ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನದಲ್ಲಿ 96 ರನ್ ಗೆಲುವುಏಕದಿನ ಸರಣಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ ಟೀಂ ಇಂಡಿಯಾಪ್ರಸಿದ್ಧ ಕೃಷ್ಣ, ಮೊಹಮದ್ ಸಿರಾಜ್ ಮೂರು ವಿಕೆಟ್ ಸಾಧನೆ
ಅಹಮದಾಬಾದ್ (ಫೆ. 11): ಪ್ರಸಿದ್ಧ ಕೃಷ್ಣ(Prasidh Krishna) ಮತ್ತು ಮೊಹಮ್ಮದ್ ಸಿರಾಜ್ (Mohammed Siraj ) ಅವರ ತಲಾ ಮೂರು ವಿಕೆಟ್ ಗಳ ಸಾಹಸದ ನೆರವಿನಿಂದ ಭಾರತ (Team India)ತಂಡ ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ (Third ODI) ವೆಸ್ಟ್ ಇಂಡೀಸ್ (West Indies)ವಿರುದ್ಧ 96 ರನ್ ಗಳ ಜಯ ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. 266 ರನ್ ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 37.1 ಓವರ್ ಗಳಲ್ಲಿ 169 ರನ್ ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ವೈಟ್ ವಾಷ್ ಅವಮಾನ ಎದುರಿಸಿದ್ದ ಭಾರತ ತಂಡ, ಒಂದು ತಿಂಗಳ ಒಳಗಾಗಿಯೇ ವೆಸ್ಟ್ ಇಂಡೀಸ್ ತಂಡವನ್ನು ತವರಿನಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಕಹಿ ನೆನಪುಗಳನ್ನು ಅಳಿಸಿ ಹಾಕಿದೆ. ಇನ್ನು ಮಾಜಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ಪಾಲಿಗೆ ಏಕದಿನ ಮಾದರಿಯಲ್ಲಿ ಮತ್ತೊಂದು ಕೆಟ್ಟ ಸರಣಿ ಸೋಲು ಇದಾಗಿದೆ.
ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ಅನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಭಾರತ ಯಶಸ್ವಿಯಾಗಿದ್ದು ಇದೇ ಮೊದಲು. ಇದು 2007 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಅವರ ಸತತ 11 ನೇ ಏಕದಿನ ಸರಣಿ ಜಯವಾಗಿದೆ. ಮೊಣಕಾಲಿನ ನೋವಿನಿಂದಾಗಿ ಕೊನೆಯ 2 ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದ ನಾಯಕ ಕೀರಾನ್ ಪೊಲಾರ್ಡ್ ಡಗ್-ಔಟ್‌ನಿಂದ ವೆಸ್ಟ್ ಇಂಡೀಸ್ ತಂಡದ ಹೀನಾಯ ನಿರ್ವಹಣೆಯನ್ನು ವೀಕ್ಷಣೆ ಮಾಡಿದರು.
ಶನಿವಾರ ಮತ್ತು ಭಾನುವಾರದ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಬಿಡ್ಡಿಂಗ್ ವಾರ್ ನಲ್ಲಿ ದೊಡ್ಡ ಮೊತ್ತ ಪಡೆಯುವ ನಿರೀಕ್ಷೆಯಿರುವ ಆಲ್ ರೌಂಡರ್ ಓಡಿಯನ್ ಸ್ಮಿತ್ ಅವರು 18 ಎಸೆತಗಳಲ್ಲಿ 36 ರನ್ ಗಳಿಸಿ ಗಮನಸೆಳೆದರು. ಕೆಳ ಕ್ರಮಾಂಕದಲ್ಲಿ ಅಲ್ಜಾರಿ ಜೋಸೆಫ್ (29) ಮತ್ತು ಹೇಡನ್ ವಾಲ್ಷ್ ಜೂನಿಯರ್ (13) 9ನೇ ವಿಕೆಟ್‌ಗೆ 47 ರನ್‌ಗಳ ನಿರಾಶಾದಾಯಕ ಜೊತೆಯಾಟ ಆಡುವ ಮೂಲಕ ಭಾರತ ತಂಡದ ಗೆಲುವನ್ನು ಕೆಲ ಹೊತ್ತು ವಿಳಂಬ ಮಾಡಿದರು. ಆದರೆ, ಮೊಹಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ವಿಂಡೀಸ್ ತಂಡವನ್ನು 40 ಓವರ್ ಗಳ ಒಳಗಾಗಿ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.
