Asianet Suvarna News Asianet Suvarna News

ಮಹಿಳಾ ಐಪಿಎಲ್‌ಗೂ ಮುನ್ನ ಪಾಕ್‌ನಲ್ಲಿ ಮಹಿಳಾ ಟಿ20?

* ಮಹಿಳೆಯರ ಟಿ20 ಲೀಗ್‌ ಆರಂಭಿಸಲು ಪಿಸಿಬಿ ಚಿಂತನೆ

* ಏಷ್ಯಾದ ಮೊದಲ ಮಹಿಳಾ ಟಿ20 ಲೀಗ್‌ ನಡೆಸಲು ಪಿಸಿಬಿ ಯೋಚನೆ

* ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಪಿಎಸ್‌ಎಲ್‌ ರೀತಿ ಅಂಡರ್‌-19 ಹಂತದಲ್ಲಿ ಲೀಗ್‌ ಆರಂಭಿಸಲು ಯೋಚನೆ

PCB chief Ramiz Raja hints at Womens PSL eyes on first Asian board to host womens T20 league kvn
Author
Bengaluru, First Published Nov 11, 2021, 7:50 AM IST
  • Facebook
  • Twitter
  • Whatsapp

ಕರಾಚಿ(ನ.11): ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) (Pakistan Cricket Board) ಅಧ್ಯಕ್ಷ ರಮೀಜ್‌ ರಾಜಾ (Ramiz Raja) ಮಹಿಳಾ ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್‌ಎಲ್‌) (Pakistan Super League) ಟಿ20 ಟೂರ್ನಿ ಆರಂಭಿಸುವ ಬಗ್ಗೆ ಚಿಂತನೆ ಇದೆ ಎಂದು ಹೇಳಿದ್ದಾರೆ. 

ಬುಧವಾರ ರಮೀಜ್‌ ಮಾತನಾಡುವ ವಿಡಿಯೋವನ್ನು ಪಿಸಿಬಿ (PCB) ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಮಹಿಳೆಯರ ಟಿ20 ಲೀಗ್‌ ಆರಂಭಿಸಲಿರುವ ಏಷ್ಯಾದ ಮೊದಲ ದೇಶವಾಗಲಿದ್ದೇವೆ ಎನ್ನುವ ವಿಶ್ವಾಸವಿದೆ. ಅಲ್ಲದೇ, ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಪಿಎಸ್‌ಎಲ್‌ ರೀತಿ ಅಂಡರ್‌-19 ಹಂತದಲ್ಲಿ ಲೀಗ್‌ ಆರಂಭಿಸುತ್ತೇವೆ. ವಿಶ್ವದಲ್ಲಿ ಎಲ್ಲೂ ಈ ರೀತಿಯ ಲೀಗ್‌ ಇಲ್ಲ’ ಎಂದು ರಾಜಾ ಹೇಳಿದ್ದಾರೆ. 

T20 World Cup; ಸೆಮೀಸ್‌ಗೆ ಏರದ ಭಾರತ, ಟಾಪ್‌ ಎತ್ತಿ 'ಎಲ್ಲ' ತೋರಿಸಿದ ಪಾಕ್ ಅಭಿಮಾನಿ!

ಮಹಿಳೆಯರ ಐಪಿಎಲ್‌ (IPL) ಆರಂಭಕ್ಕೆ ಬಿಸಿಸಿಐ (BCCI) ಮೇಲೆ ಒತ್ತಡ ಬೀಳುತ್ತಿರುವ ಸಮಯದಲ್ಲೇ ಪಿಸಿಬಿ ಅಧ್ಯಕ್ಷರಿಂದ ಈ ರೀತಿ ಹೇಳಿಕೆ ಹೊರಬಿದ್ದಿರುವುದು, ಬಿಸಿಸಿಐ ಮೇಲೆ ಇನ್ನಷ್ಟು ಒತ್ತಡ ಬೀಳುವಂತೆ ಮಾಡಬಹುದು.

ಒಲಿಂಪಿಕ್ಸ್‌ಗೆ ಟಿ10 ಕ್ರಿಕೆಟ್‌ ಸೇರಿಸಬೇಕು: ಡು ಪ್ಲೆಸಿ

ಅಬುಧಾಬಿ: ಟಿ10 ಮಾದರಿಯ ಕ್ರಿಕೆಟ್‌ಗೆ ಉಜ್ವಲ ಭವಿಷ್ಯವಿದೆ. ಒಲಿಂಪಿಕ್ಸ್‌ನಲ್ಲೂ (Olympics) ಅದನ್ನು ಆಡಬೇಕು ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್‌ ಡು ಪ್ಲೆಸಿ (Faf Du Plessis) ಅಭಿಪ್ರಾಯಪಟ್ಟಿದ್ದಾರೆ. 

T20 World Cup 2021: ಇಂಗ್ಲೆಂಡ್ ಮಣಿಸಿ ಚೊಚ್ಚಲ ಭಾರಿಗೆ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್!

