ.ಆಫ್ರಿಕಾದ ಫಾಫ್ ಡು ಪ್ಲೆಸಿಸ್ ತಂಡದ ನಾಯಕರಾಗಿದ್ದರು. ಆದರೆ ಈ ಬಾರಿ ಹರಾಜಿಗೂ ಮುನ್ನ ಫಾಫ್ ಡು ಪ್ಲೆಸಿಸ್ ರನ್ನು ಆರ್‌ಸಿಬಿ ಫ್ರಾಂಚೈಸಿ ಕೈಬಿಟ್ಟಿದ್ದು, ಮತ್ತೆ ಕೊಹ್ಲಿಯನ್ನು ನಾಯಕರನ್ನಾಗಿ ನೇಮಿಸಲಿದೆ ಎಂದು ಹೇಳಲಾಗುತ್ತಿದೆ.
ಐಪಿಎಲ್ ರೀಟೈನ್ ಬಳಿಕ ಅತಿಹೆಚ್ಚು ಸ್ಯಾಲರಿ ಹೈಕ್ ಪಡೆದ ಟಾಪ್ 7 ಆಟಗಾರರಿವರು! ಈ ಪಟ್ಟಿಯಲ್ಲಿದ್ದಾನೆ ಆರ್‌ಸಿಬಿ ಆಟಗಾರ
ಆರ್‌ಸಿಬಿಗೆ ಕೊಹ್ಲಿ, ರಜತ್, ದಯಾಳ್
ಆರ್‌ಸಿಬಿ ಈ ಬಾರಿ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೇವಲ ಮೂವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ ಜೊತೆ ರಜತ್ ಪಾಟೀದಾರ್ ಹಾಗೂ ಯಶ್ ದಯಾಳ್ ಸ್ಥಾನ ಗಿಟ್ಟಿಕೊಂಡರು. ವಿಲ್ ಜ್ಯಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮದ್ ಸಿರಾಜ್, ಕ್ಯಾಮರೂನ್ ಗ್ರೀನ್ ತಂಡದಿಂದ ಹೊರಬಿದ್ದರು. ವಿರಾಟ್ ಕೊಹ್ಲಿಗೆ 21 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡರೆ, ರಜತ್ ಪಾಟೀದಾರ್‌ಗೆ 11 ಕೋಟಿ ಹಾಗೂ ಯಶ್ ದಯಾಳ್‌ಗೆ 5 ಕೋಟಿ ರುಪಾಯಿ ನೀಡಿ ಬೆಂಗಳೂರು ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡಿದೆ.