* ಶ್ರೀಲಂಕಾ ಮಣಿಸಿದ ಟೀಂ ಇಂಡಿಯಾ* ಗೆಲುವಿನ ಆಸೆ ಕೈಬಿಟ್ಟಿದ್ದ ಟೀಂ ಇಂಡಿಯಾಗೆ ದೀಪಕ್ ಚಹಾರ್ ಬಂಪರ್ ಗಿಫ್ಟ್* ಡ್ರೆಸ್ಸಿಂಗ್ ರೂಂನಲ್ಲಿ ರಾಹುಲ್ ದ್ರಾವಿಡ್‌ರವರ ಸ್ಫೂರ್ತಿದಾಯಕ ಭಾಷಣ

ಕೊಲೊಂಬೊ(ಜು.21): ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾ 2 ವಿಶೇಷ ಹಾಗೂ ಅಪರೂಪದ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ತಂಡದ ಆಟಗಾರರಾದ ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ ಅದ್ಭುತ ಇನ್ನಿಂಗ್ಸ್‌ನಿಂದ ಭಾರತ ಗೆಲುವು ತನ್ನದಾಗಿಸಿಕೊಂಡಿದೆ. 

INDvSL; ದೀಪಕ್ ಚಹಾರ್ ಅಬ್ಬರ, ಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ!

ಟೀಂ ಇಂಡಿಯಾದ ಈ ಗೆಲುವಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಭಾರತೀಯ ತಂಡದ ಈ ರೋಚಕ ಪಂದ್ಯ ಮುಗಿದ ಬಳಿಕ, ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲರಿಗೂ ಪ್ರೇರಣೆಯಾಗುವ ಮಾತುಗಳನ್ನಾಡಿದ್ದಾರೆ. ಭಾರತೀ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಗ್ಗೆ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದರಲ್ಲಿ, ಎರಡನೇ ಏಕದಿನ ಪಂದ್ಯದ ಬಳಿಕ ರಾಹುಲ್ ದ್ರಾವಿಡ್ ಇಡೀ ತಂಡವನ್ನುದ್ದೇಶಿಸಿ ಮಾತನಾಡುವುದನ್ನು ನೋಡಬಹುದಾಗಿದೆ. ಭಾರತದ ದಿ ವಾಲ್ ಎಂದೇ ಖ್ಯಾತಿ ಗಳಿಸಿರುವ ದ್ರಾವಿಡ್ ಅವರ "ಚಾಂಪಿಯನ್ ತಂಡ" ವನ್ನು ಹಾಡಿ ಹೊಗಳಿದ್ದಾರೆ.

Scroll to load tweet…

ವಿಡಿಯೋ ಶೇರ್ ಮಾಡಿದ ಬಿಸಿಸಿಐ 

ಬುಧವಾರದಂದು ಬಿಸಿಸಿಐ ಈ ಬಗ್ಗೆ ಟ್ವಿಟರ್‌ನಲ್ಲಿ ವೀಡಿಯೋ ಶೇರ್ ಮಾಡಿದ್ದು, ಇದರಲ್ಲಿ ಭಾರತೀಯ ತಂಡದ ಆಟಗಾರರು ಶ್ರೀಲಂಕಾ ವಿರುದ್ಧ ಸಾಧಿಸಿದ ರೋಚಕ ಗೆಲುವಿನ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಿಡಿಯೋ ಜೊತೆ 'ಆಟಗಾರರ ಭಾವನೆಗಳಿಂದ ಹಿಡಿದು, ಡ್ರೆಸ್ಸಿಂಗ್ ರೂಂನಲ್ಲಿ ರಾಹುಲ್ ದ್ರಾವಿಡ್‌ರವರ ಸ್ಫೂರ್ತಿದಾಯಕ ಭಾಷಣದವರೆಗೆ, ಇದನ್ನು ಮಿಸ್‌ ಮಾಡ್ಕೋಬೇಡಿ' ಎಂದೂ ಬರೆಯಲಾಗಿದೆ.

INDvSL; ಟೀಂ ಇಂಡಿಯಾದ 5 ವಿಕೆಟ್ ಪತನ, ಸಂಕಷ್ಟದಲ್ಲಿ ಧವನ್ ಸೈನ್ಯ

ಆರಂಭದಲ್ಲಿ ಚಹಾರ್, ಭುವನೇಶ್ವರ್, ಸೂರ್ಯ ಕುಮಾರ್ ಸೇರಿ ಟೀಂ ಇಂಡಿಯಾದ ಕೆಲ ಆಟಗಾರರು ಗೆಲುವಿನ ಬಗ್ಗೆ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಭಾರತೀಯ ತಂಡದ ಮುಖ್ಯ ಕೋಚ್ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲ ಆಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, 'ಅವರು ಉತ್ತಮವಾಗಿ ಆಡಿದರು. ಅವರ ಆಟಕ್ಕೆ ನಾವು ತಕ್ಕ ತಿರುಗೇಟು ನೀಡಿದೆವು. ನಾವು ಎದುರಾಳಿಗಳನ್ನು ಗೌರವಿಸಬೇಕು. ಅವರದ್ದು ಅಂತಾರಾಷ್ಟ್ರೀಯ ತಂಡ ಕೂಡ ಆಗಿದೆ. ಅವರು ಉತ್ತಮ ಪ್ರದರ್ಶನದೊಂದಿಗೆ ನಮ್ಮ ಮೇಲೆ ಒತ್ತಡ ಹೇರಿದರು. ನಾವು ಚಾಂಪಿಯನ್‌ಗಳಂತೆ ಅವರಿಗೆ ಪ್ರತಿಕ್ರಿಯಿಸಿದೆವು. ಎಲ್ಲರೂ ಚೆನ್ನಾಗಿ ಆಡಿದ್ದೀರಿ, ಅದ್ಭುತ ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

ಸದ್ಯ ದ್ರಾವಿಡ್‌ ಭಾಷಣದ ಈ ತುಣುಕು ಭಾರೀ ವೈರಲ್ ಆಗಿದೆ.