ಬೆಂಗಳೂರು(ಫೆ.14):  ಪುಲ್ವಾಮಾ ದಾಳಿಯಾಗಿ 2 ವರ್ಷ ಸಂದರೂ ನೋವು ಇನ್ನು ಮಾಸಿಲ್ಲ. ಹಗಲಿರುಳು ದೇಶದ ಕಾಪಾಡಿದ 40 CRPF ವೀರ ಯೋಧರು ಈ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಇದೆ ಫೆಬ್ರವರಿ 14, 2019ರಂದು ಭಯೋತ್ಪಾದಕರು ನಡೆಸಿದ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪುಲ್ವಾಮಾ ಹುತಾತ್ಮರ 2ನೇ ವರ್ಷದ ಈ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ವೀರ ಯೋಧರನ್ನು ಸ್ಮರಿಸಿದ್ದಾರೆ.

ಪುಲ್ವಾಮಾ ಹುತಾತ್ಮರಿಗೆ ನಮನ, ಸೇನೆ ಸೇರಿದ ಸ್ವದೇಶಿ ಅರ್ಜುನ; ಫೆ.14ರ ಟಾಪ್ 10 ಸುದ್ದಿ!.

ಮಾಜಿ ಕ್ರಿಕೆಟಿಗ ವೀರೇಂದ್ರ ಸಹ್ವಾಗ್, ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸೇರಿದಂತೆ ಹಲವು ಕ್ರಿಕೆಟಿಗರು ಪುಲ್ವಾಮಾ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರು ಯಾವತ್ತು ಅಜರಾಮಾರ ಎಂದು ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಹುತಾತ್ಮ ಯೋಧರ ಫೋಟೋ ಪೋಸ್ಟ್ ಮಾಡಿದ್ದಾರೆ.

ಭಾರತವನ್ನು ಇಟ್ಟಿಗೆ, ಸಿಮೆಂಟ್‌ನಿಂದ ಕಟ್ಟಿಲ್ಲ. ವೀರ ಯೋಧರ ಬಲಿದಾನದಿಂದ ಈ ದೇಶವನ್ನು ಒಗ್ಗೂಡಿಸಿದ್ದಾರೆ ಎಂದು ದೆಹಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.