ಜಮ್ಮು(ಫೆ.21): 2019-20ರ ಸಾಲಿನ ರಣಜಿ ಟ್ರೋಫಿಯ ನಾಕೌಟ್‌ ಹಂತದಲ್ಲಿ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ನಡುವಿನ 3ನೇ ಕ್ವಾರ್ಟರ್‌ಫೈನಲ್‌ ಪಂದ್ಯದ ಮೊದಲ ದಿನದಾಟ ಮಂದಬೆಳಕಿಗೆ ಬಲಿಯಾಗಿದೆ. 

ಗುರುವಾರದಿಂದ ಇಲ್ಲಿನ ಗಾಂಧಿ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಆರಂಭವಾದ ಪಂದ್ಯಕ್ಕೆ ಮಂದಬೆಳಕು ಬಹುವಾಗಿ ಕಾಡಿತು. ಆಟಕ್ಕೆ ಬೆಳಕು ಸಾಕಾಗಲಿಲ್ಲ ಎಂಬ ಕಾರಣಕ್ಕೆ ಉಭಯ ತಂಡಗಳು ಕ್ರೀಸ್‌ಗೆ ಇಳಿಯಲಿಲ್ಲ. ಹೀಗೆ ಭೋಜನ ವಿರಾಮದ ವರೆಗೂ ಎರಡೂ ತಂಡಗಳ ಆಟಗಾರರು ಮೈದಾನಕ್ಕೆ ಬರಲಿಲ್ಲ.

ರಣಜಿ ಟ್ರೋಫಿ: ಕ್ವಾರ್ಟರ್‌ ಕದನಕ್ಕೆ ಕರ್ನಾಟಕ ಸಜ್ಜು

ಭೋಜನ ವಿರಾಮದ ಬಳಿಕ ಮೋಡ ಕವಿದ ವಾತಾವರಣ ಸ್ವಲ್ಪ ತಿಳಿಯಾಯಿತು. ಈಗಾಲಾದರೂ ಆಟವಾಡಬಹುದು ಎಂದು ಉಭಯ ತಂಡಗಳ ಆಟಗಾರರು ಕ್ರೀಸ್‌ಗೆ ಇಳಿದರು. ಟಾಸ್‌ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಕೇವಲ 6 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ಕರ್ನಾಟಕದ ಆರ್‌.ಸಮರ್ಥ್ (5) ದೇವದತ್‌ ಪಡಿಕ್ಕಲ್‌ (2) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್‌ ಸೇರಿದರು. ನಾಯಕ ಕರುಣ್‌ ನಾಯರ್‌ (4), ಕೆ.ವಿ. ಸಿದ್ಧಾಥ್‌ರ್‍ ಖಾತೆ ತೆರೆಯದೇ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಕರ್ನಾಟಕ ಮೊದಲ ಇನ್ನಿಂಗ್ಸ್‌ 14/2

(ಮೊದಲ ದಿನದಂತ್ಯಕ್ಕೆ)

ಇತರೆ ರಣಜಿ ಕ್ವಾರ್ಟರ್‌ ಸ್ಕೋರ್‌

(ಮೊದಲ ದಿನದಂತ್ಯಕ್ಕೆ)

ಒಡಿಶಾ ವಿರುದ್ಧ ಬಂಗಾಳ 308/6

(ಮಜುಮ್ದಾರ್‌ 136*, ಶಬಾಜ್‌ 82*, ಪ್ರೀತ್‌ 2-52)

ಆಂಧ್ರ ವಿರುದ್ಧ ಸೌರಾಷ್ಟ್ರ 226/6

(ವಿಶ್ವರಾಜ್‌ 73, ಚಿರಾಗ್‌ 53*, ಪೃಥ್ವಿ ರಾಜ್‌ 3-51)

ಗೋವಾ ವಿರುದ್ಧ ಗುಜರಾತ್‌ 330/4

(ಪಾರ್ಥೀವ್‌ ಪಟೇಲ್‌ 118*, ಅಮಿತ್‌ 2-73)