ಕರಾಚಿ(ಅ.08): ಕ್ರಿಕೆಟ್ ಜಂಟ್ಲಮೆನ್ ಗೇಮ್ ಜೊತೆಗೆ ಅಷ್ಟೇ ಡೇಂಜರಸ್ ಗೇಮ್ ಕೂಡ ಹೌದು. ಎಚ್ಚರ ತಪ್ಪಿದರೆ ಪ್ರಾಣಕ್ಕೆ ಸಂಚಕಾರ. ಬ್ಯಾಟ್ಸ್‌ಮನ್ ಹೊಡೆತ, ಬೌಲರ್ ಎಸೆತ ಎರಡೂ ಕೂಡ ಮಾರಕ. ಕ್ರಿಕೆಟ್‌ ಮೈದಾನದಲ್ಲಿ ಬಾಲ್ ಬಡಿದು ಪ್ರಾಣ ಬಿಟ್ಟ ಹಲವು ಉದಾಹರಣೆಗಳಿವೆ. ಇದೀಗ ಮೈದಾನದಲ್ಲೇ ಅಂಪೈರ್ ಕುಸಿದು ಬಿದ್ದು ಪ್ರಾಣ ಬಿಟ್ಟ ಘಟನೆ ನಡೆದಿದೆ. 

ಇದನ್ನೂ ಓದಿ: 8 ಕೆಟ್ಟ ತೀರ್ಪು ಕೊಟ್ಟ ಅಂಪೈರ್‌ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!

ಪಾಕಿಸ್ತಾನದ ಕರಾಚಿಯಲ್ಲಿ ನಡೆಯುತ್ತಿದ್ದ ಕ್ಲಬ್ ಲೆವೆಲ್ ಪಂದ್ಯದಲ್ಲಿ ನಸೀಮ್ ಶೇಕ್ ಅಂಪೈರಿಂಗ್ ಮಾಡುತ್ತಿದ್ದರು. ಪಂದ್ಯದ ನಡುವೆ ನಸೀಮ್ ಶೇಕ್ ಕುಸಿದು ಬಿದ್ದರು. ಹೃದಯಾಘಾತವಾದ ಕಾರಣ ಮೈದಾನದಲ್ಲೇ ಅಂಪೈರ್ ಪ್ರಾಣ ಪಕ್ಷಿ ಹಾರಿಹೋಗಿತ್ತು. ಕುಸಿದ ಬಿದ್ದ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಕ್ಕೂ ಮುನ್ನವೇ ಅಂಪೈರ್ ಸಾವನ್ನಪ್ಪಿದ್ದರು. ನಸೀಮ್ ಸಾವಿಗೆ ಪಾಕಿಸ್ತಾನ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ. 

ಇದನ್ನೂ ಓದಿ: RCB ಮೇಲಿನ ಸಿಟ್ಟಿಗೆ ಬಾಗಿಲು ಮುರಿದ ಅಂಪೈರ್- ನಿಗೆಲ್‌ಗೆ ಬಿತ್ತು ಬರೆ!

2014ರಲ್ಲಿ ಬ್ಯಾಟ್ಸ್‌ಮನ್ ಹೊಡೆತಕ್ಕೆ ಅಂಪೈರ್ ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನು 2015ರಲ್ಲಿ ಟೀಂ ಇಂಡಿಯಾ ವೇಗಿ ಬರೀಂದ್ರ ಸ್ರಾನ್ ಇನ್ನೂ ಟೀಂ ಇಂಡಿಯಾಗೆ ಆಯ್ಕೆಯಾಗಿರಲಿಲ್ಲ. ತಮಿಳುನಾಡು ವಿರುದ್ದದ ರಣಜಿ ಟ್ರೋಫಿ ಪಂದ್ಯದಲ್ಲಿ ಸ್ರಾನ್ ಸಿಡಿಸಿದ ಹೊಡೆತ ಅಂಪೈರ್ ತಾಗಿತ್ತು. ಆದರೆ ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. 

ಅಕ್ಟೋಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: