ಕರ್ನಾಟಕ ಎದುರು ಪುದುಚೆರಿ ಕೇವಲ 170 ರನ್‌ಗಳಿಗೆ ಆಲೌಟ್ವಿದ್ವತ್ ಕಾವೇರಪ್ಪಗೆ 4, ವೈಶಾಖ್‌ಗೆ 3 ವಿಕೆಟ್‌ಮೊದಲ ದಿನದಾಟದಂತ್ಯಕ್ಕೆ 1 ನಷ್ಟಕ್ಕೆ 111 ಗಳಿಸಿದ ಕರ್ನಾಟಕ

ಬೆಂಗಳೂರು(ಡಿ.21): 2022-23ರ ರಣಜಿ ಟ್ರೋಫಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕರ್ನಾಟಕ, ಎಲೈಟ್‌ ‘ಸಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಮೊದಲ ದಿನವೇ ಮೇಲುಗೈ ಸಾಧಿಸಿದೆ. ಪುದುಚೇರಿಯನ್ನು ಮೊದಲ ಇನ್ನಿಂಗ್‌್ಸನಲ್ಲಿ 170 ರನ್‌ಗೆ ಆಲೌಟ್‌ ಮಾಡಿದ ಕರ್ನಾಟಕ, ಮೊದಲ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 111 ರನ್‌ ಗಳಿಸಿದೆ. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ನಿರೀಕ್ಷಿತ ಯಶಸ್ಸು ಸಾಧಿಸಿತು. ತ್ರಿವಳಿ ವೇಗಿಗಳಾದ ವಿದ್ವತ್‌ ಕಾವೇರಪ್ಪ(4/52), ವೈಶಾಖ್‌ ವಿಜಯ್‌ಕುಮಾರ್‌(3/39) ಹಾಗೂ ರೋನಿತ್‌ ಮೋರೆ(2/34) ಒಟ್ಟು 9 ವಿಕೆಟ್‌ಗಳನ್ನು ಉರುಳಿಸಿದರು. ಇನ್ನೊಂದು ವಿಕೆಟ್‌ ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌(1/5) ಪಾಲಾಯಿತು.

ಪುದುಚೇರಿ ತನ್ನ ಇನ್ನಿಂಗ್‌್ಸನ ಯಾವ ಹಂತದಲ್ಲೂ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿಲ್ಲ. ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡ ತಂಡಕ್ಕೆ ಆಸರೆಯಾಗಬಲ್ಲ ಜೊತೆಯಾಟಗಳು ದೊರೆಯಲಿಲ್ಲ. ನಾಯಕ ದಾಮೋದರನ್‌ ರೋಹಿತ್‌(44) ತಂಡದ ಪರ ಗರಿಷ್ಠ ರನ್‌ ಗಳಿಸಿದರು. ಕೋದಂಡಪಾಣಿ ಅರವಿಂದ್‌ 20 ಹಾಗೂ ಶ್ರೀಧರ್‌ ಅಶ್ವತ್‌್ಥ 20 ರನ್‌ ಕೊಡುಗೆ ನೀಡಿದರು. 54 ಓವರಲ್ಲಿ ಪುದುಚೇರಿ ಇನ್ನಿಂಗ್‌್ಸ ಮುಕ್ತಾಯಗೊಂಡಿತು.

Ind vs Ban ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್‌ನಿಂದ ರೋಹಿತ್ ಶರ್ಮಾ, ನವದೀಪ್ ಸೈನಿ ಔಟ್..!

