ದಿಗ್ಗಜ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ, ಬೆಂಗಳೂರು ರಸ್ತೆಯಲ್ಲಿ ವಾಗ್ವಾದ Video
ಬೆಂಗಳೂರಿನ ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಹಾಗೂ ಗೂಡ್ಸ್ ಆಟೋ ಚಾಲಕನ ನಡುವೆ ವಾಗ್ವಾದ ನಡೆಯುತ್ತಿರುವ ದೃಶ್ಯ ವೈರಲ್ ಆಗಿದೆ. ರಾಹುಲ್ ದ್ರಾವಿಡ್ ಕಾರಿಗೆ ಆಟೋ ಡಿಕ್ಕಿಯಾದ ಪರಿಣಾಮ ಈ ಘಟನೆ ನಡೆದಿದೆ.

ಬೆಂಗಳೂರು(ಫೆ.04) ಬೆಂಗಳೂರು ಟ್ರಾಫಿಕ್ ನಡುವೆ ವಾಹನಗಳು ಸಣ್ಣ ಪ್ರಮಾಣದಲ್ಲಿ ಡಿಕ್ಕಿಯಾಗುವುದು, ಜಗಳ, ವಾಗ್ವಾದ ಸಾಮಾನ್ಯವಾಗುತ್ತಿದೆ. ಇದಕ್ಕೆ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಕೂಡ ಹೊರತಾಗಿಲ್ಲ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ನಿಂತಿದ್ದ ವೇಳೆ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೋ ಡಿಕ್ಕಿಯಾಗಿದೆ. ಇದರ ಪರಿಣಾಮ ಕಾರಿನಿಂದ ಇಳಿದು ಬಂದ ರಾಹುಲ್ ದ್ರಾವಿಡ್ ಆಟೋ ಚಾಲಕನ ವರ್ತನೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಗೂಡ್ಸ್ ಆಟೋ ಚಾಲಕ ವಾಗ್ವಾದಕ್ಕೆ ಇಳಿದ ಘಟನೆ ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ನಡೆದಿದೆ.
ಕೆಲಸದ ಮುಗಿಸಿ ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ರಾಹುಲ್ ದ್ರಾವಿಡ್ ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದರು. ಟ್ರಾಫಿಕ್ ಸಿಗ್ನಲ್‌ನಲಿ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ವಾಹನಗಳು ನಿಂತಿತ್ತು. ಆದರೆ ಗೂಡ್ಸಸ್ ಆಟೋ ಚಾಲಕ ನಿಂತಿದ್ದ ರಾಹುಲ್ ದ್ರಾವಿಡ್ ಕಾರಿಗೆ ಗುದ್ದಿದ್ದಾನೆ. ಇದರಿಂದ ರಾಹುಲ್ ದ್ರಾವಿಡ್ ಕಾರಿನ ಲೈಟ್ ಪುಡಿಯಾಗಿದೆ. ಹಾಗೂ ಇತರ ಭಾಗಗಳು ಸ್ಕ್ರಾಚ್ ಬಿದ್ದಿದೆ. ಗೂಡ್ಸ್ ಆಟೋ ಕಾರಿಗೆ ಡಿಕ್ಕಿಯಾಗುತ್ತಿದ್ದಂತೆ ರಾಹುಲ್ ದ್ರಾವಿಡ್ ಕಾರಿನಿಂದ ರಸ್ತೆಗೆ ಇಳಿದಿದ್ದಾರೆ.
ಸಿಂಪಲ್ ಮ್ಯಾನ್, ಯಶಸ್ವಿ ಕೋಚ್ ರಾಹುಲ್ ದ್ರಾವಿಡ್ ಒಟ್ಟು ಸಂಪತ್ತು ಎಷ್ಟು? ಇರುವ ಕಾರುಗಳು ಯಾವ್ಯಾವು?
ರಾಹುಲ್ ದ್ರಾವಿಡ್ ಇಳಿದು ಬಂದು ಗೂಡ್ಸ್ ಆಟೋ ಚಾಲಕನ ನಡೆಯನ್ನು ಪ್ರಶ್ನಿಸಿದ್ದರೆ. ನಿಲ್ಲಿಸಿದ್ದ ಕಾರಿಗೆ ಬಂದು ಗುದ್ದಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಗೂಡ್ಸ್ ಆಟೋ ಚಾಲಕ ವಾಗ್ವಾದಕ್ಕೆ ಇಳಿದಿದ್ದಾರೆ. ರಾಹುಲ್ ದ್ರಾವಿಡ್ ವಿರುದ್ಧ ತನ್ನದೇನು ತಪ್ಪಿಲ್ಲ ಎಂದು ಗೂಡ್ಸ್ ಆಟೋ ಚಾಲಕ ವಾದಿಸಲು ಮುಂದಾಗಿದ್ದಾರೆ. ಆದರೆ ದ್ರಾವಿಡ್ ಮಾತುಗಳನ್ನು ಕೇಳಿಸಿಕೊಳ್ಳದ ಆಟೋ ಚಾಲಕ ರಸ್ತೆಯಲ್ಲಿ ಭಾರಿ ವಾಗ್ವಾದಕ್ಕೆ ಇಳಿದಿದ್ದಾರೆ.
ಗೂಡ್ಸ್ ಆಟೋ ಚಾಲಕನ ಬಳಿ ಮಾತನಾಡಿ ಪ್ರಯೋಜನವಿಲ್ಲ ಎಂದು ಆರಿತ ರಾಹುಲ್ ದ್ರಾವಿಡ್ ತೆರಳಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಆದರೆ ರಾಹುಲ್ ದ್ರಾವಿಡ್ ಜೊತೆ ಆಟೋ ಚಾಲಕ ವಾಗ್ವಾದ ನಡೆಸುತ್ತಿರುವ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಸ್ತೆಯಲ್ಲಿ ಜನಸಾಮಾನ್ಯರಂತೆ ರಾಹುಲ್ ದ್ರಾವಿಡ್ ಗೂಡ್ಸ್ ಆಟೋ ಚಾಲಕನ ಜೊತೆ ಮಾತನಾಡುತ್ತಿರುವುದು ಹಾಗೂ ವಾಗ್ವಾದದ ದೃಶ್ಯಗಳು ಹರಿದಾಡುತ್ತಿದೆ. ಭಾರಿ ಕಮೆಂಟ್ ಕೂಡ ವ್ಯಕ್ತವಾಗುತ್ತಿದೆ. ಇದೀಗ ದ್ರಾವಿಡ್ ಜೊತೆ ವಾಗ್ವಾದ ಮಾಡುವ ವ್ಯಕ್ತಿ ಜೀವನದಲ್ಲಿ ನೋಡಿದ್ದು ಇದೇ ಮೊದಲು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ರಾಹುಲ್ ದ್ರಾವಿಡ್-ಗೌತಮ್ ಗಂಭೀರ್ ಕೋಚಿಂಗ್ ನಡುವಿನ ವ್ಯತ್ಯಾಸವೇನು? ಗುಟ್ಟು ಬಿಚ್ಚಿಟ್ಟ ಟೀಂ ಇಂಡಿಯಾ ಸ್ಟಾರ್