* ಯುಎಇ ಚರಣದ ಐಪಿಎಲ್‌ಗೂ ಪಂತ್‌ ಡೆಲ್ಲಿ ನಾಯಕ* ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯಿಂದ ಅಧಿಕೃತ ಘೋಷಣೆ* ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್‌

ದುಬೈ(ಸೆ.18): ಐಪಿಎಲ್‌ ಭಾಗ-2ರಲ್ಲೂ ರಿಷಭ್‌ ಪಂತ್‌ ಅವರೇ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಧಿಕೃತವಾಗಿ ಪ್ರಕಟಿಸಿದೆ.

2021ರ ಐಪಿಎಲ್‌ನ ಮೊದಲ ಭಾಗದಲ್ಲಿ ಕಾಯಂ ನಾಯಕ ಶ್ರೇಯಸ್‌ ಅಯ್ಯರ್‌ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ, ರಿಷಭ್‌ರನನ್ನು ನಾಯಕರನ್ನಾಗಿ ನೇಮಿಸಿತ್ತು. ಇದೀಗ ಗಾಯದಿಂದ ಶ್ರೇಯಸ್‌ ಚೇತರಿಸಿಕೊಂಡಿದ್ದ ತಂಡವನ್ನು ಕೂಡಿಕೊಂಡಿದ್ದಾರೆ. ಈ ವೇಳೆ ಮತ್ತೆ ಶ್ರೇಯಸ್‌ರನ್ನೇ ನಾಯಕರನ್ನಾಗಿ ಮುಂದುವರೆಸುವುದೇ ಎಂಬ ಕುತೂಹಲ ಮೂಡಿತ್ತು.

Scroll to load tweet…

IPL 2021 ಆರ್‌ಸಿಬಿ ಮಾಡಿದ ಅತಿದೊಡ್ಡ ಎಡವಟ್ಟು ಗುರುತಿಸಿದ ಬ್ರಾಡ್‌ ಹಾಗ್..!

ಪಂತ್ ನಾಯಕತ್ವದ ಕುರಿತಂತೆ ಪ್ರತಿಕ್ರಿಯಿಸಿರುವ ಫ್ರಾಂಚೈಸಿ, ಐಪಿಎಲ್‌ 2021 ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 8 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 2 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸೆಪ್ಟೆಂಬರ್ 22ರಂದು ಪಂತ್ ಪಡೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Scroll to load tweet…

2020ರಲ್ಲಿ ಯುಎಇನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಫೈನಲ್‌ ಪ್ರವೇಶಿಸಿತ್ತು. ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಮುಗ್ಗರಿಸುವ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು.