ರಾವಲ್ಪಿಂಡಿ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ ಇಂಗ್ಲೆಂಡ್ ಕ್ರಿಕೆಟ್ ತಂಡಇಂಗ್ಲೆಂಡ್‌ ಬಾಜ್‌ಬಾಲ್ ಆಟಕ್ಕೆ ಶರಣಾದ ಆತಿಥೇಯ ಪಾಕಿಸ್ತಾನ ಕ್ರಿಕೆಟ್ ತಂಡಪಾಕಿಸ್ತಾನ ಎದುರು 74 ರನ್‌ಗಳ ರೋಚಕ ಜಯ ಸಾಧಿಸಿದ ಇಂಗ್ಲೆಂಡ್

ರಾವಲ್ಪಿಂಡಿ(ಡಿ.06): 2ನೇ ಇನ್ನಿಂಗ್ಸಲ್ಲಿ ಅಚ್ಚರಿಯ ರೀತಿಯಲ್ಲಿ ಡ್ರಾ ಮಾಡಿಕೊಂಡು ಪಾಕಿಸ್ತಾನಕ್ಕೆ 4 ಅವಧಿಗಳಲ್ಲಿ ಗೆಲ್ಲಲು 343 ರನ್‌ ಗುರಿ ನೀಡಿದ್ದ ಇಂಗ್ಲೆಂಡ್‌, ಆತಿಥೇಯ ತಂಡವನ್ನು ಅಂತಿಮ ದಿನವಾದ ಸೋಮವಾರ 2ನೇ ಇನ್ನಿಂಗ್ಸಲ್ಲಿ 268 ರನ್‌ಗೆ ಆಲೌಟ್‌ ಮಾಡಿ ಮೊದಲ ಟೆಸ್ಟ್‌ ಅನ್ನು 74 ರನ್‌ಗಳಿಂದ ಗೆದ್ದಿದೆ. ಇಂಗ್ಲೆಂಡ್‌ಗೆ ಕೊನೆ ದಿನ ಗೆಲ್ಲಲು 8 ವಿಕೆಟ್‌ ಬೇಕಿತ್ತು.

ಪಾಕಿಸ್ತಾನಕ್ಕೆ 263 ರನ್‌ಗಳ ಅಗತ್ಯವಿತ್ತು. ದಿನದಾಟದ 3ನೇ ಅವಧಿಯಲ್ಲಿ ಪಾಕ್‌ಗೆ ಬೇಕಿದ್ದಿದ್ದು 83 ರನ್‌. ಕೈಯಲ್ಲಿ 5 ವಿಕೆಟ್‌ ಇತ್ತು. ಆದರೆ ಇಂಗ್ಲೆಂಡ್‌ನ ಮಾರಕ ದಾಳಿಗೆ ಪಾಕಿಸ್ತಾನ ತತ್ತರಿಸಿತು. ಕೊನೆ ವಿಕೆಟ್‌ಗೆ ನಸೀಂ ಹಾಗೂ ಅಲಿ 53 ಎಸೆತ ಎದುರಿಸಿದರು. ಡ್ರಿಂಕ್ಸ್‌ ಬ್ರೇಕ್‌ನಲ್ಲಿ ಅಲಿ ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಸಮಯ ವ್ಯರ್ಥ ಮಾಡುವ ಪ್ರಯತ್ನ ಮಾಡಿದರು. ಮಂದ ಬೆಳಕಿನ ಕಾರಣ ನೀಡಿ ಡ್ರಾ ಘೋಷಿಸುವಂತೆ ಅಂಪೈರ್‌ಗಳ ಮೇಲೆ ಒತ್ತಡ ಹೇರಲು ಯತ್ನಿಸಿದರು. ಆದರೆ ಪಾಕಿಸಾನ ಸೋಲಿನಿಂದ ಪಾರಾಗಲು ಆಗಲಿಲ್ಲ.

ಸ್ಕೋರ್‌: 

ಇಂಗ್ಲೆಂಡ್‌ 657 ಹಾಗೂ 264/7 ಡಿ., 
ಪಾಕಿಸ್ತಾನ 579 ಹಾಗೂ 268
(ಶಕೀಲ್‌ 76, ಇಮಾಮ್‌ 48, ಆ್ಯಂಡರ್‌ಸನ್‌ 4-36, ರಾಬಿನ್ಸನ್‌ 4-50)

ಏನಿದು ಬಾಜ್‌ಬಾಲ್‌ ಶೈಲಿ?

‘ಬಾಜ್‌’ ಎಂದು ಕರೆಸಿಕೊಳ್ಳುವ ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗ ಬ್ರೆಂಡನ್‌ ಮೆಕ್ಕಲಂ ಪ್ರಧಾನ ಕೋಚ್‌ ಆಗಿ ನೇಮಕಗೊಂಡ ಬಳಿಕ ಇಂಗ್ಲೆಂಡ್‌ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪರಿಸ್ಥಿತಿ ಎಂತದ್ದೇ ಇರಲಿ, ತಂಡ ಆಕ್ರಮಣಕಾರಿ ಆಟವಾಡುವುದನ್ನು ನಿಲ್ಲಿಸಲ್ಲ. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸಲ್ಲಿ 6.5ರ ರನ್‌ರೇಟ್‌ನಲ್ಲಿ ಬ್ಯಾಟ್‌ ಮಾಡಿದ ಇಂಗ್ಲೆಂಡ್‌, 2ನೇ ಇನ್ನಿಂಗ್ಸಲ್ಲಿ 7.36ರ ರನ್‌ರೇಟ್‌ನಲ್ಲಿ ರನ್‌ ಗಳಿಸಿ, ಸೋಲುವ ಸಾಧ್ಯತೆ ಇದೆ ಎನ್ನುವುದು ಗೊತ್ತಿದ್ದರೂ ಇನ್ನಿಂಗ್‌್ಸ ಡಿಕ್ಲೇರ್‌ ಮಾಡಿಕೊಂಡಿತು. ಆಕ್ರಮಣಕಾರಿ ಕ್ಷೇತ್ರರಕ್ಷಣೆ ಯೋಜನೆಯೊಂದಿಗೆ ಪಂದ್ಯ ಜಯಿಸಿತು.

Perth Test ನೇಥನ್ ಲಯನ್ ಸ್ಪಿನ್ ಬಲೆಗೆ ಬಿದ್ದ ಕೆರಿಬಿಯನ್ನರು, ಪರ್ತ್ ಟೆಸ್ಟ್‌ ಆಸೀಸ್ ಪಾಲು..!

ದಾಖಲೆಯ ಫಲಿತಾಂಶ!

ಈ ಪಂದ್ಯದಲ್ಲಿ ಒಟ್ಟು 1768 ರನ್‌ ಹರಿದು ಬಂತು. ಅತಿಹೆಚ್ಚು ರನ್‌ ದಾಖಲಾಗಿ ಫಲಿತಾಂಶ ನೀಡಿದ ಟೆಸ್ಟ್‌ ಪಂದ್ಯ ಎನ್ನುವ ದಾಖಲೆ ನಿರ್ಮಾಣವಾಯಿತು. 1939ರಲ್ಲಿ ಇಂಗ್ಲೆಂಡ್‌- ದ.ಆಫ್ರಿಕಾ ನಡುವಿನ ಟೆಸ್ಟ್‌ನಲ್ಲಿ 1981, 1930ರಲ್ಲಿ ವಿಂಡೀಸ್‌-ಇಂಗ್ಲೆಂಡ್‌ ಟೆಸ್ಟ್‌ನಲ್ಲಿ 1815 ರನ್‌ ದಾಖಲಾಗಿತ್ತು. ಆ ಪಂದ್ಯಗಳು ಡ್ರಾಗೊಂಡಿದ್ದವು. 1921ರಲ್ಲಿ ಆಸೀಸ್‌-ಇಂಗ್ಲೆಂಡ್‌ ಪಂದ್ಯದಲ್ಲಿ 1753 ರನ್‌ ದಾಖಲಾಗಿತ್ತು. ಆ ಪಂದ್ಯವನ್ನು ಆಸೀಸ್‌ 119 ರನ್‌ಗಳಲ್ಲಿ ಗೆದ್ದಿತ್ತು. ಇದು ಈ ಹಿಂದಿನ ದಾಖಲೆ ಎನಿಸಿತ್ತು.