Pro Kabaddi League: ಗುಜರಾತ್‌ ಜೈಂಟ್ಸ್‌ಗೆ ಹ್ಯಾಟ್ರಿಕ್‌ ಜಯ

ಆರಂಭದಲ್ಲಿ ಜೈಂಟ್ಸ್‌ ಮಿಂಚಿನ ಆಟವಾಡಿದರೂ, ಮೊದಲಾರ್ಧದ ವೇಳೆಗೆ ಮುಂಬಾ 18-16 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಬಳಿಕ ಪುಟಿದೆದ್ದ ಜೈಂಟ್ಸ್‌ ಅಂಕಗಳ ಅಂತರ ಹೆಚ್ಚಿಸುತ್ತಾ ಸಾಗಿದರೂ, ಒಂದು ಹಂತದಲ್ಲಿ ಇತ್ತಂಡಗಳು 36-36ರಲ್ಲಿ ಸಮಬಲ ಸಾಧಿಸಿದ್ದವು. ಈ ವೇಳೆ ಸೋನು ಒಂದೇ ರೈಡ್‌ನಲ್ಲಿ 3 ಅಂಕ ಪಡೆದು ಜೈಂಟ್ಸ್‌ ರೋಚಕ ಗೆಲುವಿಗೆ ಕಾರಣರಾದರು.

Pro Kabaddi League Gujarat Giants make it three successive wins at home kvn

ಅಹಮದಾಬಾದ್‌(ಡಿ.06): ಸತತ 3ನೇ ಪಂದ್ಯದಲ್ಲೂ ‘ಸೂಪರ್‌ 10’ ಮೂಲಕ ಅಬ್ಬರಿಸಿದ ಯುವ ರೈಡರ್‌ ಸೋನು 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುಜರಾತ್‌ ಜೈಂಟ್ಸ್‌ಗೆ ಹ್ಯಾಟ್ರಿಕ್‌ ಗೆಲುವು ತಂದುಕೊಟ್ಟಿದ್ದಾರೆ. ಮಂಗಳವಾರ ಯು ಮುಂಬಾ ವಿರುದ್ಧ ಜೈಂಟ್ಸ್‌ಗೆ 39-37 ಅಂಕಗಳಿಂದ ಜಯ ಲಭಿಸಿತು.

ಆರಂಭದಲ್ಲಿ ಜೈಂಟ್ಸ್‌ ಮಿಂಚಿನ ಆಟವಾಡಿದರೂ, ಮೊದಲಾರ್ಧದ ವೇಳೆಗೆ ಮುಂಬಾ 18-16 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಬಳಿಕ ಪುಟಿದೆದ್ದ ಜೈಂಟ್ಸ್‌ ಅಂಕಗಳ ಅಂತರ ಹೆಚ್ಚಿಸುತ್ತಾ ಸಾಗಿದರೂ, ಒಂದು ಹಂತದಲ್ಲಿ ಇತ್ತಂಡಗಳು 36-36ರಲ್ಲಿ ಸಮಬಲ ಸಾಧಿಸಿದ್ದವು. ಈ ವೇಳೆ ಸೋನು ಒಂದೇ ರೈಡ್‌ನಲ್ಲಿ 3 ಅಂಕ ಪಡೆದು ಜೈಂಟ್ಸ್‌ ರೋಚಕ ಗೆಲುವಿಗೆ ಕಾರಣರಾದರು. ಸೋನು 16 ರೈಡ್‌ನಲ್ಲಿ 11 ಅಂಕ ಪಡೆದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ರಾಕೇಶ್‌ ಹಾಗೂ ರೋಹಿತ್‌ ಗುಲಿಯಾ ತಲಾ 7 ರೈಡ್‌ ಅಂಕ ಸಂಪಾದಿಸಿದರು. ಗುಮಾನ್‌ ಸಿಂಗ್‌ ಹಾಗೂ ಅಮೀರ್‌ಮೊಹಮದ್‌ ಝಫರ್‌ದಾನೆಶ್‌ ತಲಾ 10 ಅಂಕಗಳನ್ನು ಪಡೆದರೂ ಮುಂಬೈನ ಸತತ 2ನೇ ಜಯದ ಕನಸು ಕೈಗೂಡಲಿಲ್ಲ.

ನಾನು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಿಲ್ಲ: ಮೌನಮುರಿದ ಸೌರವ್ ಗಂಗೂಲಿ

ಇಂದಿನ ಪಂದ್ಯಗಳು

ತೆಲುಗು ಟೈಟಾನ್ಸ್‌-ಪಾಟ್ನಾ, ರಾತ್ರಿ 8ಕ್ಕೆ

ಯುಪಿ ಯೋಧಾಸ್‌-ಹರ್ಯಾಣ, ರಾತ್ರಿ 9ಕ್ಕೆ

ಕಿರಿಯರ ಆರ್ಚರಿ ಕೂಟ: ಡಿ.10ಕ್ಕೆ ಆಯ್ಕೆ ಟ್ರಯಲ್ಸ್‌

ಬೆಂಗಳೂರು: 2024ರ ಜ.4ರಿಂದ 13ರ ವರೆಗೆ ಛತ್ತೀಸ್‌ಗಢದಲ್ಲಿ 40ನೇ ರಾಷ್ಟ್ರೀಯ ಸಬ್‌-ಜೂನಿಯರ್‌ ಆರ್ಚರಿ ಚಾಂಪಿಯನ್‌ಶಿಪ್‌ ನಡೆಯಲಿದ್ದು, ಇದಕ್ಕಾಗಿ ಡಿ.10ರಂದು ಕರ್ನಾಟಕ ಅಮೆಚೂರ್‌ ಆರ್ಚರಿ ಸಂಸ್ಥೆ ಆಯ್ಕೆ ಟ್ರಯಲ್ಸ್‌ ಆಯೋಜಿಸಿದೆ. ಕಂಠೀರವ ಕ್ರೀಡಾಂಗಣದಲ್ಲಿ ಟ್ರಯಲ್ಸ್‌ ನಡೆಯಲಿದ್ದು, 2006ರ ಜ.1ರ ಬಳಿಕ ಜನಿಸಿದ ಅಥ್ಲೀಟ್‌ಗಳು ಪಾಲ್ಗೊಳ್ಳಬಹುದು. ಆಸಕ್ತರು ಡಿ.9ರ ಮೊದಲು ಆರ್ಚರಿ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ಕ್ರಿಕೆಟಿಗರ ಫೇವರೇಟ್ ಲಂಡನ್, ವಿರಾಟ್, ರೋಹಿತ್ ನಂತರ ಶುಬ್ಮನ್‌ ಗಿಲ್ ಸರದಿ!

ಬ್ಯಾಡ್ಮಿಂಟನ್‌: 4 ಸ್ಥಾನ ಜಿಗಿದ ಅಶ್ವಿನಿ-ತನಿಶಾ

ನವದೆಹಲಿ: ಇತ್ತೀಚೆಗಷ್ಟೇ ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ರನ್ನರ್‌-ಅಪ್ ಆದ ಭಾರತದ ತಾರಾ ಮಹಿಳಾ ಡಬಲ್ಸ್‌ ಜೋಡಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಜೋಡಿ ಬಿಡಬ್ಲ್ಯುಎಫ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 28ನೇ ಸ್ಥಾನಕ್ಕೇರಿದೆ. ಮಂಗಳವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಭಾರತದ ಜೋಡಿ 4 ಸ್ಥಾನ ಪ್ರಗತಿ ಸಾಧಿಸಿತು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ 2ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಪುರುಷರ ಸಿಂಗಗಲ್ಸ್‌ನಲ್ಲಿ ಪ್ರಣಯ್‌ 8ನೇ, ಲಕ್ಷ್ಯ ಸೇನ್‌ 17, ಕಿದಂಬಿ ಶ್ರೀಕಾಂತ್ 24ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 12 ಸ್ಥಾನ ಕಾಯ್ದುಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios