Asianet Suvarna News Asianet Suvarna News

IPL 2021: ರಾಯಲ್ಸ್‌ ಪ್ಲೇ-ಆಫ್‌ ಕನಸಿಗೆ ಸನ್‌ರೈಸರ್ಸ್‌ ಅಡ್ಡಿ?

* ರಾಯಲ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ

* ರಾಯಲ್ಸ್‌ ಪ್ಲೇ-ಆಫ್‌ ಕನಸಿಗೆ ಸನ್‌ರೈಸ​ರ್‍ಸ್ ಅಡ್ಡಿ?

Rajasthan Royals Sunrisers Hyderabad need to address batting frailties to return to winning ways pod
Author
Bangalore, First Published Sep 27, 2021, 10:09 AM IST
  • Facebook
  • Twitter
  • Whatsapp

ದುಬೈ(ಸೆ.27): ಈಗಾಗಲೇ 14ನೇ ಆವೃತ್ತಿಯ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿರುವ ಸನ್‌ರೈಸ​ರ್ಸ್ಸ್‌ ಹೈದರಾಬಾದ್‌(Sunrisers Hyderabad), ರಾಜಸ್ಥಾನ ರಾಯಲ್ಸ್‌ನ(Rajasthan Royals) ಪ್ಲೇ-ಆಫ್‌ ಕನಸಿಗೆ ಅಡ್ಡಿಯಾಗಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ. 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ರಾಜಸ್ಥಾನ, ಬಾಕಿ ಇರುವ 5 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆಲುವುದರ ಜೊತೆಗೆ ನೆಟ್‌ ರನ್‌ರೇಟ್‌ ಸಹ ಕಾಪಾಡಿಕೊಳ್ಳಬೇಕಿದೆ.

ಸತತ 5 ಸೋಲು ಅನುಭವಿಸಿ ಕುಗ್ಗಿರುವ ಸನ್‌ರೈಸ​ರ್‍ಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿ, ಗೆಲುವಿನ ಲಯಕ್ಕೆ ಮರಳುವುದರ ಜೊತೆಗೆ ಪ್ಲೇ-ಆಫ್‌ ಆಸೆ ಜೀವಂತವಾಗಿರಿಸಿಕೊಳ್ಳುವುದು ಸಂಜು ಸ್ಯಾಮ್ಸನ್‌ ಪಡೆಯ ಗುರಿಯಾಗಿದೆ.

ರಾಯಲ್ಸ್‌ಗೆ ತನ್ನ ಬ್ಯಾಟಿಂಗ್‌ ಪಡೆಯದ್ದೇ ಚಿಂತೆಯಾಗಿದೆ. ಕಳೆದ ಪಂದ್ಯದಲ್ಲಿ ಸ್ಯಾಮ್ಸನ್‌ ಏಕಾಂಗಿ ಹೋರಾಟದ ಹೊರತಾಗಿಯೂ ತಂಡ ಸೋತಿತ್ತು. ರಾಯಲ್ಸ್‌ ಬೌಲರ್‌ಗಳು ಉತ್ತಮ ಲಯದಲ್ಲಿದ್ದು ಅದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಸನ್‌ರೈಸ​ರ್‍ಸ್ ಎಲ್ಲಾ ವಿಭಾಗಗಳಲ್ಲೂ ಸುಧಾರಿಸಬೇಕಿದೆ.

ಒಟ್ಟು ಮುಖಾಮುಖಿ: 14

ರಾಜಸ್ಥಾನ: 07

ಸನ್‌ರೈಸರ್ಸ್‌: 07

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಯಶಸ್ವಿ, ಲೆವಿಸ್‌, ಸ್ಯಾಮ್ಸನ್‌(ನಾಯಕ), ಮಿಲ್ಲರ್‌, ಲಿವಿಂಗ್‌ಸ್ಟೋನ್‌, ತೆವಾಟಿಯಾ, ಮಹಿಪಾಲ್‌, ಶ್ರೇಯಸ್‌ ಗೋಪಾಲ್‌, ತ್ಯಾಗಿ, ಮುಸ್ತಾಫಿಜುರ್‌, ಸಕಾರಿಯಾ.

ಸನ್‌ರೈಸರ್ಸ್‌: ರಾಯ್‌, ಸಾಹ, ವಿಲಿಯಮ್ಸನ್‌(ನಾಯಕ), ಪಾಂಡೆ, ವಿರಾಟ್‌/ಅಭಿಷೇಕ್‌, ಸಮದ್‌, ಹೋಲ್ಡರ್‌, ರಶೀದ್‌, ಭುವನೇಶ್ವರ್‌, ಸುಚಿತ್‌, ಬಸಿಲ್‌ ಥಂಪಿ.

ಸ್ಥಳ: ದುಬೈ,

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Follow Us:
Download App:
  • android
  • ios