ಕ್ರೈಸ್ಟ್‌ಚರ್ಚ್(ಮಾ.24)‍: ಟಾಮ್‌Christchurch ಲೇಥಮ್‌ರ ಆಕರ್ಷಕ ಶತಕ(110*)ದ ನೆರವಿನಿಂದ ಬಾಂಗ್ಲಾದೇಶ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ 5 ವಿಕೆಟ್‌ಗಳ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. 

ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ, ತಮೀಮ್‌ (78) ಹಾಗೂ ಮೊಹಮದ್‌ ಮಿಥುನ್‌ (73) ಬಾರಿಸಿದ ಅರ್ಧಶತಕಗಳ ನೆರವಿನಿಂದ 6 ವಿಕೆಟ್‌ಗೆ 271 ರನ್‌ ಕಲೆಹಾಕಿತು. 

ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕಿವೀಸ್‌ ಪಡೆ ಆರಂಭಿಕ ಆಘಾತ ಅನುಭವಿಸಿತಾದರೂ ಆ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುವ ತಂಡ ಗೆಲುವು ಹಳಿಗೆ ಮರಳಿತು. ಅಂತಿಮವಾಗಿ ನ್ಯೂಜಿಲೆಂಡ್‌ 48.2 ಓವರಲ್ಲಿ ಕೇವಲ 5 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಡೆವೊನ್‌ ಕಾನ್ವೆ 72 ರನ್‌ ಗಳಿಸಿ ಲೇಥಮ್‌ಗೆ ಉತ್ತಮ ಸಾಥ್‌ ನೀಡುವ ಮೂಲಕ ಕಿವೀಸ್‌ ಗೆಲುವಿಗೆ ನೆರವಾದರು.

ಕನ್ನಡಿಗನ ಅಬ್ಬರಕ್ಕೆ ಇಂಗ್ಲೆಂಡ್ ಧೂಳೀಪಟ; ಮೊದಲ ಏಕದಿನ ಭಾರತದ ಕೈವಶ!

ಬಾಂಗ್ಲಾ ವಿರುದ್ದ ಮೊದಲ ಏಕದಿನ ಪಂದ್ಯವನ್ನು ನ್ಯೂಜಿಲೆಂಡ್‌ 8 ವಿಕೆಟ್‌ಗಳಿಂದ ಜಯಿಸಿ ಸರಣಿಯಲ್ಲಿ ಶುಭಾರಂಭ ಮಾಡಿತ್ತು. ಇದೀಗ ಮೂರನೇ ಏಕದಿನ ಪಂದ್ಯ ಮಾರ್ಚ್‌ 26ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ಸ್ಕೋರ್‌: 
ಬಾಂಗ್ಲಾ 271/6 
ನ್ಯೂಜಿಲೆಂಡ್‌ 275/5