Ranji Trophy: ಬಂಗಾಳ ಮಣಿಸಿ ಸೌರಾಷ್ಟ್ರ ರಣಜಿ ಟ್ರೋಫಿ ಚಾಂಪಿಯನ್‌..!

ರಣಜಿ ಟ್ರೋಫಿ ಟೂರ್ನಿಗೆ ಸೌರಾಷ್ಟ್ರ ಸಾಮ್ರಾಟ
ಬಂಗಾಳ ಎದುರು 9 ವಿಕೆಟ್‌ಗಳ ಜಯ ಸಾಧಿಸಿದ ಜಯದೇವ್ ಉನಾದ್ಕತ್ ಪಡೆ
33 ವರ್ಷಗಳ ಬಳಿಕ ರಣಜಿ ಟ್ರೋಫಿ ಗೆಲ್ಲುವ ಬಂಗಾಳ ಕನಸು ನುಚ್ಚುನೂರು

Ranji Trophy Saurashtra beat Bengal by 9 wickets to 2nd title kvn

ಕೋಲ್ಕತ(ಫೆ.19): 2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಬಂಗಾಳ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿ ನಾಲ್ಕನೇ ಬಾರಿಗೆ ಸೌರಾಷ್ಟ್ರ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಬೌಲಿಂಗ್‌ನಲ್ಲಿ ಮಾರಕ ದಾಳಿ ನಡೆಸಿದ ಸೌರಾಷ್ಟ್ರದ ಜಯದೇವ್ ಉನಾದ್ಕತ್, ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಹತ್ತರ ಪಾತ್ರವಹಿಸಿದರು.

ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಂಗಾಳ ಎದುರು ಮೊದಲ ಇನಿಂಗ್ಸ್‌ನಲ್ಲಿ 230 ರನ್‌ಗಳ ಬೃಹತ್ ಮುನ್ನಡೆ ಸಂಪಾಧಿಸಿತ್ತು. ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಬಂಗಾಳ ತಂಡವು ಎರಡನೇ ಇನಿಂಗ್ಸ್‌ನಲ್ಲಿ 241 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಫೈನಲ್‌ ಗೆಲ್ಲಲು ಸೌರಾಷ್ಟ್ರ ತಂಡಕ್ಕೆ 12 ರನ್‌ಗಳ ಸುಲಭ ಗುರಿ ನೀಡಿತ್ತು. ಇನ್ನು ಸೌರಾಷ್ಟ್ರ ತಂಡವು ಆರಂಭಿಕ ಬ್ಯಾಟರ್ ಜೈ ಗೋಹಿಲ್(00) ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಕೇವಲ 2.4 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. 

ಸೌರಾಷ್ಟ್ರ ಕ್ರಿಕೆಟ್ ತಂಡವು ಕಳೆದೊಂದು ದಶಕದಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದೆ. ಕಳೆದ 10 ರಣಜಿ ಆವೃತ್ತಿಯಲ್ಲಿ ಸೌರಾಷ್ಟ್ರ ತಂಡವು 5 ಬಾರಿ ಫೈನಲ್‌ ಪ್ರವೇಶಿಸಿರುವುದೇ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಇನ್ನು 2019-20ನೇ ಸಾಲಿನ ರಣಜಿ ಟ್ರೋಫಿ ಫೈನಲ್‌ನಲ್ಲೂ ಸೌರಾಷ್ಟ್ರ ತಂಡವು ಬಂಗಾಳ ಎದುರು ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. 

ಇನ್ನು ಈ ಸೋಲಿನೊಂದಿಗೆ ಬಂಗಾಳ ತಂಡವು 33 ವರ್ಷಗಳ ಬಳಿಕ ರಣಜಿ ಟ್ರೋಫಿ ಗೆಲ್ಲುವ ಅವಕಾಶ ನುಚ್ಚುನೂರಾಗಿದೆ. 1989-90ರಲ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿಗೆ ಮುತ್ತಿಕ್ಕಿತ್ತು. 

ರಣಜಿ ಟ್ರೋಫಿ ಫೈನಲ್‌ನ ನಾಲ್ಕನೇ ದಿನದಾಟದಲ್ಲಿ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನಾದ್ಕತ್‌ ಮಿಂಚಿನ ದಾಳಿ ನಡೆಸುವ ಮೂಲಕ ಸೌರಾಷ್ಟ್ರ ಬ್ಯಾಟರ್‌ಗಳನ್ನು ಕಾಡಿದರು. ಜಯದೇವ್ ಉನಾದ್ಕತ್ 85 ರನ್‌ ನೀಡಿ ಪ್ರಮುಖ 6 ವಿಕೆಟ್ ಕಬಳಿಸುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಅಷ್ಟೇ ಅಲ್ಲದೇ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು. 

ಇನ್ನು 15 ಇನಿಂಗ್ಸ್‌ಗಳಲ್ಲಿ 3 ಶತಕ ಹಾಗೂ 3 ಅರ್ಧಶತಕ ಸಹಿತ 907 ರನ್ ಸಿಡಿಸಿದ ಸೌರಾಷ್ಟ್ರದ ಅರ್ಪಿತ್ ವಸುವಾಡ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅರ್ಪಿತ್ ವಸುವಾಡ ಕರ್ನಾಟಕ ಎದುರಿನ ಸೆಮಿಫೈನಲ್‌ನಲ್ಲಿ ಆಕರ್ಷಕ ದ್ವಿಶತಕ ಸಿಡಿಸಿದ್ದರು. ಇನ್ನು ಫೈನಲ್‌ನಲ್ಲಿ ಅಮೂಲ್ಯ 81 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.

Latest Videos
Follow Us:
Download App:
  • android
  • ios