‘ನಾನು ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ದೀರ್ಘ ಕಾಲ ಆಡಿದ್ದೇನೆ. ಆದರೆ ಈಗಲೂ ನಾನು ಟಿ10 ಮಾದರಿಗೆ ಆಕರ್ಷಿತನಾಗಿದ್ದೇನೆ. ಆಟಗಾರರು ಈ ರೀತಿಯ ಟೂರ್ನಿಯತ್ತ ಗಮನಹರಿಸಲಿದ್ದಾರೆ. ಈ ಮಾದರಿಯ ಆಟವನ್ನು ಒಲಿಂಪಿಕ್ಸ್‌ಗೂ ಸೇರಿಸಬೇಕು’ ಎಂದಿದ್ದಾರೆ. 2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರಿಸಲು ಬಿಡ್‌ ಸಲ್ಲಿಸಲಾಗುವುದು ಎಂದು ಐಸಿಸಿ ತಿಂಗಳುಗಳ ಹಿಂದೆಯೇ ಖಚಿತಪಡಿಸಿತ್ತು.

ಕಾಮೆಂಟ್ರಿಗೆ ಮರಳುವ ಸುಳಿವು ನೀಡಿದ ರವಿಶಾಸ್ತ್ರಿ

ದುಬೈ: ಟೀಂ ಇಂಡಿಯಾದ ನಿರ್ಗಮಿತ ಪ್ರಧಾನ ಕೋಚ್‌ ರವಿಶಾಸ್ತ್ರಿ (Ravi Shastri), ಕಾಮೆಂಟ್ರಿಗೆ ವಾಪಸಾಗುವ ಸುಳಿವು ನೀಡಿದ್ದಾರೆ. ಟಿ20 ವಿಶ್ವಕಪ್‌ನ (T20 World Cup) ನಮೀಬಿಯಾ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಅವರು, ‘ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್‌ನಲ್ಲಿ ನಾನು ವೀಕ್ಷಕ ವಿವರಣೆಗಾರನಾಗಿ ಕಾರ‍್ಯನಿರ್ವಹಿಸಬಹುದು. ಕಾಮೆಂಟ್ರಿ ಖುಷಿ ನೀಡುತ್ತದೆ’ ಎಂದರು. 2022ರ ಜುಲೈನಲ್ಲಿ ಭಾರತ-ಇಂಗ್ಲೆಂಡ್‌ ಟೆಸ್ಟ್‌ ನಡೆಯಲಿದೆ.

ನಿರ್ಗಮಿತ ಕೋಚ್‌ಗಳಿಗೆ ಕೊಹ್ಲಿ ಭಾವನಾತ್ಮಕ ಸಂದೇಶ

ನವದೆಹಲಿ: ಕೋಚಿಂಗ್‌ ಅವಧಿ ಮುಕ್ತಾಯಗೊಂಡು ಭಾರತ ತಂಡದಿಂದ ನಿರ್ಗಮಿಸಿದ ರವಿಶಾಸ್ತ್ರಿ ಹಾಗೂ ಇತರೆ ಕೋಚ್‌ಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ (Virat Kohli) ಭಾವನಾತ್ಮಕ ಸಂದೇಶದೊಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

Team India ಮುಖ್ಯ ಕೋಚ್ ರವಿಶಾಸ್ತ್ರಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಅಪ್ಪುಗೆಯ ವಿದಾಯ..!

ಈ ಬಗ್ಗೆ ಟ್ವೀಟರ್‌ನಲ್ಲಿ ಬರೆದಿರುವ ಕೊಹ್ಲಿ, ‘ಒಂದು ತಂಡವಾಗಿ ನಿಮ್ಮ ಜೊತೆಗಿನ ನೆನಪುಗಳು ಹಾಗೂ ಅದ್ಭುತ ಪ್ರಯಾಣಕ್ಕಾಗಿ ನಿಮಗೆ ಧನ್ಯವಾದಗಳು. ತಂಡಕ್ಕೆ ನೀವು ನೀಡಿದ ಕೊಡುಗೆ ದೊಡ್ಡದು ಹಾಗೂ ಅದು ಭಾರತೀಯ ಕ್ರಿಕೆಟ್‌ನಲ್ಲಿ ಸದಾ ಕಾಲ ನೆನೆಪಿನಲ್ಲಿ ಉಳಿಯಲಿದೆ. ನಿಮ್ಮ ಜೀವನ ಉತ್ತಮವಾಗಿ ಮುಂದುವರಿಯಲಿ’ ಎಂದು ಶುಭ ಹಾರೈಸಿದ್ದಾರೆ. ಶಾಸ್ತ್ರಿ ಜೊತೆ ಬೌಲಿಂಗ್‌ ಕೋಚ್‌ ಆಗಿದ್ದ ಭರತ್‌ ಅರುಣ್‌, ಫೀಲ್ಡಿಂಗ್‌ ಕೋಚ್‌ ಆಗಿದ್ದ ಆರ್‌.ಶ್ರೀಧರ್‌ ಅವಧಿಯೂ ಮುಕ್ತಾಯಗೊಂಡಿದೆ.

Follow Us:
Download App:
  • android
  • ios