Asianet Suvarna News Asianet Suvarna News

Ben Stokes No-Ball Drama: ಸಾಕ್ಷಿ ಸಮೇತ ವಿವರ ಬಿಚ್ಚಿಟ್ಟ ಚಾನೆಲ್ 7!

ಆ್ಯಷಸ್‌ ಟೆಸ್ಟ್ ನ 2ನೇ ದಿನದಾಟದಲ್ಲಿ ಬೆನ್ ಸ್ಟೋಕ್ಸ್ ಎಸೆದಿದ್ದು 14 ನೋಬಾಲ್
ಅಂಪೈರ್ ನೋಬಾಲ್‌ ಘೋಷಣೆ ಮಾಡಿದ್ದು 2 ಎಸೆತಗಳಿಗೆ ಮಾತ್ರ
ತಂತ್ರಜ್ಞಾನದ ಸಮಸ್ಯೆಯ ಬಗ್ಗೆ ಮಾಜಿ ಕ್ರಿಕೆಟಿಗರ ಟೀಕೆ

No Ball Controversy In Brisbane Test England Allrounder Ben Stokes Oversteps 14 Times san
Author
Brisbane QLD, First Published Dec 9, 2021, 6:40 PM IST

ಬ್ರಿಸ್ಬೇನ್ (ಡಿ.9): ಇಂಗ್ಲೆಂಡ್ ತಂಡ ಪ್ರಖ್ಯಾತ ಆಲ್ರೌಂಡರ್ ಬೆನ್ ಸ್ಟೋಕ್ಸ್  (Ben Stokes) ಮಾರ್ಚ್ ಬಳಿಕ ಆ್ಯಷಸ್‌ ಸರಣಿಯ (Ashes ) ಮೊದಲ ಟೆಸ್ಟ್ ನಲ್ಲಿ ಬೌಲಿಂಗ್ ಗೆ ಇಳಿದರು. ಈ ಸಮಯದಲ್ಲಿ ಅವರು ಸತತ ನಾಲ್ಕು ಎಸೆತಗಳನ್ನು ನೋಬಾಲ್ (no-ball) ಹಾಕಿದ್ದರು. ಇನ್ನೂ ಅಚ್ಚರಿಯ ವಿಚಾರವೆಂದರೆ, ಇಡೀ ದಿನದಲ್ಲಿ ಅವರು 14 ಬಾರಿ ನೋಬಾಲ್ ಮಾಡಿದ್ದರೂ ಕೂಡ ಅಂಪೈರ್ ನೋಬಾಲ್ ಎಂದು ಹೇಳಿದ್ದು ಕೇವಲ 2 ಬಾರಿ! ಇದರ ಬೆನ್ನಲ್ಲಿಯೇ ಅಂಪೈರ್ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾಪ್ರಹಾರ ಆರಂಭವಾಗಿದೆ. ಇಂಥ ಮಹತ್ವದ ಸರಣಿಯಲ್ಲಿ ಬೌಲರ್ ಸಾಲು ಸಾಲು ನೋಬಾಲ್ ಗಳನ್ನು ಎಸೆದಿದ್ದರೂ ಅಂಪೈರ್ ಗಳು ಅದನ್ನು ಗಮನಿಸದೇ ಇರುವುದು ಏಕೆ ಎನ್ನುವ ಪ್ರಶ್ನೆ ಆರಂಭವಾಗಿದೆ.

ಬೆನ್ ಸ್ಟೋಕ್ಸ್ ಎಸೆದ ನೋಬಾಲ್ ಕಾರಣದಿಂದಾಗಿಯೇ ಇಂಗ್ಲೆಂಡ್ ಗೆ ಡೇವಿಡ್ ವಾರ್ನರ್ (David Warner) ಅವರ ಅಮೂಲ್ಯ ವಿಕೆಟ್ ತಪ್ಪಿಹೋಯಿತು. 17 ರನ್ ಬಾರಿಸಿದ್ದಾಗ ವಾರ್ನರ್ ಔಟ್ ಆಗಿದ್ದರೂ, ಅಂಪೈರ್ ಎಸೆತದ ಪರಿಶೀಲನೆ ಮಾಡಿದ್ದಾಗ ಅದು ನೋಬಾಲ್ ಆಗಿತ್ತು.

ವಾರ್ನರ್ ಜೀವದಾನ ಪಡೆದ ಬೆನ್ನಲ್ಲಿಯೇ ಆ್ಯಷಸ್‌ ಸರಣಿಯ ನೇರಪ್ರಸಾರ ವಾಹಿನಿಯಾಗಿರುವ ಚಾನೆಲ್ 7, ವಾರ್ನರ್ ಔಟ್ ಆದ ಎಸೆತಕ್ಕೂ ಮುನ್ನ ಸ್ಟೋಕ್ಸ್ ಎಸೆದ ಮೂರೂ ಎಸೆತಗಳು ನೋಬಾಲ್ ಆಗಿದ್ದವು ಎನ್ನುವುದನ್ನು ಸಾಕ್ಷಿ ಸಮೇತ ಪ್ರಸಾರ ಮಾಡಿತ್ತು. ಅವರು ಸತತ ನಾಲ್ಕು ಎಸೆತಗಳನ್ನು ನೋಬಾಲ್ ಎಸೆದಿದ್ದರೂ ಅಂಪೈರ್ ಕೇವಲ 1 ಎಸೆತವನ್ನು ನೋಬಾಲ್ ಎಂದು ಹೇಳಿದ್ದರು.
 


