ಮೌಂಟ್‌ ಮಾಂಗ​ನ್ಯುಯಿ(ನ.20): ನ್ಯೂಜಿ​ಲೆಂಡ್‌ ಹಾಗೂ ಇಂಗ್ಲೆಂಡ್‌ ನಡು​ವಿನ ವೈರತ್ವ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದು​ವ​ರಿ​ಯ​ಲಿದೆ. ಗುರು​ವಾರದಿಂದ(ನ.21) ಇಲ್ಲಿ ಮೊದಲ ಟೆಸ್ಟ್‌ ಆರಂಭ​ಗೊ​ಳ್ಳ​ಲಿದೆ. ವಿಶ್ವ​ಕಪ್‌ ಫೈನಲ್‌ ಗೆಲು​ವಿನ ಬಳಿಕ ಇತ್ತೀ​ಚೆಗೆ ನಡೆ​ದಿದ್ದ ಟಿ20 ಸರ​ಣಿಯಲ್ಲಿ ಕಿವೀಸ್‌ ವಿರುದ್ಧ ಇಂಗ್ಲೆಂಡ್‌ 3-2ರ ರೋಚಕ ಗೆಲುವು ಸಾಧಿ​ಸಿತ್ತು. 

ಇದೀಗ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿ​ಯನ್‌ಶಿಪ್‌ನ ವ್ಯಾಪ್ತಿಗೆ ಸೇರುವ 2 ಪಂದ್ಯ​ಗಳ ಸರ​ಣಿ​ಯಲ್ಲಿ ಉಭಯ ತಂಡ​ಗಳು ಸೆಣ​ಸ​ಲಿವೆ. ಐಸಿಸಿ ಟೆಸ್ಟ್‌ ರಾರ‍ಯಂಕಿಂಗ್‌ ಪಟ್ಟಿ​ಯಲ್ಲಿ ನ್ಯೂಜಿ​ಲೆಂಡ್‌ 2ನೇ ಸ್ಥಾನ​ದ​ಲ್ಲಿ​ದ್ದರೆ, ಇಂಗ್ಲೆಂಡ್‌ 3ನೇ ಸ್ಥಾನದಲ್ಲಿದೆ. ವಿಶ್ವ ಚಾಂಪಿ​ಯನ್‌ಶಿಪ್‌ ಅಂಕ​ಪ​ಟ್ಟಿ​ಯಲ್ಲಿ ನ್ಯೂಜಿ​ಲೆಂಡ್‌ 60 ಅಂಕ​ಗ​ಳೊಂದಿಗೆ 2ನೇ ಸ್ಥಾನ​ದ​ಲ್ಲಿ​ದ್ದರೆ, 56 ಅಂಕ​ಗ​ಳೊಂದಿಗೆ ಇಂಗ್ಲೆಂಡ್‌ 5ನೇ ಸ್ಥಾನ​ದ​ಲ್ಲಿದೆ.

ನ್ಯೂಜಿಲೆಂಡ್ ತಂಡ:
ಟಾಮ್ ಲಾಥಮ್, ಜೀತ್ ರಾವಲ್, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಹೆನ್ರಿ ನೋಕೋಲಸ್, ಬಿಜೆ ವಾಲ್ಟಿಂಗ್., ಕೊಲಿನ್ ಡೇ ಗ್ರ್ಯಾಂಡ್‌ಹೊಮ್ಮೆ, ಮಿಚೆಲ್ ಸಾಂಟ್ನರ್, ಟಿಮ್ ಸೌಥಿ, ನೈಲ್ ವ್ಯಾಗ್ನರ್, ಟ್ರೆಂಟ್ ಬೊಲ್ಟ್