Asianet Suvarna News Asianet Suvarna News

Ind vs SA Test Series: ಸ್ಟೇಡಿಯಂಗೆ ಪ್ರೇಕ್ಷಕರಿಗಿಲ್ಲ ಪ್ರವೇಶ..!

* ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ

* ಡಿಸೆಂಬರ್ 26ರಿಂದ ಆರಂಭವಾಗಲಿದೆ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿ

* ಒಮಿಕ್ರೋನ್‌ ಭೀತಿ ಹಿನ್ನೆಲೆಯಲ್ಲಿ ಯಾವುದೇ ಟಿಕೆಟ್ ಮಾರಾಟ ಮಾಡದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ

Omicron variant Threat India vs South Africa Test Series to be Played Without Spectators kvn
Author
Johannesburg, First Published Dec 21, 2021, 9:28 AM IST | Last Updated Dec 21, 2021, 9:29 AM IST

ಜೋಹಾನ್ಸ್‌ಬರ್ಗ್(ಡಿ.21)‌: ಇದೇ ಡಿಸೆಂಬರ್ 26ರಂದು ಆರಂಭವಾಗಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ 3 ಪಂದ್ಯಗಳ ಟೆಸ್ಟ್‌ ಸರಣಿಯು ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ (Cricket South Africa) ಸೋಮವಾರ ಪ್ರಕಟಣೆ ಮೂಲಕ ಖಚಿತಪಡಿಸಿದೆ. ಕೋವಿಡ್‌ ರೂಪಾಂತರಿ ಒಮಿಕ್ರೋನ್‌ ಭೀತಿ (Omicron variant) ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಪಂದ್ಯದ ಯಾವುದೇ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿಲ್ಲ ಎಂದು ತಿಳಿಸಿದೆ. ಅಂದಾಜು 2000 ಸರ್ಕಾರಿ ಅಧಿಕಾರಿಗಳು, ಕೆಲ ಪ್ರಮುಖ ರಾಜಕೀಯ ನಾಯಕರಿಗಷ್ಟೇ ಕ್ರೀಡಾಂಗಣಕ್ಕೆ ಪ್ರವೇಶ ಸಿಗಲಿದೆ ಎನ್ನಲಾಗಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ದೇಸಿ ಏಕದಿನ ಟೂರ್ನಿಯನ್ನು ರದ್ದುಗೊಳಿಸಿದ್ದು, ಆತಂಕ ಹೆಚ್ಚುವಂತೆ ಮಾಡಿದೆ.

ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ ಮೂವರ ಪೈಪೋಟಿ?

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಆರಂಭಕ್ಕೆ ಇನ್ನು 5 ದಿನ ಬಾಕಿ ಇದ್ದು, ಭಾರತ ತಂಡದಲ್ಲಿ ಆಯ್ಕೆ ಗೊಂದಲ ಶುರುವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆಡುವ ಹನ್ನೊಂದರ ಬಳಗದಲ್ಲಿ 10 ಆಟಗಾರರ ಸ್ಥಾನ ಖಚಿತವಾಗಿದ್ದು, ಇನ್ನುಳಿದ ಒಂದು ಸ್ಥಾನಕ್ಕಾಗಿ ಮೂರು ಆಟಗಾರರ ನಡುವೆ ಸ್ಪರ್ಧೆ ಇದೆ ಎಂದು ತಿಳಿದುಬಂದಿದೆ.

ನಾಯಕ ವಿರಾಟ್‌ ಕೊಹ್ಲಿ (Virat Kohli) ಐವರು ಬೌಲರ್‌ಗಳೊಂದಿಗೆ ಆಡಲು ಒತ್ತು ನೀಡುವ ಕಾರಣ, ರವೀಂದ್ರ ಜಡೇಜಾ (Ravindra Jadeja) ಅನುಪಸ್ಥಿತಿಯಲ್ಲಿ ಬೌಲಿಂಗ್‌ ಆಲ್ರೌಂಡರ್‌ ಸ್ಥಾನದಲ್ಲಿ ಶಾರ್ದೂಲ್‌ ಠಾಕೂರ್‌ರನ್ನು (Shardul Thakur) ಆಡಿಸಲು ತಂಡ ಚಿಂತನೆ ನಡೆಸುತ್ತಿರಬಹುದು ಎನ್ನಲಾಗಿದೆ. ಆದರೆ ವಿದೇಶಿ ಪ್ರವಾಸಗಳಲ್ಲಿ ತಂಡ ದಿಢೀರ್‌ ಕುಸಿತ ಕಂಡಿರುವ ಉದಾಹರಣೆಗಳು ಇರುವುದರಿಂದ ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಆಡಿಸುವುದು ಸೂಕ್ತ ಎನ್ನುವ ಅಭಿಪ್ರಾಯ ತಂಡದೊಳಗೆ ವ್ಯಕ್ತವಾಗಿದೆ ಎನ್ನಲಾಗಿದೆ. ಹೀಗಾಗಿ ಆ ಸ್ಥಾನವನ್ನು ಹನುಮ ವಿಹಾರಿಗೆ (Hanuma Vihari) ನೀಡಬೇಕೋ ಇಲ್ಲವೇ ಲಯದ ಸಮಸ್ಯೆ ಎದುರಿಸುತ್ತಿದ್ದರೂ ಅನುಭವವನ್ನು ಪರಿಗಣಿಸಿ ಅಜಿಂಕ್ಯ ರಹಾನೆಯನ್ನು (Ajinkya Rahane) ಆಡಿಸಬೇಕೋ ಎನ್ನುವ ಗೊಂದಲವೂ ತಂಡದಲ್ಲಿದೆ ಎನ್ನಲಾಗುತ್ತಿದೆ.

India Tour of South Africa: ಕನ್ನಡಿಗ ಕೆ ಎಲ್‌ ರಾಹುಲ್‌ಗೆ ಟೀಂ ಇಂಡಿಯಾ ಟೆಸ್ಟ್ ಉಪನಾಯಕ ಪಟ್ಟ..!

ಮೊದಲ ಟೆಸ್ಟ್‌ ನಡೆಯುವ ಸೆಂಚೂರಿಯನ್‌ ಸಮುದ್ರ ಮಟ್ಟಕ್ಕಿಂತ 1300 ಅಡಿ ಎತ್ತರದಲ್ಲಿದ್ದು, ಬೌಲರ್‌ಗಳು ಬೇಗ ದಣಿಯುವ ಸಾಧ್ಯತೆ ಹೆಚ್ಚಿರಲಿದೆ. ಹೀಗಾಗಿ ತಂಡ ಐವರು ಬೌಲರ್‌ಗಳನ್ನು ಆಡಿಸಲು ಒತ್ತು ನೀಡಬಹುದು. ಈ ಲೆಕ್ಕಾಚಾರದ ಪ್ರಕಾರ ಶಾರ್ದೂಲ್‌ ಠಾಕೂರ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇನ್ನು ಕಿವೀಸ್‌ ಟೆಸ್ಟ್ ಸರಣಿಯಲ್ಲಿ ಮಿಂಚಿನ ಪ್ರದರ್ಶನ ತೋರಿರುವ ಶ್ರೇಯಸ್ ಅಯ್ಯರ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ

7 ವರ್ಷಗಳ ಬಳಿಕ ಕಾಮೆಂಟ್ರಿಗೆ ರವಿಶಾಸ್ತ್ರಿ!

ನವದೆಹಲಿ: ಟೀಂ ಇಂಡಿಯಾದ ಮಾಜಿ ಪ್ರಧಾನ ಕೋಚ್‌ ರವಿಶಾಸ್ತ್ರಿ (Ravi Shastri) 7 ವರ್ಷಗಳ ಬಳಿಕ ಮತ್ತೊಮ್ಮೆ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಡಿ.26ರಿಂದ ಆರಂಭವಾಗಲಿರುವ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯಲ್ಲಿ ಅವರು ಕಾಮೆಂಟ್ರಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 59 ವರ್ಷದ ಶಾಸ್ತ್ರಿ ಅವರ ಕೋಚಿಂಗ್‌ ಅವಧಿ ಟಿ20 ವಿಶ್ವಕಪ್‌ (ICC T20 World Cup) ಬಳಿಕ ಮುಕ್ತಾಯಗೊಂಡಿತ್ತು. ಬಳಿಕ ಅವರು ಮತ್ತೊಮ್ಮೆ ವೀಕ್ಷಕ ವಿವರಣೆಗಾರರಾಗಿ ಕಾರ‍್ಯನಿರ್ವಹಿಸುವ ಬಗ್ಗೆ ಸುಳಿವು ನೀಡಿದ್ದರು.

Latest Videos
Follow Us:
Download App:
  • android
  • ios