ರಣಜಿ ಪಂದ್ಯದಲ್ಲಿ ಹಿಂದಿ ಹೇರಿಕೆ: ಗ್ರಾಚಾರ ಬಿಡಿಸಿದ ಕನ್ನಡಿಗರು
ಹಿಂದಿ ರಾಷ್ಟ್ರ ಭಾಷೆ. ಭಾರತ ಇದಕ್ಕಿಂತ ದೊಡ್ಡ ಭಾಷೆ ಮತ್ತೊಂದಿಲ್ಲ. ಎಲ್ಲರೂ ಹಿಂದಿ ಭಾಷೆ ತಿಳಿದಿರಬೇಕು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ವೀಕ್ಷಕ ವಿವರಣೆಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಗ್ರಹಚಾರ ಬಿಡಿಸಿದ್ದಾರೆ. ಏನಿದು ವಿವಾದ? ಇಲ್ಲಿದೆ ಸಂಪೂರ್ಣ ವಿವರ..
ಬೆಂಗಳೂರು(ಫೆ.14): ಕರ್ನಾಟಕ-ಬರೋಡಾ ರಣಜಿ ಪಂದ್ಯದ 2ನೇ ದಿನವಾದ ಗುರುವಾರ ವೀಕ್ಷಕ ವಿವರಣೆಗಾರ ಸುಶೀಲ್ ದೋಶಿ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ರಣಜಿ ಟ್ರೋಫಿ: ಕರ್ನಾಟಕಕ್ಕೆ ಗೆಲ್ಲಲು 149 ರನ್‌ಗಳ ಗುರಿ
ಸಹ ವೀಕ್ಷಕ ವಿವರಣೆಗಾರ, ‘ಗವಾಸ್ಕರ್ ಹಿಂದಿಯಲ್ಲಿ ಕಾಮೆಂಟ್ರಿ ಮಾಡುವುದನ್ನು ಕೇಳುವುದಕ್ಕೆ ಖುಷಿಯಾಗುತ್ತದೆ’ ಎಂದಿದ್ದಕ್ಕೆ ಸುಶೀಲ್, ‘ಪ್ರತಿಯೊಬ್ಬ ಭಾರತೀಯನು ಹಿಂದಿ ಕಲಿಯಬೇಕು. ಅದು ನಮ್ಮ ಮಾತೃ ಭಾಷೆ. ಹಿಂದಿಗಿಂತ ಉತ್ತಮ ಭಾಷೆ ಮತ್ತೊಂದಿಲ್ಲ. ನಾವು ಕ್ರಿಕೆಟಿಗರು, ನಾವಿನ್ನೂ ಹಿಂದಿಯಲ್ಲಿ ಮಾತನಾಡಬೇಕೆ ಎಂದು ವರ್ತಿಸುವವರನ್ನು ಕಂಡರೆ ನನಗೆ ಸಿಟ್ಟು ಬರುತ್ತದೆ. ಅವರಿಗೆ ನೀವು ಭಾರತದಲ್ಲಿ ಇದ್ದೀರಿ, ಇಲ್ಲಿನ ಮಾತೃಭಾಷೆ ಮಾತನಾಡಿ ಎಂದು ಹೇಳಲು ಇಚ್ಛಿಸುತ್ತೇನೆ’ ಎಂದರು.
ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಬಿಸಿಸಿಐ ಹಾಗೂ ಪಂದ್ಯ ಪ್ರಸಾರ ಮಾಡುತ್ತಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಕರ್ನಾಟಕದ ಅಭಿಮಾನಿಗಳು ಟ್ವೀಟ್‌ಗಳನ್ನು ಮಾಡಿದ್ದಾರೆ. ಎಲ್ಲಾ ರಾಜ್ಯಗಳು ತಮ್ಮದೇ ಆದ ಭಾಷೆಯನ್ನು ಹೊಂದಿದೆ. ಭಾರತದಲ್ಲಿ ಯಾವುದೇ ರಾಷ್ಟ್ರ ಭಾಷೆ ಅಂತ ಇಲ್ಲ ಎಂದು ಟ್ವಿಟರ್‌ನಲ್ಲೇ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಿವೀಸ್ ನೆಲದಲ್ಲಿ ಕನ್ನಡ ಕಲರವ: ರಾಹುಲ್-ಪಾಂಡೆ ಮಾತಿಗೆ ಫ್ಯಾನ್ಸ್ ಫುಲ್ ಖುಷ್
ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಹಾಗೂ ಮನೀಶ್ ಪಾಂಡೆ ಜೋಡಿ 5ನೇ ವಿಕೆಟ್‌ಗೆ 107 ರನ್‌ಗಳ ಜತೆಯಾಟವಾಡಿದ್ದರು. ರಾಹುಲ್-ಮನೀಶ್ ಜೋಡಿ ಬ್ಯಾಟಿಂಗ್ ಮಾಡುವ ವೇಳೆ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದರು. ಆ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಓಡಿ-ಓಡಿ ಬಾ, ಬರ್ತೀರಾ?, ಬೇಡ-ಬೇಡ, ಬಾ-ಬಾ ಎನ್ನುವಂತಹ ಮಾತುಗಳು ಸ್ಟಂಪ್ಸ್ ಮೈಕ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿದ್ದವು.