Asianet Suvarna News Asianet Suvarna News

Ranji Trophy: ಮನೀಶ್ ಪಾಂಡೆ ಶತಕ, ಕರ್ನಾಟಕದ ಹಿಡಿತದಲ್ಲಿ ಪುದುಚೆರಿ

* ಪುದುಚೆರಿ ವಿರುದ್ದ ಅಜೇಯ ಶತಕ ಬಾರಿಸಿದ ಮನೀಶ್ ಪಾಂಡೆ

* ಮೊದಲ ಇನಿಂಗ್ಸ್‌ನಲ್ಲಿ 453 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡ ಕರ್ನಾಟಕ

* ಬ್ಯಾಟಿಂಗ್‌ ಮಾಡಲಿಳಿದ ಪುದುಚೆರಿಗೆ ಶಾಕ್ ನೀಡಿದ ರಾಜ್ಯದ ವೇಗಿಗಳು

Ranji Trophy Manish Pandey Century Helps Karnataka Driver Seat against Puducherry kvn
Author
Bengaluru, First Published Mar 4, 2022, 5:57 PM IST

ಬೆಂಗಳೂರು(ಮಾ.04): ನಾಯಕ ಮನೀಶ್ ಪಾಂಡೆ (Manish Pandey) ಬಾರಿಸಿದ ಆಕರ್ಷಕ ಅಜೇಯ ಶತಕದ ನೆರವಿನಿಂದ ಕರ್ನಾಟಕ ತಂಡವು (Karnataka Cricket Team) ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 453 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿರುವ ಪುದುಚೆರಿ (Puducherry) ತಂಡಕ್ಕೆ ಪ್ರತಿಭಾನ್ವಿತ ಯುವ ವೇಗಿ ವಿದ್ಯಾಧರ್ ಪಾಟೀಲ್ ಹಾಗೂ ಪ್ರಸಿದ್ಧ್ ಕೃಷ್ಣ ಆರಂಭದಲ್ಲೇ ಶಾಕ್ ನೀಡಿದ್ದಾರೆ. ಎರಡನೇ ದಿನದಾಟದಂತ್ಯದ ವೇಳೆಗೆ ಪುದುಚೆರಿ ತಂಡವು ಎರಡು ವಿಕೆಟ್ ಕಳೆದುಕೊಂಡು 33 ರನ್ ಬಾರಿಸಿದ್ದು, ಇನ್ನೂ 420 ರನ್‌ಗಳ ಹಿನ್ನೆಡೆಯಲ್ಲಿದೆ.

ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 293 ರನ್‌ ಗಳಿಸಿದ್ದ ಕರ್ನಾಟಕ ತಂಡವು ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ 30 ರನ್ ಸೇರಿಸುತ್ತಿದ್ದಂತೆಯೇ ದೇವದತ್ ಪಡಿಕ್ಕಲ್ (Devdutt Padikkal) ವಿಕೆಟ್ ಕಳೆದುಕೊಂಡಿತು. ಪಡಿಕ್ಕಲ್ 309 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 178 ರನ್ ಬಾರಿಸಿ ಆಶಿತ್ ರಾಜಿವ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕ ಕ್ರಿಕೆಟ್ ತಂಡವು ದಿಢೀರ್ ಕುಸಿತ ಕಾಣುವ ಮೂಲಕ ಆಘಾತಕ್ಕೊಳಗಾಯಿತು. ವಿಕೆಟ್‌ ಕೀಪರ್‌ ಬ್ಯಾಟರ್ ಬಿ.ಆರ್ ಶರತ್ 6 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ಆಲ್ರೌಂಡರ್‌ಗಳಾದ ಶ್ರೇಯಸ್ ಗೋಪಾಲ್ ಹಾಗೂ ಕೃಷ್ಣಪ್ಪ ಗೌತಮ್‌ ಕೂಡಾ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಪ್ರಯತ್ನ ಮಾಡಲಿಲ್ಲ. ಶ್ರೇಯಸ್ ಗೋಪಾಲ್ (Shreyas Gopal) ಕೇವಲ 10 ರನ್‌ ಬಾರಿಸಿ ಸುಬೋತ್ ಭಾಟಿಗೆ ವಿಕೆಟ್‌ ಒಪ್ಪಿಸಿದರೆ, ಮರು ಎಸೆತದಲ್ಲೇ ಕೃಷ್ಣಪ್ಪ ಗೌತಮ್ ಅವರನ್ನು ಎಲ್‌ಬಿ ಬಲೆಗೆ ಕೆಡಹುವ ಮೂಲಕ ಪೆವಿಲಿಯನ್ ಪೆರೇಡ್ ಮಾಡುವಂತೆ ಮಾಡಿದರು.