ಅದಲ್ಲದೆ, ಬೆನ್ ಸ್ಟೋಕ್ಸ್ ಮಾಡಿದ 9 ಓವರ್ ಗಳ ಪೈಕಿ 2.2 ಓವರ್ ಗಳು ನೋಬಾಲ್ ಆಗಿದ್ದವು ಇದರಲ್ಲಿ ಅಂಪೈರ್ ನೋಬಾಲ್ ಎಂದು ಹೇಳಿದ್ದು ಕೇವಲ 2 ರಲ್ಲಿ ಮಾತ್ರ ಎನ್ನುವ ಸತ್ಯವನ್ನು ಬಹಿರಂಗಪಡಿಸಿದೆ. ಈ ವರ್ಷದ ಆರಂಭದಲ್ಲಿ ಹೊಸ ನಿಯಮಗಳನ್ನು ಪ್ರಕಟಿಸಿದ್ದ ಐಸಿಸಿ (ICC), ನೋಬಾಲ್ ಗಳನ್ನು ಗುರುತಿಸಿ ಅದರ ತೀರ್ಪು ನೀಡುವ ಅಧಿಕಾರವನ್ನು ಮೂರನೇ ಅಂಪೈರ್ ಗೆ ನೀಡಿತ್ತು. ಆದರೆ, ಬೌಲರ್ ಗಳ ಫ್ರಂಟ್ ಫೂಟ್ ನೋಬಾಲ್ ಎಸೆತಗಳನ್ನು ಪರಿಶೀಲನೆ ಮಾಡುವ ತಂತ್ರಜ್ಞಾನ ಬ್ರಿಸ್ಬೇನ್ ನ ಗಾಬಾ ಮೈದಾನದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಈ ಪಂದ್ಯದ ಫ್ರಂಟ್ ಫೂಟ್ (front foot) ನೋಬಾಲ್ ತೀರ್ಪುಗಳನ್ನು ಮೈದಾನದ ಅಂಪೈರ್ ಗಳೇ ನೋಡಬೇಕಾಗುತ್ತದೆ.

Ashes 2021: ಟೆಸ್ಟ್ ಪಂದ್ಯದಲ್ಲಿ ಏಕದಿನ ಶೈಲಿಯ ಬ್ಯಾಟಿಂಗ್, ಕೇವಲ 85 ಎಸೆತಗಳಲ್ಲಿ ಹೆಡ್ ಹಂಡ್ರೆಡ್!
ಆಸ್ಟ್ರೇಲಿಯಾದ (Australia) ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಪಂದ್ಯದ ವಿಶ್ಲೇಷಣೆಯ ಸಮಯದಲ್ಲಿಯೇ ಕೆಟ್ಟ ಅಂಪೈರಿಂಗ್ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಚಾನೆಲ್ 7ನಲ್ಲಿ ಮಾತನಾಡಿರುವ ಮಾಜಿ ವೇಗಿ ಟ್ರೆಂಟ್ ಕೋಪಲ್ಯಾಂಡ್(Trent Copeland)  ಅಂಪೈರ್ ಗಳು ಮೈದಾನದಲ್ಲಿ ಏನಾಗುತ್ತಿದೆ ಎಂದು ನೋಡುವಲ್ಲಿ ವಿಫಲರಾಗಿದ್ದಾರೆ ಎಂದಾದಲ್ಲಿ ಅದು ಕೆಟ್ಟ ಅಂಪೈರಿಂಗ್. ವಿಕೆಟ್ ಉರುಳಿದಾಗ ನೋಬಾಲ್ ಪರಿಶೀಲನೆ ಮಾಡದೇ ಇದ್ದ ಪಕ್ಷದಲ್ಲಿ ಸ್ಟೋಕ್ಸ್ ಹಾಕಿರುವ ನೋಬಾಲ್ ಗಳು ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಇದರ ಒಟ್ಟಾರೆ ಅರ್ಥ ಏನೆಂದರೆ ತಂತ್ರಜ್ಞಾನದ ಉಪಯೋಗ ಸರಿಯಾಗಿ ಆಗುತ್ತಿಲ್ಲ ಎಂದು ಹೇಳಿದ್ದಾರೆ.

Ashes 2021: ಅನಿಲ್ ಕುಂಬ್ಳೆ, ಕರ್ಟ್ನಿ ವಾಲ್ಶ್ ಜೊತೆ ಅನನ್ಯ ದಾಖಲೆಯ ಪಟ್ಟಿಗೆ ಸೇರಿದ ಪ್ಯಾಟ್ ಕಮ್ಮಿನ್ಸ್
2ನೇ ದಿನದಾಟದ ಬಳಿಕ ಮಾತನಾಡಿದ ರಿಕಿ ಪಾಂಟಿಂಗ್, ಅಂಪೈರ್ ಗಳ ಅತ್ಯಂತ ಕೆಟ್ಟ ಕಾರ್ಯನಿರ್ವಹಣೆ ಇದು. ಹಾಗೇನಾದರೂ ಸ್ಟೋಕ್ಸ್ ಗೆ ಮೊದಲ ಎಸೆತದಲ್ಲಿಯೇ ಅವರ ನೋಬಾಲ್ ಗಳನ್ನು ಪರಿಶೀಲನೆ ಮಾಡಿ ತೀರ್ಪು ನೀಡಿದ್ದರೆ, ಇಷ್ಟೆಲ್ಲಾ ನೋಬಾಲ್ ಗಳು ಆಗುತ್ತಲೇ ಇರಲಿಲ್ಲ. ಅವರು ಎಚ್ಚರಿಕೆಯಿಂದ ಆಗ ಬೌಲಿಂಗ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

 

Follow Us:
Download App:
  • android
  • ios