Ind vs WI: ಶ್ರೇಯಸ್, ಪಂತ್ ಫಿಫ್ಟಿ, ವಿಂಡೀಸ್‌ಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾ
ಮೊದಲ 2 ಪಂದ್ಯಗಳಲ್ಲಿ ವಿಫಲವಾಗಿದ್ದ ಹಂಗಾಮಿ ನಾಯಕ ನಿಕೋಲಸ್ ಪೂರನ್ ಕೆಲ ಹೊತ್ತು ಜವಾಬ್ದಾರಿಯನ್ನು ತೋರಿದರು. ಆದರೆ, ಇನ್ನೊಂದು ತುದಿಯಲ್ಲಿ ವಿಕೆಟ್ ಗಳು ಉರುಳುತ್ತಿದ್ದ ಕಾರಣ ದೊಡ್ಡ ಜೊತೆಯಾಟವಾಡಲು ಸಾಧ್ಯವಾಗಲಿಲ್ಲ. ಆರಂಭಿಕರಾದ ಶಾಯ್ ಹೋಪ್ ಹಾಗೂ ಬ್ರಾಂಡನ್ ಕಿಂಗ್ ಅವರು ಮೂರು ಪಂದ್ಯಗಳಿಂದ ಕೇವಲ 85 ರನ್ ಬಾರಿಸಿದರೆ, ಹಿರಿಯ ಬ್ಯಾಟ್ಸ್ ಮನ್ ಡ್ಯಾರೆನ್ ಬ್ರಾವೋ ಮೂರು ಪಂದ್ಯಗಳಿಂದ ಕೇವಲ 39 ರನ್ ಬಾರಿಸಿ ಸರಣಿಯನ್ನು ಮುಗಿಸಿದರು.
ಆರಂಭಿಕ ದಾಳಿಯಲ್ಲಿ ದೀಪಕ್ ಚಹಾರ್ ಮತ್ತೊಮ್ಮೆ ಗಮನಸೆಳೆದು, ಆರಂಭಿಕ 2 ವಿಕೆಟ್ ಪಡೆದರೆ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕೂಡ ತಲಾ 3 ವಿಕೆಟ್ ಪಡೆದರು. ಸುಮಾರು ಒಂದು ವರ್ಷದ ಬಳಿಕ ಭಾರತದ ಪರ ಮೊದಲ ಪಂದ್ಯ ಆಡಿದ ಕುಲದೀಪ್ ಯಾದವ್ ಅವರ ನಿರ್ವಹಣೆ ಟೀಂ ಇಂಡಿಯಾ ಖುಷಿಗೆ ಕಾರಣವಾಗಿದೆ. ಬಿಗಿ ದಾಳಿ ನಡೆಸಿದ ಕುಲದೀಪ್ ಯಾದವ್, ಪೂರನ್ ಅವರ ದೊಡ್ಡ ವಿಕೆಟ್ ಉರುಳಿಸುವಲ್ಲೂ ಯಶ ಕಂಡರು. ಓಡಿಯನ್ ಸ್ಮಿತ್ ಬ್ಯಾಟಿಂಗ್ ವೇಳೆ ಕುಲದೀಪ್ 3 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟರಾದರೂ, ಅವರ ಬೌಲಿಂಗ್ ವಿಶ್ವಾಸದಿಂದ ಕೂಡಿತ್ತು.
ವಿರಾಟ್ ಕೊಹ್ಲಿ ಕೂಡ ಅಲ್ಲು ಅರ್ಜುನ್ ಫ್ಯಾನ್? ಕೊಹ್ಲಿಯ ಶ್ರೀವಲ್ಲಿ ಸ್ಟೆಪ್ಸ್ ವೈರಲ್
ಭಾರತ 50 ಓವರ್‌ಗಳಲ್ಲಿ 265 ಆಲೌಟ್ (ಶ್ರೇಯಸ್ ಅಯ್ಯರ್ 80, ರಿಷಬ್ ಪಂತ್ 56; ಜೇಸನ್ ಹೋಲ್ಡರ್ 34ಕ್ಕೆ 4, ಅಲ್ಜಾರಿ ಜೋಸೆಫ್ 54ಕ್ಕೆ 2) ವೆಸ್ಟ್ ಇಂಡೀಸ್: 37.1 ಓವರ್ ಗಳಲ್ಲಿ169 ಆಲೌಟ್ (ಓಡಿಯನ್ ಸ್ಮಿತ್ 36, ನಿಕೋಲಸ್ ಪೂರನ್ 34; ಪ್ರಸಿದ್ಧ್ ಕೃಷ್ಣ 27ಕ್ಕೆ 3, ಮೊಹಮದ್ ಸಿರಾಜ್ 29ಕ್ಕೆ 3) ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್, ಸರಣಿಶ್ರೇಷ್ಠ: ಪ್ರಸಿದ್ಧ ಕೃಷ್ಣ
