* ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ* ಪಾಕ್ ತಂಡವನ್ನು ಮುನ್ನಡೆಸಲಿರುವ ಬಾಬರ್ ಅಜಂ* ಪಾಕ್ ಮೊದಲ ಪಂದ್ಯದಲ್ಲೇ ಭಾರತವನ್ನು ಎದುರಿಸಲಿದೆ
ಕರಾಚಿ(ಸೆ.07): ಟಿ20 ವಿಶ್ವಕಪ್‌ಗೆ 15 ಆಟಗಾರರ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಟಗಾರರಾದ ಫಖರ್ ಜಮಾನ್ ಹಾಗೂ ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಬಾಬರ್ ಅಜಂ ತಂಡವನ್ನು ಮುನ್ನಡೆಸಲಿದ್ದಾರೆ. ಆಸಿಫ್ ಅಲಿ ಹಾಗೂ ಖುಶ್‌ದಿಲ್ ಶಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಶ್ವಕಪ್‌ಗೂ ಮುನ್ನ ಇದೇ ತಂಡ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಲಾಹೋರ್‌ನಲ್ಲಿ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 03ರವರೆಗೆ ಪಾಕಿಸ್ತಾನ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ದ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಇನ್ನು ರಾವಲ್ಪಿಂಡಿಯಲ್ಲಿ ಇಂಗ್ಲೆಂಡ್ ವಿರುದ್ದ 2 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.
RT-PCR ಟೆಸ್ಟ್‌ನಲ್ಲೂ ರವಿಶಾಸ್ತ್ರಿಗೆ ಕೋವಿಡ್ ಪಾಸಿಟಿವ್, ಮ್ಯಾಂಚೆಸ್ಟರ್ ಟೆಸ್ಟ್‌ಗೆ ಅಲಭ್ಯ..!
ಪಾಕಿಸ್ತಾನ ಅಕ್ಟೋಬರ್ 24ರಂದು ಭಾರತ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ನ್ಯೂಜಿಲೆಂಡ್ ಹಾಗೂ ಆಫ್ಘಾನಿಸ್ತಾನ ತಂಡದ ವಿರುದ್ದ ಸೆಣಸಾಡಲಿದೆ. ಫಖರ್ ಜಮಾನ್, ಶಹನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್‌ರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.
ತಂಡ: ಬಾಬರ್ ಅಜಂ, ಶಾದಬ್ ಖಾನ್(ಉಪನಾಯಕ), ಆಸಿಫ್ ಅಲಿ, ಅಝಂ ಖಾನ್, ಹಾರಿಸ್ ರೌಫ್, ಹಸನ್ ಅಲಿ, ಇಮಾದ್ ವಾಸಿಂ, ಖುಶ್‌ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಅಫ್ರಿದಿ, ಸೊಹೈಬ್ ಮಖ್ಸೂದ್.
