ರಣಜಿ ಟ್ರೋಫಿ ಫೈನಲ್‌ನಲ್ಲಿ ಬಂಗಾಳ ಎದುರು ಸೌರಾಷ್ಟ್ರ ಬಿಗಿಹಿಡಿತ4 ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್ ಪಟ್ಟಕ್ಕೇರಲು ತುದಿಗಾಲಲ್ಲಿ ನಿಂತ ಸೌರಾಷ್ಟ್ರಸೌರಾಷ್ಟ್ರ ಕನಸಿಗೆ ಅಡ್ಡಗಾಲು ಹಾಕುತ್ತಾರಾ ಬಂಗಾಳ ನಾಯಕ ಮನೋಜ್ ತಿವಾರಿ
ಕೋಲ್ಕತಾ(ಫೆ.19): ರಣಜಿ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ 4ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವತ್ತ ಹೆಜ್ಜೆ ಇರಿಸಿದೆ. 33 ವರ್ಷಗಳಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವ ಬಂಗಾಳದ ಕನಸು ನನಸಾಗುವ ಸಾಧ್ಯತೆ ಕ್ಷೀಣಿಸಿದೆ. ಬಂಗಾಳದ 174 ರನ್‌ಗೆ ಉತ್ತರವಾಗಿ ಸೌರಾಷ್ಟ್ರ 404 ರನ್ ಸೇರಿಸಿ 230 ರನ್ ಮುನ್ನಡೆ ಪಡೆದರೆ, ಬಂಗಾಳ 3ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 163 ರನ್ ಗಳಿಸಿದ್ದು ಇನ್ನೂ 67 ರನ್ ಹಿನ್ನಡೆಯಲ್ಲಿದೆ. ಭಾನುವಾರ ಮೊದಲ ಅವಧಿಯಲ್ಲೇ ಬಂಗಾಳವನ್ನು ಆಲೌಟ್ ಮಾಡಿ ಪ್ರಶಸ್ತಿ ಗೆಲ್ಲಲು ಸೌರಾಷ್ಟ್ರ ಕಾಯುತ್ತಿದೆ.
2ನೇ ದಿನ 5 ವಿಕೆಟ್‌ಗೆ 317 ರನ್ ಗಳಿಸಿದ್ದ ಸೌರಾಷ್ಟ್ರ ಶನಿವಾರ ಆ ಮೊತ್ತಕ್ಕೆ 87 ರನ್ ಸೇರಿಸಿತು. ಅರ್ಪಿತ್ ವಸವಾಡ 81 ರನ್‌ಗೇ ನಿರ್ಗಮಿಸಿದರೆ, ಚಿರಾಗ್ ಜಾನಿ 60 ರನ್ ಸಿಡಿಸಿದರು. ಮುಕೇಶ್ ಕುಮಾರ್ 4, ಆಕಾಶ್ ದೀಪ್, ಇಶಾನ್ ಪೊರೆಲ್ ತಲಾ 3 ವಿಕೆಟ್ ಪಡೆದರು. ದೊಡ್ಡ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ಬಂಗಾಳ ಆರಂಭಿಕ ಕುಸಿತ ಕಂಡರೂ, ಅನುಸ್ತುಪ್ ಮಜುಂದಾರ್(61) ಹಾಗೂ ನಾಯಕ ಮನೋಜ್ ತಿವಾರಿ(ಔಟಾಗದೆ 57) ಚೇತರಿಕೆ ನೀಡಿದರು. ಈ ಜೋಡಿ 4ನೇ ವಿಕೆಟ್‌ಗೆ 99 ರನ್ ಜೊತೆಯಾಟವಾಡಿತು. ಉನಾದ್ಕತ್, ಚೇತನ್ ಸಕಾರಿಯಾ ತಲಾ 2 ವಿಕೆಟ್ ಪಡೆದಿದ್ದಾರೆ.
ಸ್ಕೋರ್:
ಬಂಗಾಳ 174/10 ಮತ್ತು 169/4 (ಅನುಸ್ತುಪ್ 61, ತಿವಾರಿ 57*, ಉನಾದ್ಕತ್ 2-47)
ಸೌರಾಷ್ಟ್ರ 404/10(ವಸವಾಡ 81, ಚಿರಾಗ್ 60, ಮುಕೇಶ್ 4-111)
ಮೊದಲ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಸೋಲಿನತ್ತ ಕಿವೀಸ್
ಮೌಂಟ್ ಮ್ಯಾಂಗನುಯಿ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಸೋಲಿನತ್ತ ಮುಖಮಾಡಿದೆ. ಗೆಲುವಿಗೆ 394 ರನ್ ಗುರಿ ಪಡೆದಿರುವ ಕಿವೀಸ್ 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 63 ರನ್ ಕಲೆಹಾಕಿದ್ದು, ಇನ್ನೂ 331 ರನ್ ಗಳಿಸಬೇಕಿದೆ.
