Asianet Suvarna News Asianet Suvarna News

ಭಾರತ ಹಾಗೂ ಪಾಕಿಸ್ತಾನ ಪ್ರವಾಸಕ್ಕೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ; 2 ಸರಣಿಗೆ ಇಬ್ಬರು ನಾಯಕರು..!

ಪಾಕಿಸ್ತಾನ ಹಾಗೂ ಭಾರತ ಎದುರಿನ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಕಟ
ಪಾಕಿಸ್ತಾನ ಎದುರು ಎರಡು ಟೆಸ್ಟ್ ಹಾಗೂ 3 ಏಕದಿನ ಪಂದ್ಯವನ್ನಾಡಲಿರುವ ಕಿವೀಸ್
ಭಾರತ ಪ್ರವಾಸದಲ್ಲಿ ಸೀಮಿತ ಓವರ್‌ಗಳ ಪಂದ್ಯವನ್ನಾಡಲಿರುವ ನ್ಯೂಜಿಲೆಂಡ್

New Zealand name ODI squads for Pakistan and India tours Different captains for both Series kvn
Author
First Published Dec 20, 2022, 2:18 PM IST

ವೆಲ್ಲಿಂಗ್ಟನ್(ಡಿ.20): ನೂತನ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಪಾಕಿಸ್ತಾನ ಹಾಗೂ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು, ಏಕದಿನ ಸರಣಿಗೆ ಎರಡು ದೇಶಗಳ ಎದುರು ಎರಡು ನಾಯಕರು ನ್ಯೂಜಿಲೆಂಡ್ ಕ್ರಿಕೆಟ್‌ ತಂಡವನ್ನು ಮುನ್ನಡೆಸಲಿದ್ದಾರೆ. ಪಾಕಿಸ್ತಾನ ಎದುರಿನ ಏಕದಿನ ಸರಣಿಗೆ ಕೇನ್ ವಿಲಿಯಮ್ಸನ್‌, ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಭಾರತ ಎದುರಿನ ಏಕದಿನ ಸರಣಿಗೆ ಟಾಮ್‌ ಲೇಥಮ್ ಕಿವೀಸ್ ತಂಡವನ್ನು ಮುನ್ನಡೆಸಲಿದ್ದು, ಕೇನ್ ವಿಲಿಯಮ್ಸನ್, ಟೀಂ ಇಂಡಿಯಾ ಎದುರಿನ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ.

ಪಾಕಿಸ್ತಾನ ಹಾಗೂ ಭಾರತ ಎದುರಿನ ಏಕದಿನ ಸರಣಿಗೆ ಅನುಭವಿ ಲೆಗ್‌ಸ್ಪಿನ್ನರ್ ಇಶ್ ಸೋಧಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಹೆನ್ರಿ ನಿಕೋಲ್ಸ್‌, ನ್ಯೂಜಿಲೆಂಡ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಇನ್ನು ಈ ಎರಡೂ ಪ್ರವಾಸಕ್ಕೆ ಇದೇ ಮೊದಲ ಬಾರಿಗೆ ಆಲ್ರೌಂಡರ್ ಹೆನ್ರಿ ಶಿಪ್ಲೇ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ.

ಪಾಕಿಸ್ತಾನ ಎದುರಿನ ಸರಣಿ ಮುಗಿಯುತ್ತಿದ್ದಂತೆಯೇ ನ್ಯೂಜಿಲೆಂಡ್ ಹೆಡ್ ಕೋಚ್ ಗ್ಯಾರಿ ಸ್ಟೆಡ್ ಹಾಗೂ ಶೇನ್ ಜುರ್ಗೆನ್‌ಸನ್‌ ತವರಿಗೆ ವಾಪಾಸ್ಸಾಗಲಿದ್ದಾರೆ. ಇನ್ನು ಭಾರತ ಎದುರಿನ ಸರಣಿಗೆ ಕಿವೀಸ್ ಮಾಜಿ ನಾಯಕ ಲಾಕಿ ರಾಂಚಿ, ನ್ಯೂಜಿಲೆಂಡ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. 

Ind vs Ban ಭಾರತ ಎದುರಿನ ಎರಡನೆ ಟೆಸ್ಟ್ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ತಂಡ ಪ್ರಕಟ

ಏಷ್ಯಾದ ಉಪಖಂಡದಲ್ಲಿನ ಈ ಎರಡೂ ಸರಣಿಗಳು, 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನ್ಯೂಜಿಲೆಂಡ್ ತಂಡಕ್ಕೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ನ್ಯೂಜಿಲೆಂಡ್ ತಂಡವು ನೂತನ ವರ್ಷಾರಂಭದಲ್ಲೇ ಪಾಕಿಸ್ತಾನ ಹಾಗೂ ಭಾರತ ಪ್ರವಾಸವನ್ನು ಕೈಗೊಳ್ಳಲಿದೆ.

ನ್ಯೂಜಿಲೆಂಡ್ ತಂಡವು ಮೊದಲಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. 2002ರ ಬಳಿಕ ನ್ಯೂಜಿಲೆಂಡ್ ತಂಡವು ಇದೇ ಮೊದಲ ಬಾರಿಗೆ ಪಾಕಿಸ್ತಾನ ನೆಲದಲ್ಲಿ ಟೆಸ್ಟ್ ಸರಣಿಯನ್ನಾಡಲಿದೆ. ಇನ್ನು ಏಕದಿನ ಸರಣಿಯು ಜನವರಿ 10ರಿಂದ 14ರವರೆಗೆ ನಡೆಯಲಿದೆ. ಪಾಕಿಸ್ತಾನ ಎದುರಿನ ಸರಣಿಯ ಬಳಿಕ ನ್ಯೂಜಿಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಕೇನ್ ವಿಲಿಯಮ್ಸನ್, ವಿಶ್ರಾಂತಿ ಪಡೆಯಲಿದ್ದಾರೆ. 

ಇನ್ನು ಇದಾದ ಬಳಿಕ ನ್ಯೂಜಿಲೆಂಡ್ ತಂಡವು ಭಾರತ ಪ್ರವಾಸ ಮಾಡಲಿದ್ದು, ಭಾರತದಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಏಕದಿನ ಸರಣಿಯು ಜನವರಿ 18ಕ್ಕೆ ಆರಂಭವಾಗಿ ಜನವರಿ 24ಕ್ಕೆ ಮುಗಿಯಲಿದೆ. ಇನ್ನು ಟಿ20 ಸರಣಿಯು ಜನವರಿ 27ಕ್ಕೆ ಆರಂಭವಾಗಿ ಫೆಬ್ರವರಿ 01ಕ್ಕೆ ಮುಗಿಯಲಿದೆ.

ಭಾರತ ಹಾಗೂ ಪಾಕಿಸ್ತಾನ ಪ್ರವಾಸಕ್ಕೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ:

ಕೇನ್ ವಿಲಿಯಮ್ಸನ್(ನಾಯಕ- ಪಾಕಿಸ್ತಾನ ಏಕದಿನ ಸರಣಿಗೆ ಮಾತ್ರ), ಟಾಮ್ ಲೇಥಮ್(ನಾಯಕ-ಭಾರತ ಎದುರಿನ ಏಕದಿನ ಸರಣಿಗೆ), ಫಿನ್ ಅಲೆನ್, , ಮೈಕೆಲ್ ಬ್ರಾಸ್‌ವೆಲ್, ಮಾರ್ಕ್‌ ಚಾಂಪ್ಮನ್(ಭಾರತ ಸರಣಿಗೆ ಮಾತ್ರ), ಡೆವೊನ್ ಕಾನ್‌ವೇ, ಜೇಕಬ್ ಡುಫ್ಫಿ(ಭಾರತ ಸರಣಿಗೆ ಮಾತ್ರ), ಲಾಕಿ ಫರ್ಗ್ಯೂಸನ್‌, ಮ್ಯಾಟ್ ಹೆನ್ರಿ, ಆಡಂ ಮಿಲ್ನೆ, ಡೇರಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಫ್ಸ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲೆ, ಇಶ್ ಸೋಧಿ, ಟಿಮ್ ಸೌಥಿ(ಪಾಕಿಸ್ತಾನ ಎದುರಿನ ಸರಣಿಗೆ ಮಾತ್ರ).
 

Follow Us:
Download App:
  • android
  • ios