ಮನೀಶ್ ಪಾಂಡೆ ಅಜೇಶ ಶತಕ: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ರೈಲ್ವೇಸ್ ವಿರುದ್ದ ಆಕರ್ಷಕ ಶತಕ ಚಚ್ಚಿದ್ದ ಮನೀಶ್ ಪಾಂಡೆ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮತ್ತೊಮ್ಮೆ ಸಮಯೋಚಿತ ಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಒಂದು ಹಂತದಲ್ಲಿ 369 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ರಾಜ್ಯ ತಂಡಕ್ಕೆ ನಾಯಕನ ಆಟವಾಡುವ ಮೂಲಕ ಮನೀಶ್ ಪಾಂಡೆ ಆಸರೆಯಾಗಿದ್ದಾರೆ. 8ನೇ ವಿಕೆಟ್‌ಗೆ ವಿದ್ಯಾಧರ್ ಪಾಟೀಲ್ ಜತೆಗೂಡಿ ಮನೀಶ್ ಪಾಂಡೆ 56 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 425ರ ಗಡಿ ದಾಟಿಸಿದರು. ಒಂದು ಕಡೆ ನಿರಂತರವಾಗಿ ವಿಕೆಟ್‌ ಬೀಳುತ್ತಿದ್ದರೂ ಸಹಾ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಮನೀಶ್ ಪಾಂಡೆ ಒಟ್ಟು 161 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 107 ರನ್‌ ಬಾರಿಸಿ ಮಿಂಚಿದರು. ಕೊನೆಯಲ್ಲಿ ಪ್ರಸಿದ್ದ್ ಕೃಷ್ಣ 12 ರನ್ ಬಾರಿಸುವ ಮೂಲಕ ಮನೀಶ್ ಪಾಂಡೆ ಶತಕ ಪೂರೈಸಲು ಉತ್ತಮ ಸಾಥ್ ನೀಡಿದರು.

Ranji Trophy: ಆಕರ್ಷಕ ಶತಕ ಚಚ್ಚಿದ ದೇವದತ್ ಪಡಿಕ್ಕಲ್, ಬೃಹತ್ ಮೊತ್ತದತ್ತ ಕರ್ನಾಟಕ

ಪುದುಚೆರಿ ತಂಡವು ಈಗಾಗಲೇ ನಾಕೌಟ್ ರೇಸಿನಿಂದ ಹೊರಬಿದ್ದಿದ್ದು, ಕರ್ನಾಟಕ ಬ್ಯಾಟರ್‌ಗಳನ್ನು ಕಟ್ಟಿಹಾಕಲು 7 ಬೌಲರ್‌ಗಳನ್ನು ಕಣಕ್ಕಿಳಿಸಿತು. ಆದರೆ ಹೆಚ್ಚಿನ ಯಶಸ್ಸು ದಕ್ಕಲಿಲ್ಲ. ಆಶಿತ್ ರಾಜೀವ್ 4 ವಿಕೆಟ್ ಪಡೆದರೆ, ಸುಬೋತ್ ಭಾಟಿ 2 ಹಾಗೂ ಸಾಗರ್ ಉದೇಶಿ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 453/8 ಡಿ(ಮೊದಲ ಇನಿಂಗ್ಸ್‌)
ದೇವದತ್ ಪಡಿಕ್ಕಲ್: 178
ಮನೀಶ್ ಪಾಂಡೆ: 107*

ಆಶಿತ್ ರಾಜೀವ್: 59/4

ಪುದುಚೆರಿ: 49/2

ನೆಯಾನ್ ಕಂಗಾಯನ್: 24

Follow Us:
Download App:
  • android
  • ios