ಮೊದಲ ಇನ್ನಿಂಗ್‌್ಸ ಆರಂಭಿಸಿದ ಕರ್ನಾಟಕಕ್ಕೆ ಆರಂಭಿಕರಾದ ಆರ್‌.ಸಮಥ್‌ರ್‍ ಹಾಗೂ ನಾಯಕ ಮಯಾಂಕ್‌ ಅಗರ್‌ವಾಲ್‌ ಮೊದಲ ವಿಕೆಟ್‌ಗೆ 111 ರನ್‌ ಜೊತೆಯಾಟವಾಡಿದರು. ದಿನದಾಟದ ಕೊನೆ ಓವರಲ್ಲಿ ಮಯಾಂಕ್‌(51) ಔಟಾದರು. ಔಟಾಗದೆ 59 ರನ್‌ ಗಳಿಸಿರುವ ಸಮಥ್‌ರ್‍, ರಾತ್ರಿ ಕಾವಲುಗಾರ ರೋನಿತ್‌ ಮೋರೆ(0) ಜೊತೆ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: 
ಪುದುಚೇರಿ ಮೊದಲ ಇನ್ನಿಂಗ್‌್ಸ 170/10(ರೋಹಿತ್‌ 44, ವಿದ್ವತ್‌ 4/52, ವೈಶಾಖ್‌ 3/39) 
ಕರ್ನಾಟಕ (ಮೊದಲ ದಿನದಂತ್ಯಕ್ಕೆ) 111/1(ಸಮಥ್‌ರ್‍ 59*, ಮಯಾಂಕ್‌ 51, ಅಂಕಿತ್‌ 1-8)

ಚಿನ್ನಸ್ವಾಮಿಯಲ್ಲಿ ಕರ್ನಾಟಕ ತಂಡಕ್ಕೆ 100ನೇ ರಣಜಿ ಪಂದ್ಯ!

ಪುದುಚೇರಿ ವಿರುದ್ಧ ಮಂಗಳವಾರ ಆರಂಭಗೊಂಡ ಪಂದ್ಯ ಕರ್ನಾಟಕ ತಂಡಕ್ಕೆ ತನ್ನ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 100ನೇ ರಣಜಿ ಪಂದ್ಯ. 2008-09ರ ಋುತುವಿನ ಬಂಗಾಳ-ತಮಿಳುನಾಡು ಕ್ವಾರ್ಟರ್‌ ಫೈನಲ್‌, 2021-22ರ ಋುತುವಿನ ಮುಂಬೈ-ಮಧ್ಯಪ್ರದೇಶ ನಡುವಿನ ಫೈನಲ್‌ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತಟಸ್ಥ ತಂಡಗಳ ನಡುವಿನ ಪಂದ್ಯಗಳು.

ಇಂದು ಬಿಸಿಸಿಐ ಸಭೆ: ಟಿ20 ನಾಯಕ ಬದಲು?

ಮುಂಬೈ: ಬುಧವಾರ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆ ನಡೆಯಲಿದ್ದು, ಭಾರತ ಟಿ20 ತಂಡದ ನಾಯಕರಾಗಿ ಹಾರ್ದಿಕ್‌ ಪಾಂಡ್ಯರನ್ನು ನೇಮಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ವಿಶ್ವಕಪ್‌ ಸೋಲಿನ ಬಳಿಕ ಟಿ20 ತಂಡಕ್ಕೆ ಹೊಸ ನಾಯಕನನ್ನು ನೇಮಿಸಬೇಕು ಎನ್ನುವ ಚರ್ಚೆ ಜೋರಾಗಿದ್ದು, ಬಿಸಿಸಿಐ ಮೂಲಗಳು ಸಹ ಹಾರ್ದಿಕ್‌ರನ್ನು ನೇಮಿಸುವ ಸುಳಿವು ನೀಡಿವೆ. 

ಇದೇ ವೇಳೆ ರಾಹುಲ್‌ ದ್ರಾವಿಡ್‌ರನ್ನೂ ಟಿ20 ತಂಡದ ಕೋಚ್‌ ಹುದ್ದೆಯಿಂದ ಬಿಡುಗಡೆಗೊಳಿಸಬಹುದು ಎನ್ನಲಾಗಿದೆ. ನೂತನ ಆಯ್ಕೆ ಸಮಿತಿ, ಕೇಂದ್ರ ಗುತ್ತಿಗೆ ಪಟ್ಟಿಯ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.