ನಾನು ಕೊಕೇನ್ ಮಾದಕ ದ್ರವ್ಯ ವ್ಯಸನಿಯಾಗಿದ್ದೆ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ವಾಸೀಂ ಅಕ್ರಂ

ಡ್ರಗ್ಸ್ ವಿಚಾರದಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ವಾಸೀಂ ಅಕ್ರಂ
ತಾವೂ ಮಾದಕ ದ್ರವ್ಯ ವ್ಯಸನಿಯಾಗಿದ್ದೆ ಎನ್ನುವುದನ್ನು ಒಪ್ಪಿಕೊಂಡ ಪಾಕ್ ಮಾಜಿ ವೇಗಿ
ತಮ್ಮ ಪತ್ನಿ ನಿಧನದ ಬಳಿಕ ಕೊಕೇನ್ ಮಾದಕ ದ್ರವ್ಯ ಸೇವಿಸುವುದನ್ನು ತ್ಯಜಿಸಿದ ಅಕ್ರಂ

Pakistan Cricket Legend Wasim Akram Reveals He Was Addicted To Cocaine kvn

ಮೆಲ್ಬರ್ನ್‌(ಅ.30): ಪಾಕಿಸ್ತಾನ ಕ್ರಿಕೆಟ್ ದಂತಕಥೆ ವಾಸೀಂ ಅಕ್ರಂ ತಾವು ಕೊಕೇನ್ ಮಾದಕ ದ್ರವ್ಯ ವ್ಯಸನಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ. 1992ರ ಏಕದಿನ ವಿಶ್ವಕಪ್‌ ವಿಜೇತ ತಂಡದ ವಾಸೀಂ ಅಕ್ರಂ, ದ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ ಆತ್ಮಕಥೆಯಲ್ಲಿ ಈ ಘಟನೆಗಳನ್ನು ದಾಖಲಿಸಿರುವುದಾಗಿ ತಿಳಿಸಿದ್ದಾರೆ. 

1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಚಾಂಪಿಯನ್ ಆಗುವಲ್ಲಿ ವಾಸೀಂ ಅಕ್ರಂ ಮಹತ್ತರ ಪಾತ್ರವಹಿಸಿದ್ದರು. ಇನ್ನು 1999ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಇನ್ನು ವಾಸೀಂ ಅಕ್ರಂ, ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳೆಂದು ಗುರುತಿಸಿಕೊಂಡಿದ್ದಾರೆ. 

56 ವರ್ಷದ ಪಾಕಿಸ್ತಾನ ಮಾಜಿ ನಾಯಕ ವಾಸೀಂ ಅಕ್ರಂ ತಾವು ಕ್ರಿಕೆಟ್‌ ನಿವೃತ್ತಿಯ ಬಳಿಕ ಕೊಕೇನ್ ಸೇವಿಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ವಾಸೀಂ ಅಕ್ರಂ ಅವರ ಮೊದಲ ಪತ್ನಿ ಹುಮಾ 2009ರಲ್ಲಿ ಅಪರೂಪದ ಶಿಲೀಂದ್ರ ಸೋಂಕಿನಿಂದ ಕೊನೆಯುಸಿರೆಳೆದಿದ್ದರು.  

T20 World Cup: ವಿರಾಟ್‌ ಕೊಹ್ಲಿಗೆ ವಿಶ್ವದಾಖಲೆ ನಿರ್ಮಿಸಲು ಬೇಕಿದೆ ಕೇವಲ 28 ರನ್‌..!

ದಕ್ಷಿಣ ಏಷ್ಯಾದ ಬಹುತೇಕ ಜನರು ಕೆಲವೊಂದು ಪ್ರಲೋಭನೆಗೆ ಒಳಗಾಗಿರುತ್ತಾರೆ. ನೀವು ಪ್ರತಿ ರಾತ್ರಿ 10 ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಹುಮಾ ಕೊನೆಯುಸಿರೆಳೆದ ಬಳಿಕ ಆಕೆಯ ನಿಸ್ವಾರ್ಥ ಗುಣ ನನ್ನನ್ನು ಮಾದಕ ದ್ರವ್ಯದ ಸಮಸ್ಯೆಯಿಂದ ಹೊರಬರುವಂತೆ ಮಾಡಿತು. ಇದಾದ ಬಳಿಕ ನಾನು ಎಂದೆಂದಿಗೂ ಆ ಸಹವಾಸಕ್ಕೆ ಹೋಗಲಿಲ್ಲ ಎಂದು ವಾಸೀಂ ಅಕ್ರಂ ಹೇಳಿದ್ದಾರೆ.

ತಾವು ಮೊದಲಿಗೆ ತಮ್ಮ ಪತ್ನಿ ಹುಮಾ ಅವರಿಗೆ ಗೊತ್ತಿಲ್ಲದಂತೆಯೇ ಕೊಕೇನ್ ಸೇವಿಸುತ್ತಿದ್ದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ತಾವು ಮೊದಲ ಬಾರಿಗೆ ನಾವು ಇದನ್ನು ಸೇವಿಸಿದ್ದೆ. ಆಮೇಲೆ ನಿಧಾನವಾಗಿ ಸೇವಿಸಲು ಆರಂಭಿಸಿದೆ. ಆ ನಂತರ ನಾನು ಕೊಕೇನ್ ವ್ಯಸನಿಯಾದೆ ಎಂದು ಹೇಳಿದ್ದಾರೆ. 

ನನಗೆ ಗೊತ್ತು ಆಗೆಲ್ಲಾ ಹುಮಾ ಒಬ್ಬಳೇ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದಳು. ಅವಳು ನಾವು ಅವರ ಸಂಬಂಧಿಕರಿರುವ ಕರಾಚಿಗೆ ವಲಸೆ ಹೋಗಲು ತಮ್ಮ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಳು. ಆದರೆ ನಾನು ಅದಕ್ಕೆ ಒಪ್ಪಿರಲಿಲ್ಲ. ಯಾಕೆಂದರೆ ನಾನು ಕರಾಚಿಗೆ ತೆರಳಿದ್ದರೆ, ಕೊಕೇನ್ ಪಾರ್ಟಿ ಮಾಡಲು ಸಾದ್ಯವಾಗುತ್ತಿರಲಿಲ್ಲ ಎಂದು ನಾನು ಕರಾಚಿಗೆ ತೆರಳಲು ಹಿಂದೇಟು ಹಾಕಿದೆ ಎನ್ನುವ ವಿಚಾರವನ್ನು ಅಕ್ರಂ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಮಾಜಿ ವೇಗಿ ವಾಸೀಂ ಅಕ್ರಂ, ಪಾಕಿಸ್ತಾನ ತಂಡದ ಪರ 104 ಟೆಸ್ಟ್‌ ಪಂದ್ಯಗಳನ್ನಾಡಿ 414 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪಾಕಿಸ್ತಾನ ಪರ ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇನ್ನು ಪಾಕಿಸ್ತಾನ ಪರ 356 ಏಕದಿನ ಪಂದ್ಯಗಳನ್ನಾಡಿ 502 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

Latest Videos
Follow Us:
Download App:
  • android
  • ios