28ಕ್ಕೆ ಪ್ರಮುಖ 5 ವಿಕೆಟ್ ಕಳೆದುಕೊಂಡ ತಂಡಕ್ಕೆ ಡ್ಯಾರಿಲ್ ಮಿಚೆಲ್(13), ಬ್ರೇಸ್ಬೆಲ್(25) ಆಸರೆಯಾಗಿದ್ದು, ಸೋಲು ತಪ್ಪಿಸಲು ಹೋರಾಡುತ್ತಿದ್ದಾರೆ. ಬ್ರಾಡ್ 21ಕ್ಕೆ 4 ವಿಕೆಟ್ ಕಿತ್ತರು. 19 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ್ದ ಇಂಗ್ಲೆಂಡ್ ಶನಿವಾರ 374ಕ್ಕೆ ಆಲೌಟಾಯಿತು.
ಅತಿಹೆಚ್ಚು ಟೆಸ್ಟ್ ವಿಕೆಟ್: ಜಿಮ್ಮಿ-ಬ್ರಾಡ್ ದಾಖಲೆ!
ಮೌಂಟ್ ಮ್ಯಾಂಗನುಯಿ: ಟೆಸ್ಟ್ ಕ್ರಿಕೆಟ್ನಲ್ಲಿ ಜೊತೆಯಾಗಿ ಆಡಿ ಅತಿಹೆಚ್ಚು ವಿಕೆಟ್ ಕಬಳಿಸಿದ ಜೋಡಿ ಎಂಬ ದಾಖಲೆಯನ್ನು ಇಂಗ್ಲೆಂಡ್‌ನ ದಿಗ್ಗಜ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್-ಸ್ಟುವರ್ಚ್ ಬ್ರಾಡ್ ತಮ್ಮ ಹೆಸರಿಗೆ ಬರೆದಿದೆ.
Eng vs NZ: ಗುರು ಬ್ರೆಂಡನ್ ಮೆಕ್ಕಲಂ ಅಪರೂಪದ ದಾಖಲೆ ಮುರಿದ ಬೆನ್ ಸ್ಟೋಕ್ಸ್..!
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಡೆವೋನ್ ಕಾನ್‌ವೇ ಅವರನ್ನು ಬ್ರಾಡ್ ಔಟ್ ಮಾಡಿ ತಮ್ಮಿಬ್ಬರ ವಿಕೆಟ್ ಗಳಿಕೆಯನ್ನು 1002ಕ್ಕೆ ಏರಿಸಿದರು. ಈ ಮೂಲಕ ಆಸ್ಪ್ರೇಲಿಯಾದ ಗ್ಲೆನ್ ಮೆಗ್ರಾಥ್-ಶೇನ್ ವಾರ್ನ್‌ರ 1001 ವಿಕೆಟ್(104 ಪಂದ್ಯ)ಗಳ ದಾಖಲೆಯನ್ನು ಮುರಿದರು. ಆ್ಯಂಡರ್ಸನ್-ಬ್ರಾಡ್ ಜೋಡಿ 133 ಪಂದ್ಯಗಳಲ್ಲಿ ಜೊತೆಯಾಗಿ ಆಡಿದ್ದಾರೆ. ಈ ಜೋಡಿ ಮೊದಲ ಬಾರಿ ಒಟ್ಟಾಗಿ ಟೆಸ್ಟ್ ಆಡಿದ್ದು 2008ರಲ್ಲಿ. ಟೆಸ್ಟ್ನಲ್ಲಿ ಆ್ಯಂಡರ್ಸನ್ 678, ಬ್ರಾಡ್ 571 ವಿಕೆಟ್ ಪಡೆದಿದ್ದಾರೆ.
ರೇಪ್: ಕ್ರಿಕೆಟಿಗ ಸಂದೀಪ್ ಕೈಕುಲುಕದ ಆಟಗಾರರು
ಕಠ್ಮಂಡು: ಅತ್ಯಾಚಾರ ಪ್ರಕರಣದಲ್ಲಿ ಕಳೆದ ತಿಂಗಳು ಜಾಮೀನನಲ್ಲಿ ಬಿಡುಗಡೆಯಾಗಿರುವ ನೇಪಾಳ ಕ್ರಿಕೆಟಿಗ ಸಂದೀಪ್ ಲಾಮಿಚ್ಚಾನೆ ಅವರ ಜೊತೆ ಕೈಕುಲುಕಲು ಸ್ಕಾಟ್ಲೆಂಡ್ ಆಟಗಾರರು ನಿರಾಕರಿಸಿದ ಘಟನೆ ನಡೆಯಿತು.
ತ್ರಿಕೋನ ಟಿ20 ಸರಣಿಯ ಶುಕ್ರವಾರದ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೇಪಾಳ 3 ವಿಕೆಟ್ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಸ್ಕಾಟ್ಲೆಂಡ್ ಆಟಗಾರರು ನೇಪಾಳ ಆಟಗಾರರ ಕೈಕುಲುಕಿದರೂ ಸಂದೀಪ್ ಜೊತೆ ಕೈಕುಲುಕದೆ ಮುಂದೆ ಸಾಗಿದರು.
