ಅಸ್ಸಾಂ(ಸೆ.07):  ಕೊರೋನಾ ವೈರಸ್ ಕಾರಣ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಅಸ್ಸಾಂನ ಪ್ರತಿಭಾನ್ವಿಯ ಯುವ ವೇಗಿ  ಅಸ್ಸಾಂ ರಣಜಿ ತಂಡಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳುವ ಯತ್ನದಲ್ಲಿದ್ದ.  ಆದರೆ 19 ವರ್ಷದ ಬಿವಾಕರ್ ನಾಗ್ ಅಸ್ಸಾಂನ ಕರ್ಬಿ ಅಂಗ್ಲಾಂಗ್ ಬಳಿ ಇರುವ ಪ್ರಖ್ಯಾತ ಕಾಕೋಸಾಂಗ್ ಜಲಪಾತದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ.

ಶಾಕಿಂಗ್ ನ್ಯೂಸ್: 250 ಅಡಿ ಪ್ರಪಾತದಿಂದ ಬಿದ್ದು ಮಾಜಿ ಕ್ರಿಕೆಟಿಗ ಸಾವು..!

ಕೂಚ್ ಬೆಹಾರ್ ಟ್ರೋಫಿಯಲ್ಲಿ ಅಸ್ಸಾಂ ಅಂಡರ್ 19 ತಂಡ ಪ್ರತಿನಿಧಿಸಿದ್ದ ವೇಗಿ ಬಿವಾಕರ್ ನಾಗ್, ಆಯ್ಕೆ ಸಮಿತಿ ಗಮನಸೆಳೆದಿದ್ದ. ಕೊರೋನಾ ಕಾರಣ ಮನೆಯಲ್ಲಿ ಬಂಧಿಯಾಗಿದ್ದ. ಇತ್ತೀಚೆಗೆ ಬಿವಾಕರ್ ಸೇರಿದಂತೆ 8 ಮಂದಿ ಗೆಳೆಯರು ಕಾಕೊಸಾಂಗ್ ಜಲಪಾತಕ್ಕೆ ತೆರಳಿದ್ದಾರೆ. ಈ ವೇಳೆ ಆದರೆ ಮರಳಿ ಬಾರದ ಕಾರಣ ಪೋಷಕರು ಅತಂಕಗೊಂಡು ಹುಡುಕಾಟ ಆರಂಭಿಸಿದ್ದಾರೆ. 

 

ತಕ್ಷಣವವೇ ಡಿಸಾಸ್ಟರ್ ರೆಸ್ಪಾನ್ಸ್ ತಂಡ ಕೂಡ ಜಲಪಾತದ ಬಳಿ ಹುಡುಕಾಟ ಆರಂಭಿಸಿತು. ಇಂದು(ಸೆ.07) ಅಸ್ಸಾಂ ವೇಗಿ ಬಿವಾಕರ್ ನಾಗ್ ಸೇರಿದಂತೆ ಇಬ್ಬರ   ಶವ ಪತ್ತೆಯಾಗಿದೆ. ಜಲಪಾತದಲ್ಲಿ ಕಾಲು ಜಾರಿ ಪ್ರವಾತಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ,

ಅಸ್ಸಾಂ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ದೇವಜಿತ್ ಲೊನ್ ಸಾಕಿಯಾ ಯುವ ಕ್ರಿಕೆಟಿಗನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಭರವಸೆಯ ವೇಗಿಯಾಗಿದ್ದ ಬಿವಾಕರ್ ಚಿಕ್ಕ ವಯಸ್ಸಿನಲ್ಲೇ ರಣಜಿ ತಂಡಕ್ಕೆ ಆಯ್ಕೆಯಾಗುವ ಅರ್ಹತೆ ಹೊಂದಿದ್ದರು. ಬಿವಾಕರ್ ಕುಟುಂಬಕ್ಕೆ ನೋವು ಭರಿಸವು ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.